February 21, 2026

Newsnap Kannada

The World at your finger tips!

rupa

ಗಂಡನ ಎದುರಿನಲ್ಲೇ ಪತ್ನಿಯ ಕಿಡ್ನ್ಯಾಪ್ ! ತಾಯಿಂದಲೇ ಕೃತ್ಯ

Spread the love

ಮಗಳು ಪ್ರೀತಿಸಿ ವಿವಾಹ ಮಾಡಿಕೊಂಡ ಕಾರಣಕ್ಕಾಗಿ ತಾಯಿಯೇ ಮಗಳನ್ನು ಗಂಡನ ಎದುರಿನಲ್ಲಿ ಅಪಹರಿಸಿದ ಘಟನೆ ಶಿರಸಿಯ ಬಸವೇಶ್ವರ ನಗರದಲ್ಲಿ ಜರುಗಿದೆ.

ಮನೆಯೊಳಗಿದ್ದ ರುತಿಕಾ ಎಂಬ ವಿವಾಹಿತ ಯುವತಿಯನ್ನು ಆಕೆ ತಾಯಿ ರೂಪ ಹಾಗೂ ನಾಲ್ವರು ಮನೆಗೆ ನುಗ್ಗಿ ಆಕೆಯ ಮುಖಕ್ಕೆ ಮೆಣಸಿನ ಪುಡಿ ಎರಚಿ ರುತಿಕಾಳನ್ನು ಬಲವಂತವಾಗಿ ಕಾರಿನಲ್ಲಿ ಎತ್ತಿ ಹಾಕಿಕೊಂಡು ಪರಾರಿಯಾಗಿದ್ದಾರೆ.‌

ಪ್ರೀತಿಸಿ ಮದುವೆಯಾದ ಗಂಡನ ಎದುರಿನಲ್ಲಿ ಆತನ ಪತ್ನಿ ಯ ತಾಯಿ ದೌರ್ಜನ್ಯ ನಡೆಸಿದರೂ ಪತಿ ಮಾತ್ರ ಆಕೆಯ ನೆರವಿಗೆ ಬಂದಿಲ್ಲ.

ರುತಿಕಾಳ ತಾಯಿ ರೂಪಾ ಶಿರಸಿ ನಗರದಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದಾರೆ. ತನ್ನ ಮಗಳು ಪ್ರೀತಿಸಿ ಮದುವೆಯಾದದ್ದು ಇಷ್ಟ ಇರಲಿಲ್ಲ. ಈ ಕಾರಣಕ್ಕಾಗಿ ಸ್ವಂತ ಮಗಳನ್ನೇ ಅಪರಿಸಿರುವ ಶಂಕೆ ಇದೆ .
ಶಿರಸಿ ಬಸವೇಶ್ವರ ನಗರ ಠಾಣೆಯ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

error: Content is protected !!