ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ನಟಿ , ಕನ್ನಡದ ಬೆಡಗಿ ರಶ್ಮಿಕಾ ಮಂದಣ್ಣಗೆ ಮೂರು ವರ್ಷಗಳ ನಂತರ ನಟ ರಕ್ಷಿತ್ ಶೆಟ್ಟಿ ನೆನಪಾಗಿದ್ದಾರೆ.
ನಿಶ್ಚಿತಾರ್ಥವಾಗಿ ಬ್ರೇಕಪ್ ಆದ ಬಳಿಕ ಇದೀಗ ನಟಿ ರಶ್ಮಿಕಾ ಮಂದಣ್ಣ, ನಟ ರಕ್ಷಿತ್ ಶೆಟ್ಟಿಯನ್ನು ನೆನಪು ಮಾಡಿಕೊಂಡಿರುವುದು ಅಚ್ಚರಿ ಹಾಗೂ ಕುತೂಹಲಕ್ಕೆ ಕಾರಣವಾಗಿದೆ.
ರಶ್ಮಿಕಾ ತನ್ನ ಹಳೆ ಗೆಳೆಯ ರಕ್ಷಿತ್ ಶೆಟ್ಟಿಯನ್ನು ನೆನಪು ಮಾಡಿಕೊಂಡಿರುವುದಕ್ಕೆ ರಕ್ಷಿತ್ ಪ್ರತಿಕ್ರಿಯಿಸಿ, ನಿನ್ನ ಕನಸು ನನಸಾಗಲಿ ಎಂದು ಹಾರೈಸಿದ್ದಾರೆ.
ರಶ್ಮಿಕಾ ನೆನಪಿಸಿಕೊಂಡಿದ್ದು ಹೇಗೆ?
ನಾನು ಇಂದು ಸ್ಟಾರ್ ನಟಿ ಆಗಿದ್ದೇನೆ ಅಂದರೆ ಕಿರಿಕ್ ಪಾರ್ಟಿ ಸಿನಿಮಾದ ‘ಬೆಳಗೆದ್ದು ಯಾರ ಮುಖವಾ’ ಹಾಡು….
ಈ ಹಾಡು 100 ಮಿಲಿಯನ್ ವೀವ್ಸ್ ದಾಟಿದೆ. ಈ ವಿಚಾರವನ್ನು ಮೊದಲು ರಕ್ಷಿತ್ ಶೆಟ್ಟಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡು ರಿಷಬ್ ಶೆಟ್ಟಿ ಹಾಗೂ ಅಜನೀಶ್ ಅನ್ನು ಟ್ಯಾಗ್ ಮಾಡಿದ್ದರು. ಈ ಬೆನ್ನಲ್ಲೇ ನಟಿ ರಶ್ಮಿಕಾ ಮಂದಣ್ಣ ಕೂಡ ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.
ನನ್ನ ಮೊಟ್ಟ ಮೊದಲ ಹಾಡು ಇದು ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ ರಕ್ಷಿತ್ ಶೆಟ್ಟಿಯನ್ನು ಕೂಡ ಟ್ಯಾಗ್ ಮಾಡಿ ಅಚ್ಚರಿ ಮೂಡಿಸಿದ್ದಾರೆ.
ಇಬ್ಬರ ಬ್ರೇಕಪ್ ಬಳಿಕ ರಶ್ಮಿಕಾ ಇದೇ ಮೊದಲ ಬಾರಿಗೆ ರಕ್ಷಿತ್ ಶೆಟ್ಟಿಯನ್ನು ಟ್ವಿಟ್ಟರ್ ನಲ್ಲಿ ಟ್ಯಾಗ್ ಮಾಡಿ ಬಹಿರಂಗವಾಗಿ ನೆನಪಿಸಿಕೊಂಡರು. ರಶ್ಮಿಕಾ ಅವರು ರಕ್ಷಿತ್ ನನ್ನು ನೆನಪು ಮಾಡಿಕೊಳ್ಳುತ್ತಿದ್ದಂತೆಯೇ ಅಭಿಮಾನಿಗಳು ಸಾಕಷ್ಟು ಕಾಮೆಂಟ್ ಮಾಡಿದ್ದಾರೆ. ಇಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗುತ್ತಿದ್ದಾರೆ.
- ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ದಂಪತಿ
- 2024-25ನೇ ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಆಹ್ವಾನ
- 10ನೇ ತರಗತಿ ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಅವಕಾಶ
- HMPV ವೈರಸ್ ಕರ್ನಾಟಕಕ್ಕೆ ಪ್ರವೇಶ: ಬೆಂಗಳೂರಿನಲ್ಲಿ 8 ತಿಂಗಳ ಮಗುವಿಗೆ ಸೋಂಕು ದೃಢ
- ಮಳೆ ನಿಂತರೂ ಮರದ ಹನಿ ನಿಲ್ಲದು
More Stories
ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ದಂಪತಿ
2024-25ನೇ ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಆಹ್ವಾನ
10ನೇ ತರಗತಿ ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಅವಕಾಶ