February 21, 2026

Newsnap Kannada

The World at your finger tips!

suresh ang

ಸುರೇಶ್ ಅಂಗಡಿ ಕಿರಿಯ ಪುತ್ರಿ ಶ್ರದ್ದಾ ರಾಜಕೀಯಕ್ಕೆ ಪ್ರವೇಶ ?

Spread the love

ಶ್ರದ್ಧಾ ಶೆಟ್ಟರ್ ರಾಜಕೀಯಕ್ಕೆ ಎಂಟ್ರಿ ಕೊಡುವ ಲಕ್ಷಣಗಳು ನಿಚ್ಚಳವಾಗಿವೆ.

ಈಕೆಗೆ ರಾಜಕಾರಣದ ಬೆಂಬಲವೇ ಇದೆ. ಸುರೇಶ ಅಂಗಡಿ ಕಿರಿಯ ಪುತ್ರಿ ಹಾಗೂ ಈಕೆ ಸಚಿವ ಜಗದೀಶ್ ಶೆಟ್ಟರ್ ಸೊಸೆ ಪಟ್ಟವೆ ರಾಜಕೀಯ ಎಂಟ್ರಿ ಗೆ ಬಹು ದೊಡ್ಡ ಶ್ರೀರಕ್ಷೆಯಾಗಲಿದೆ.

suresh angadi

ತಂದೆ ಸುರೇಶ್ ಅಂಗಡಿ ಅಕಾಲಿಕ ನಿಧನದ ನಂತರ ಇದೇ ಮೊದಲ ಬಾರಿಗೆ ಪುತ್ರಿ ಶ್ರದ್ಧಾ ಶೆಟ್ಟರ್‌ ಬಹಿರಂಗ ಸಮಾರಂಭದಲ್ಲಿ ಕಾಣಿಸಿಕೊಂಡರು. ಇದು ಸಕ್ರಿಯ ರಾಜಕಾರಣಕ್ಕೆ ಎಂಟ್ರಿ ಕೊಡುವ ದಾರಿಗಳು.

ಶ್ರದ್ಧಾ ಶೆಟ್ಟರ್‌ ಬೆಳಗಾವಿ ಎಪಿಎಂಸಿ ಆವರಣದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆ ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಂಡರು.

ಕಾರ್ಯಕ್ರಮದ ನಂತರ ಲವಲವಿಕೆಯಿಂದ ಎಲ್ಲ ಕಡೆಗೂ ಓಡಾಡಿದ ಶ್ರದ್ಧಾ ಶೆಟ್ಟರ್‌ ರೈತರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿ ದರು. ಮಹಿಳಾ ರೈತರನ್ನು ಅಪ್ಪಿಕೊಂಡು ಯೋಗಕ್ಷೇಮ ವಿಚಾರಿಸುತ್ತಿರುವುದು ಗಮನ ಸೆಳೆಯಿತು.

ತಂದೆ ಸುರೇಶ ಅಂಗಡಿ ನಿಧನದ ನಂತರ ಯಾವ ಕಾರ್ಯಕ್ರಮದಲ್ಲಿಯೂ ಬಹಿರಂಗವಾಗಿ ಶ್ರದ್ಧಾ ಕಾಣಿಸಿಕೊಂಡಿರಲಿಲ್ಲ. ಈಗ ಕಾಣಿಸಿಕೊಂಡಿರುವುದು ಎಲ್ಲರಲ್ಲೂ ಕುತೂಹಲ ಮೂಡಿಸಿದೆ.

error: Content is protected !!