November 24, 2024

Newsnap Kannada

The World at your finger tips!

kodagu 2

10 ನೇ ವರ್ಷದ ಗನ್ ಕಾರ್ನಿವಲ್ ನಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ಮಹತ್ವದ ನಿರ್ಣಯ.

Spread the love

ಕಾವೇರಿ ತೀರದಲ್ಲಿ ವಿಜೖಂಭಿಸಿದ ಕೋವಿ ನಮ್ಮೆ – ಕೋವಿಗಳಿಗೆ ಪೂಜೆ ಸಲ್ಲಿಸಿದ ನಾಚಪ್ಪ.

ಮಡಿಕೇರಿ – ಸಿ.ಎನ್.ಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಆಶ್ರಯದಲ್ಲಿ ವಿಶ್ವ ಅಲ್ಪಸಂಖ್ಯಾತ ಜನಾಂಗದ ಹಕ್ಕುಗಳ ದಿನಾಚರಣೆ ಅಂಗವಾಗಿ ನಾಪೋಕ್ಲುವಿನ ಕೊಳಕೇರಿಯಲ್ಲಿರುವ ಅಪ್ಪಚ್ಚೀರ ರಮ್ಮಿ ನಾಣಯ್ಯನವರ ಕಾವೇರಿ ಎಸ್ಟೇಟ್ ಮೈದಾನದಲ್ಲಿ ವಾರ್ಷಿಕ ತೋಕ್ ನಮ್ಮೆ – ಗನ್ ಕಾರ್ನಿವಲ್ ನಡೆಯಿತು. ಆ ಸಂದರ್ಭದಲ್ಲಿ ಅಂಗೀಕರಿಸಲಾದ 12 ಮಹತ್ವದ ನಿರ್ಣಯಗಳು.

ಕೊಡವ ಬುಡಕಟ್ಟು ಕುಲದ ನಾಗರೀಕತೆ ಉಗಮವಾದಂದಿನಿಂದಲೂ ಆಯುಧಗಳು ಅವರ ಬದುಕಿನ ಅವಿಭಾಜ್ಯ ಅಂಗವಾಗಿದ್ದು, ಅದೊಂದು ಪರಂಪರೆಯಾಗಿಯೂ, ಜೀವನ ವಿಧಾನವಾಗಿಯೂ ಮುಂದುವರೆದಿದ್ದು, ಇದರ ಹಕ್ಕು ಮತ್ತು ರಕ್ಷಣೆ ಅಭಾದಿತವಾಗಿ ಮುಂದುವರೆಯಲು ರಾಜ್ಯಾಂಗ ಖಾತ್ರಿಗಾಗಿ ಹಲವು ಮಹತ್ವದ ನಿರ್ಣಯಗಳನ್ನು ಅಂಗೀಕರಿಸಲಾಯಿತು.

kodagu 1

ನಿರ್ಣಯ – 1
ಕೊಡವರನ್ನು ಎಸ್.ಟಿ. ಪಟ್ಟಿಗೆ ಸೇರಿಸಬೇಕೆಂದು ಸಿ.ಎನ್.ಸಿ. ಯ ದೀರ್ಘ ಕಾಲದ ಹಕ್ಕೋತ್ತಾಯವನ್ನು ಮನ್ನಿಸಿ 2020 ರ ಡಿಸೆಂಬರ್ 12 ರಂದು ಕೇಂದ್ರ ಸರ್ಕಾರ ಮಂಡಿಸಿದ ಎಸ್.ಟಿ. ಕಾನ್ಸಿಟ್ಯೂಷನ್ ಎಮೆಂಡ್‍ಮೆಂಟ್ ಮಸೂದೆಯ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಕೊಡವ ಬುಡಕಟ್ಟು ಕುಲವನ್ನು ಎಸ್.ಟಿ. ಪಟ್ಟಿಗೆ ಸೇರಿಸಿ ರಕ್ಷಿಸಬೇಕಿರುವ ತುರ್ತು ಅವಶ್ಯಕತೆ ಮನಮುಟ್ಟುವಂತೆ ರಾಜ್ಯಸಭೆಯಲ್ಲಿ ವಿಷಯ ಮಂಡನೆ ಮಾಡಿ ರಾಷ್ಟ್ರದ ಗಮನ ಮತ್ತು ಸರ್ಕಾರದ ಗಮನ ಸೆಳೆಯುವಲ್ಲಿ ಸಫಲರಾದ ರಾಜ್ಯಸಭೆಯ ಹಿರಿಯ ಸದಸ್ಯರಾದ ಶ್ರೀ ಬಿ.ಕೆ. ಹರಿಪ್ರಸಾದ್ ಮತ್ತು ರಾಜ್ಯಸಭೆಯ ಸದಸ್ಯರಾದ ಶ್ರೀ ಕುಪೇಂದ್ರರೆಡ್ಡಿಯವರಿಗೆ ಇಂದಿನ ಈ ಕೊಡವ ಗನ್ ಕಾರ್ನಿವಲ್ ವಿಶೇಷವಾದ ಗೌರವ ಮತ್ತು ಅಭಿನಂದನೆ ಸೂಚಿಸುವ ನಿರ್ಣಯ ಅಂಗೀಕರಿಸಲಾಯಿತು.
ವಿಷಯಸೂಚಿ :- ಈ ದೇಶದಲ್ಲೇ ಅತ್ಯುಚ್ಛ ಸಂಸ್ಕøತಿಯನ್ನು ಹೊಂದಿರುವ ವೈಭವೀಕರಿಸಲ್ಪಟ್ಟ ಬುಡಕಟ್ಟು ಕುಲವಾದ ಕೊಡವರನ್ನು ಎಸ್.ಟಿ. ಪಟ್ಟಿಗೆ ಸೇರಿಸಬೇಕೆಂದು ಶ್ರೀ ಹರಿಪ್ರಸಾದ್ ಮಾತನಾಡಿದರೆ; ದಿನೆ ದಿನೇ ಜನಸಂಖ್ಯೆ ಕುಸಿದು ವಿರಳರಾಗಿ, ಕ್ಷೀಣವಾಗಿ ಆಪತ್ತಿನಲ್ಲಿರುವ ಅಪರೂಪದ ಕೊಡವ ಸಮುದಾಯ ನೈಜ ಬುಡಕಟ್ಟು ಸಂಸ್ಕಾರದವರಾಗಿದ್ದು ಅವರನ್ನು ಎಸ್.ಟಿ. ಪಟ್ಟಿಗೆ ಸೇರಿಸುವ ಮೂಲಕ ಕೊಡವ ಲ್ಯಾಂಡ್ ಅಟೋನಮಸ್ ರೀಜನ್ ನೀಡಬೇಕೆಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಕಳೆದ ಮೂರು ದಶಕಗಳಿಂದ ಹೋರಾಟ ನಡೆಸುತ್ತಾ ಬಂದಿದ್ದು, ಕೊಡವರನ್ನು ಎಸ್.ಟಿ. ಪಟ್ಟಿಗೆ ಸೇರಿಸಿ ಅವರ ಸರ್ವಾಂಗೀಣ ವಿಕಾಸಕ್ಕೆ ಅಭ್ಯುದಯಕ್ಕೆ ನಾಂದಿ ಹಾಡಬೇಕೆಂದು ಶ್ರೀ ಕುಪೇಂದ್ರ ರೆಡ್ಡಿಯವರು ಪ್ರತಿಪಾದಿಸಿದರು. ಈ ಈರ್ವರು ಆಪದ್ಭಾಂದವ ಪಾರ್ಲಿಮೆಂಟ್ ಸದಸ್ಯರಿಗೆ ಸಿ.ಎನ್.ಸಿ. ಹೃದಯಸ್ಪರ್ಶಿಯಾದ ಕೃತಜ್ಞತೆ ಅರ್ಪಿಸುವುದರೊಂದಿಗೆ ಕೊಡವರ ಹಕ್ಕೋತ್ತಾಯದ ಔರಸತ್ವವನ್ನು ಪ್ರಜಾತಂತ್ರದ ಸರ್ವೋಚ್ಛ ದೇಗುಲವಾದ ಪಾರ್ಲಿಮೆಂಟ್‍ನಲ್ಲಿ ದಾಖಲಿಸಿದ್ದಕ್ಕಾಗಿ ನಾವು ಅಭಾರಿಯಾಗಿದ್ದೇವೆ.

