February 21, 2026

Newsnap Kannada

The World at your finger tips!

film,Apple Box,production

Apple Box Studios: A new film production company from actress Ramya ಆಪಲ್ ಬಾಕ್ಸ್ ಸ್ಟುಡಿಯೋಸ್ : ನಟಿ ರಮ್ಯಾರಿಂದ ಹೊಸ ಚಿತ್ರ ನಿರ್ಮಾಣ ಸಂಸ್ಥೆ

ಕಿಸಾನ್ ದಿನದ ನಿಮಿತ್ತ ಒಪ್ಪೊತ್ತು ಊಟ ತ್ಯಜಿಸಿದ ಮಾಜಿ ಸಂಸದೆ ರಮ್ಯಾ

Spread the love

ದಿಢೀರ್ ಎಂದು ರೈತರ ಪರವಾಗಿ ಕಾಳಜಿ ತೋರಿರುವ ಮಾಜಿ ಸಂಸದೆ, ನಟಿ ರಮ್ಯಾ ಕಿಸಾನ್ ದಿನದ ಅಂಗವಾಗಿ ಮಧ್ಯಾಹ್ನದ ಊಟವನ್ನು ತ್ಯಜಿಸಿದ್ದಾ ರಂತೆ.

ಇನ್ಸ್ಟಾ ಗ್ರಾಂನಲ್ಲಿ ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ರಮ್ಯಾ ಇಂದು ರೈತರ ದಿನಾಚರಣೆ. ರೈತರನ್ನು ಬೆಂಬಲಿಸಿ ತಾವು ಒಂದು ಹೊತ್ತಿನ ಊಟವನ್ನು ತ್ಯಜಿಸಿದ್ದೇನೆ ಎಂದು ಹೇಳಿದ್ದಾರೆ.

ಕೃಷಿ ಕಾಯ್ದೆ ವಿರೋಧಿಸಿ ಇಡೀ ರೈತ ಸಮೂಹ ಆಗಸ್ಟ್ 9 ರಿಂದ ದೆಹಲಿ ಬಳಿ ಮುಷ್ಕರ ನಡೆಸಿದ್ದರೂ ಕೇಂದ್ರದ ಬಿಜೆಪಿ ಸರ್ಕಾರ ರೈತರಿಗೆ ನ್ಯಾಯ ದೊರಕಿಸಿ ಕೊಡಲು ಸಾಧ್ಯವಾಗಲಿಲ್ಲ ಎಂದು ಟೀಕಿಸಿದ್ದಾರೆ.

ಇದು ಸೂಟ್ ಬೂಟಿನ ಸರ್ಕಾರ. ಕಾರ್ಪೋರೆಟ್ ಪರವಾಗಿರುವ ಈ ಸರ್ಕಾರ ರೈತರ ಹಿತ ಕಾಯುವಲ್ಲಿ ವಿಫಲವಾಗಿದೆ ಎಂದು ರಮ್ಯಾ ಹೇಳಿದ್ದಾರೆ.

error: Content is protected !!