ಉಜಿರೆ ಬಾಲಕನ ಅಪಹರಣಕ್ಕೆ 7 ಲಕ್ಷ ಸುಫಾರಿ – ಮಂಡ್ಯದ ಇಬ್ಬರ ಯುವಕರೂ ಸೇರಿ 6 ಮಂದಿ ಬಂಧನ

Team Newsnap
1 Min Read

ಉಜರೆ ಬಾಲಕ ಅಪಹರಣದಲ್ಲಿ ಮಂಡ್ಯ ಇಬ್ಬರು ಯುವಕರೂ ಸೇರಿ 21 ರಿಂದ 26 ವರ್ಷದೊಳಗಿ ತಂಡ 7 ಲಕ್ಷ ರು ಸುಫಾರಿ ಪಡೆದು ಅಪಹರಣ ಮಾಡಿತ್ತು ಎಂಬ ಸಂಗತಿ ಬಯಲಾಗಿದೆ

ಮಂಡ್ಯ ದ ರಂಜಿತ್( 21) ಹನುಮಂತ್ (22) ಮೈಸೂರಿನ ಗಂಗಾಧರ್ (25) ಬೆಂಗಳೂರಿನ ಕಮಲ್(23) ಅವರುಗಳು ಮಂಜುನಾಥ್ ( 25) ಎಂಬುವವರ ನೆರವಿನಿಂದ ಅಪಹರಣ ಮಾಡಿ ಕೋಲಾರದ ಮಹೇಶ್( 26) ಎಂಬಾತನ ಮನೆಯಲ್ಲಿ ಮಗುವನ್ನು ಬಚ್ಚಿ ಇಟ್ಟಿದ್ದರು ಎಂಬುದು ಬೆಳಕಿಗೆ ಬಂದಿದೆ.

ಬಾಲಕನ ಅಪಹರಣ ಮಾಡುವಂತೆ ವ್ಯಕ್ತಿಯೊಬ್ಬ ಈ 6 ಜನರಿಗೆ 7 ಲಕ್ಷ ರು ಸುಪಾರಿ ಕೊಟ್ಟ ವ್ಯಕ್ತಿ ಯಾರೆಂಬು ಇನ್ನೂ ಗೊತ್ತಾಗಿಲ್ಲ. ಆದರೆ ಬಾಲಕನ ತಂದೆಗೆ ಪರಿಚಯ ಇರುವ ವ್ಯಕ್ತಿ ಯೇ ಈ ಕೃತ್ಯ ಮಾಡಿದ್ದಾನೆ ಎಂಬುದು ಗೊತ್ತಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಲಕ್ಷ್ಮೀ ಪ್ರಸಾದ್ ತಿಳಿಸಿದರು.

ಬಾಲಕನ ಪತ್ತೆಗೆ ನಾಲ್ಕು ತಂಡಗಳನ್ನು ರಚಿಸಲಾಗಿತ್ತು. ಈ ಪೈಕಿ ಮಧುಗಿರಿಯತ್ತ ಶೋಧನೆಗೆ ಹೊರಟಿದ್ದ ತಂಡಕ್ಕೆ ಬಾಲಕನನ್ನು ಕೋಲಾರದಲ್ಲಿ ಬಚ್ಚಿ ಇಡಲಾಗಿದೆ ಎಂಬ ಮಾಹಿತಿ ಆಧರಿಸಿ 6 ಜನರನ್ನು ಬಂಧಿಸಲಾಯಿತು ಎಂದು ಹೇಳಿದರು.

ಬಾಲಕನ ತಂದೆ ಬಿಜೋಯ್ ನಾಲ್ಕು ವರ್ಷಗಳ ಹಿಂದೆ ಬೀಟ್ ಕಾಯಿನ್ ಖರೀದಿಸಿದ್ದರು. ಈಗ ಬೀಟ್ ಕಾಯಿನ್ ವಹಿವಾಟು ಲಾಭದಾಯಕ ಆಗುತ್ತದೆ ಎಂದು ಲೆಕ್ಕಾಚಾರ ಹಾಕಿ ಪರಿಚಯ ಇರುವ ವ್ಯಕ್ತಿ ಬಾಲಕನನ್ನು ಅಪಹರಣ ಮಾಡಿಸಿದ್ದಾನೆಂದು ತಿಳಿಸಿದರು.

Share This Article
Leave a comment