February 21, 2026

Newsnap Kannada

The World at your finger tips!

ATH

ಸೋಲಿನ ಭೀತಿ : ಅಭ್ಯರ್ಥಿ ಆತ್ಮಹತ್ಯೆ

Spread the love

ಗ್ರಾಮ ಪಂಚಾಯತಿ ಮತದಾನ ದಿನವೇ ಅಭ್ಯರ್ಥಿಯೋರ್ವ ನೇಣಿಗೆ ಶರಣಾದ ಘಟನೆ ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ ನಡೆದಿದೆ.

ದಾಮೋದರ್ ಯಲಿಗಾರ್ ಆತ್ಮಹತ್ಯೆಗೆ ಶರಣಾದ ಗರಗ ಗ್ರಾಮದ 2ನೇ ವಾರ್ಡಿನ ಅಭ್ಯರ್ಥಿ.

ಚುನಾವಣೆಯಲ್ಲಿ ಸೋಲಿನ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ದಾಮೋದರ್ ಅ ವರ್ಗದಡಿ ಚುನಾವಣೆಗೆ ಸ್ಪರ್ಧೆ ಮಾಡಿದ್ದರು. ಘಟನೆಯ ಸುದ್ಧಿ ತಿಳಿಯುತ್ತಿದಂತೆ ಗ್ರಾಮಸ್ಥರು ಮನೆ ಮುಂದೆ ಸೇರಿದ್ದರು.
ಗರಗ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.

ಯಲಿಗಾರ್ ಬಿಜೆಪಿ ಕಾರ್ಯಕರ್ತ:

ದಾಮೋದರ ಯಲಿಗಾರ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರಾಗಿದ್ದರು. ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ್ ದೇಸಾಯಿ ಬೆಂಬಲಿಗರಾಗಿದ್ದ ದಾಮೋದರ್, ವಿಶಾಲ ಕೋ ಆಪರೇಟಿವ್ ಸೊಸೈಟಿಯಲ್ಲಿ ಪಿಗ್ಮಿ ಏಜೆಂಟ್ ಆಗಿದ್ದರು.

error: Content is protected !!