February 21, 2026

Newsnap Kannada

The World at your finger tips!

flight

ಇಂದಿನಿಂದ ಲಂಡನ್- ಭಾರತದ ನಡುವೆ ವಿಮಾನ ಸಂಚಾರ ಸ್ಥಗಿತ – ಕೇಂದ್ರ

Spread the love

ಲಂಡನ್‌ನಿಂದ ಭಾರತಕ್ಕೆ ಬರುವ ಎಲ್ಲಾ ವಿಮಾನಗಳ ಹಾರಾಟವನ್ನು ಕೇಂದ್ರ ಸರ್ಕಾರ ಇಂದಿನಿಂದ (ಡಿ. 22) ಡಿ. 31ರ ತನಕ ರದ್ದು ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಯುಕೆಯಿಂದ ಭಾರತಕ್ಕೆ ಬರುವ ವಿಮಾನಗಳ ಹಾರಾಟವನ್ನು ಡಿ. 22ರಿಂದ 31ರವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಅಂತ ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.

ಯುನೈಟೆಡ್ ಕಿಂಗ್ ಡಮ್ ನಲ್ಲಿ ಹೊಸ ಕೊರೊನಾ ವೈರಸ್ ನ ಹೊಸ ರೋಗಕುರಿತು ಕೇಂದ್ರ ಸರ್ಕಾರ ವು ಕಟ್ಟೆಚ್ಚರ ವಹಿಸುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್ ಹೇಳಿದ್ದಾರೆ.

ಯುಕೆಯಲ್ಲಿ ಕೊರೊನಾವೈರಸ್ ನ ಹೊಸ ತಳಿಯನ್ನು ಕಂಡು ಹಿಡಿದಿದ್ದಾರೆ. ಆತಂಕಪಡುವ ಅಗತ್ಯವಿಲ್ಲ ಎಂದು ಹರ್ಷವರ್ಧನ್ ಹೇಳಿದ್ದಾರೆ.

ಇನ್ನೂ ಇದೇ ವೇಳೆ ದೆಹಲಿ ಸಿಎಂ ಕ್ರೇಜಿವಾಲ್, ಲಂಡನ್‌ನಿಂದ ಭಾರತಕ್ಕೆ ಬರುವ ಎಲ್ಲಾ ವಿಮಾನಗಳ ಹಾರಾಟವನ್ನು ರದ್ದು ಮಾಡುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದರು.

error: Content is protected !!