ಇಂದಿನಿಂದಲೇ ರಾಜ್ಯದಲ್ಲಿ ಜ. 2 ತನಕ‌ ನೈಟ್ ಕರ್ಫೂ – ಸಿ ಎಂ ಘೋಷಣೆ

Team Newsnap
1 Min Read
  • ಕಫ್ಯೂ ವೇಳೆ ತುರ್ತು ಸೇವೆ:
    ತುರ್ತು ಸೇವೆಗಳಾದಂತ ಆಸ್ಪತ್ರೆ, ವೈದ್ಯಕೀಯ ಸೇವೆ, ಮೆಡಿಕಲ್ ಶಾಪ್ ಸೇರಿದಂತೆ ಇತರೆ ವ್ಯವಸ್ಥೆಗೆ ಮಾತ್ರ ರಾತ್ರಿ 10ರ ನಂತ್ರ ಬೆಳಿಗ್ಗೆ 6 ಗಂಟೆಯವರೆಗೆ ಅನುಮತಿ ನೀಡಲಾಗುತ್ತದೆ.
  • ಕರ್ಪೂ ವೇಳೆಯಲ್ಲಿ ಇವು ನಿ಼ಷಿದ್ಧ:
    ತುರ್ತು ಸೇವೆ ಹೊರತುಪಡಿಸಿ, ಪಬ್, ಬಾರ್ ಅಂಡ್ ರೆಸ್ಟೋರೆಂಟ್, ವೈನ್ ಶಾಪ್, ಸಾರಿಗೆ ಸಂಚಾರ ವ್ಯವಸ್ಥೆ ಸೇರಿದಂತೆ ಎಲ್ಲವೂ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಬಂದ್ ಆಗಲಿವ

ರಾಜ್ಯದಲ್ಲಿ ಕೋವಿಡ್-19 ಹೊಸ ರೂಪಾಂತರದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇಂದು ರಾತ್ರಿಯಿಂದಲೇ ಜನವರಿ 2ರವರೆಗೆ ನೈಟ್ ಕರ್ಪ್ಯೂ ಜಾರಿ ಬರಲಿದೆ.

ಈ ಕುರಿತಂತೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಸಿಎಂ ಯಡಿಯೂರಪ್ಪ ಇಂದು ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ರಾಜ್ಯದಲ್ಲಿ ಜ. 2 ರವರೆಗೆ ನೈಟ್ ಕರ್ಪ್ಯೂ ಜಾರಿಗೊಳಿಸಲಾಗುತ್ತಿದೆ ಎಂದು ವಿವರಿಸಿದರು.

ಇಂಗ್ಲೆಂಡ್ ನಿಂದ ಬಂದವರು ಕಡ್ಡಾಯವಾಗಿ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಈಗಾಗಲೇ ರಾಜ್ಯಕ್ಕೆ ಬಂದಿರುವ ಕೆಲವರನ್ನು ಪತ್ತೆ ಹಚ್ಚಿ, ಕೋವಿಡ್-19 ಸೋಂಕು ಪತ್ತೆಗಾಗಿ ಆರ್ ಟಿ-ಪಿಸಿಆರ್ ಮೂಲಕ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಆ ಮೂಲಕ ಹೊಸ ಕೊರೋನಾ ರೂಪಾಂತರದ ಅಲೆಯ ಬಗ್ಗೆ ಪರೀಕ್ಷೆ ನಡೆಸಲಾಗುತ್ತಿದೆ ಎಂದರು.

10 ಸಾವಿರ ಜನ ಬಂದಿಲ್ಲ ಡಾ ಸುಧಾಕರ್:

ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, ರಾಜ್ಯಕ್ಕೆ ಇಂಗ್ಲೆಂಡ್ ನಿಂದ ಬಂದಿರೋದು ಎರಡು ವಿಮಾನಗಳಲ್ಲಿ ಎರಡೂವರೆ ಸಾವಿರ ಜನರು ಮಾತ್ರ. ಆದರೆ ಕಾಂಗ್ರೆಸ್ ಮುಖಂಡರು ಹತ್ತು ಸಾವಿರಕ್ಕೂ ಹೆಚ್ಚು ಜನರು ಬಂದಿದ್ದಾರೆಂದು ಪ್ರಚಾರ. ಮಾಡುತ್ತಿದ್ದಾರೆಂದು ಹೇಳಿದರು.

ಹೊಸ ಕೊರೋನಾ ರೂಪಾಂತರದ ಕುರಿತಂತೆ ಕೈಗೊಳ್ಳಬಹುದಾದಂತ ಮುಂಜಾಗ್ರತಾ ಕ್ರಮಗಳು, ನೈಟ್ ಕರ್ಪ್ಯೂ ಸಂದರ್ಭದಲ್ಲಿನ ಮಾರ್ಗಸೂಚಿ ಕ್ರಮಗಳ ಬಗ್ಗೆ ಸಂಜೆಯೊಳಗೆ ಮಾರ್ಗಸೂಚಿ ಕ್ರಮಗಳನ್ನು ಬಿಡುಗಡೆಗೊಳಿಸಲಾಗುತ್ತದೆ ಎಂದು ಹೇಳಿದರು.

Share This Article
Leave a comment