November 15, 2024

Newsnap Kannada

The World at your finger tips!

farmers 1

ದೆಹಲಿ ಚಲೋ ರೈತ ಹೋರಾಟಕ್ಕೆ ರಾಜ್ಯ ರೈತರ ಬೆಂಬಲ

Spread the love

ದೆಹಲಿ ಚಲೋ ರೈತರ ಹೋರಾಟಕ್ಕೆ ಕರ್ನಾಟಕದ ರೈತ, ದಲಿತ-ಕಾರ್ಮಿಕರ ಬೆಂಬಲ ಸಿಕ್ಕಿದೆ.

ದೆಹಲಿ ಕರ್ನಾಟಕ ಭವನದಲ್ಲಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ದೆಹಲಿ ಚಲೋ ರೈತರ ಪ್ರತಿಭಟನೆಯು ವಿಶ್ವದ ಗಮನಸೆಳೆದಿದೆ.
ಮೂರು ಕೃಷಿ ಕಾನೂನುಗಳ ವಾಪಸ್ಸಿಗೆ ರೈತರು ಒತ್ತಾಯಿಸಿದ್ದಾರೆ. ಆದರೆ
ಕಾರ್ಪೋರೇಟ್ ಪರವಾಗಿರುವ ಕೇಂದ್ರ ಸರ್ಕಾರ ಹಠಮಾರಿ ಧೋರಣೆ ಅನುಸರಿಸುತ್ತಿದೆ. ಕೇಂದ್ರದ ನಿಲುವು ಬದಲಾಗುವ ತನಕ ಹೋರಾಟ ನಡೆಯಲಿದೆ ಎಂದರು.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ನವೆಂಬರ್ 26ರಿಂದ ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ದಲಿತ ಸಂಘರ್ಷ ಸಮಿತಿ, ಕಾರ್ಮಿಕ ಮತ್ತು ಪ್ರಗತಿಪರ ಸಂಘಟನೆಗಳ ಐಕ್ಯ ಹೋರಾಟ ಸಮಿತಿ ಬೆಂಬಲ ಸೂಚಿಸಿದೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಕರ್ನಾಟಕದ ರೈತರು :

ದೆಹಲಿಯ ಸಿಂಗು ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಶುಕ್ರವಾರ ಪಾಲ್ಗೊಂಡ ಮುಖಂಡಿದ್ದರು.

ಕೇಂದ್ರ ಸರ್ಕಾರ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದರು. ಇನ್ನೇರೆಡು ದಿನಗಳ ಕಾಲ ದೆಹಲಿಯಲ್ಲಿಯೇ ಉಳಿಯಲಿರುವ ಮುಖಂಡರು ವಿವಿಧ ರೈತ ಮುಖಂಡರನ್ನು ಭೇಟಿ ಮಾಡಲಿದ್ದಾರೆ.

ದೆಹಲಿಯಲ್ಲಿ ನಡೆಯುತ್ತಿರುವ `ದೆಹಲಿ ಚಲೋ’ ಪ್ರತಿಭಟನೆಯಲ್ಲಿ ಭಾಗವಹಿಸಲು ಕರ್ನಾಟಕದಿಂದ ಸಾವಿರಾರು ಸಂಖ್ಯೆಯಲ್ಲಿ ರೈತರು ಪಾಲ್ಗೊಳ್ಳಲು ಸಾಧ್ಯವಾಗದಿರಬಹುದು. ಆದರೆ, ಈ ಕಾನೂನುಗಳ ವಿರುದ್ಧ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ. ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನು ಕೃಷಿ ಕಾನೂನು ವಾಪಸ್ಸು ಪಡೆಯಬೇಕೆಂದು ಒತ್ತಾಯಿಸುತ್ತಿದ್ದೇವೆ ಎಂದು ಪ್ರತಿಭಟನಾಕಾರರು ಹೇಳಿದರು.

ಕರ್ನಾಟಕದಲ್ಲಿ ರೈತ, ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಸಮನ್ವಯದಲ್ಲಿ ಐಕ್ಯ ಹೋರಾಟ ಸಮಿತಿಯನ್ನು ರಚಿಸಿಕೊಂಡಿದೆ ಪ್ರಬಲವಾದ ಚಳವಳಿಯನ್ನು ರೂಪಿಸಿದ್ದೇವೆ. ಸೆಪ್ಟೆಂಬರ್ ತಿಂಗಳಿಂದಲೂ ನಿರಂತರವಾಗಿ ಚಳವಳಿ ನಡೆಸುತ್ತಿದ್ದೇವೆ. ಜನ ಜಾಗೃತಿ ಮೂಡಿಸುವಲ್ಲೂ ನಿರತರಾಗಿದ್ದೇವೆ. ರಾಜಕೀಯ ಶಕ್ತಿಯಾಗಿ ಬೆಳೆಯಲು ಮತ್ತು ಪರ್ಯಾಯಗಳ ಬಗ್ಗೆ ಅರಿವು ಮೂಡಿಸುತ್ತಿರುವ ಪ್ರಯತ್ನವೂ ಸಾಗಿದೆ.

ಐಕ್ಯ ಹೋರಾಟ ಸಮಿತಿಯ ಅನೇಕ ಮುಖಂಡರು ದೆಹಲಿ ಚಲೋ ಪ್ರತಿಭಟನೆಯಲ್ಲಿ ಭಾಗವಹಿಸಿದ್ದೇವೆ. ಇನ್ನೆರೆಡು ದಿನಗಳ ಕಾಲ ಇಲ್ಲೇ ಇದ್ದು ಸ್ವರಾಜ್ ಇಂಡಿಯಾ ಪಕ್ಷದ ಮುಖಂಡ ಯೋಗೇಂದ್ರ ಯಾದವ್ ಸಹಿತ ಅನೇಕ ರೈತ ಮುಖಂಡರನ್ನು ಭೇಟಿ ಮಾಡಿ ಕರ್ನಾಟಕದ ರೈತರ ಬೆಂಬಲವನ್ನು ತಿಳಿಸಲಿದ್ದೇವೆ. ಕೃಷಿ ಕಾನೂನುಗಳ ಹಿಂಪಡೆಯಬೇಕೆಂದು ನಿರಂತರವಾಗಿ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದು ಬಡಗಲಪುರ ನಾಗೇಂದ್ರ, ದೆಹಲಿಯ ಪ್ರತಿಭಟನಾ ನಿರತ ರೈತ ಮುಖಂಡರಿಗೆ ವಾಗ್ದಾನ ನೀಡಿದರು.

ಐಕ್ಯ ಹೋರಾಟ ಸಮಿತಿ ಪ್ರಕಾಶ್ ಕಮ್ಮರಡಿ, ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ್, ನೂರ್ ಶ್ರೀಧರ್, ಬಿ.ಆರ್.ಪಾಟೀಲ್, ಚಾಮರಸ ಮಾಲಿ ಪಾಟೀಲ್, ಜಿ.ಟಿ.ರಾಮಸ್ವಾಮಿ, ಗುರುಪ್ರಸಾದ್ ಕೆರಗೋಡು, ಜಿ.ಟಿ.ನಾರಾಯಣಸ್ವಾಮಿ, ಕಾಳಪ್ಪ ಮುಂತಾದವರು ಹಾಜರಿದ್ದರು.

Copyright © All rights reserved Newsnap | Newsever by AF themes.
error: Content is protected !!