ನಿರ್ಣಯ – 2
ಕೊಡವ ಬುಡಕಟ್ಟಿನ ಜೀವನ ಸಂಸ್ಕಾರವಾದ ಕೋವಿ-ತೋಕ್ ಅವರ ಬದುಕಿನ ಅವಿಭಾಜ್ಯ ಅಂಗವಾಗಿದ್ದು, ಅದನ್ನು ಎಲ್ಲಾ ಹಬ್ಬ-ಹರಿದಿನಗಳಲ್ಲಿ ಬಳಸುತ್ತಿದ್ದು, ಹುಟ್ಟು-ಸಾವುಗಳಲ್ಲಿ (ಜನನ-ಮರಣ) ಸಂಭ್ರಮಿಸುವ ಮತ್ತು ದುಃಖಿಸುವ ಸಂಕೇತವಾಗಿ ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಬಳಸುತ್ತಿದ್ದು, ಇದಕ್ಕೆ ಯಾವುದೇ ನಿರ್ಬಂಧ ಹೇರಬಾರದು. 10 ವರ್ಷಗಳವರೆಗೆ ಮಾತ್ರ ಮುಂದುವರೆಯುವಂತೆ ವಿನಾಯಿತಿಯನ್ನು ನಿರ್ಬಂಧಿಸಿರುವುದು ತಪ್ಪು ಅದನ್ನು ಕಿತ್ತು ಹಾಕಿ ಕೊಡವರಿಗೆ ಶಾಶ್ವತ ಬಂದೂಕು ವಿನಾಯಿತಿ ನೀಡಬೇಕು. ಅವರು ದೇಶಪ್ರೇಮಿಗಳಾಗಿ ಈ ದೇಶದ ರಕ್ಷಣಾಪಡೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ನೂರಾರು ವರ್ಷಗಳಿಂದಲು ಬಂದೂಕವನ್ನು ಎಲ್ಲಿಯೂ ದುರುಪಯೋಗ ಮಾಡಲಿಲ್ಲವೆಂದು ಶ್ರೀ ಬಿ.ಕೆ. ಹರಿಪ್ರಸಾದ್‍ರವರು ಡಿಸೆಂಬರ್ 12 ರಂದು ರಾಜ್ಯಸಭೆಯಲ್ಲಿ “ಆಮ್ರ್ಸ್ ಆ್ಯಕ್ಟ್” ಎಮೆಂಡ್‍ಮೆಂಟ್ ಬಿಲ್ಲ್ ಮೇಲಿನ ಚರ್ಚೆಯಲ್ಲಿ ಮಾತನಾಡುವುದರ ಮೂಲಕ ಸರ್ಕಾರ ಮತ್ತು ದೇಶದ ಜನತೆಗೆ ಸಂದೇಶ ನೀಡುವುದರ ಮೂಲಕ ಪಾರ್ಲಿಮೆಂಟ್ ಮತ್ತು ಸರ್ಕಾರ ಕೊಡವ ಜನಾಂಗವನ್ನು ಗೌರವಿಸಬೇಕೆಂದು ಪ್ರತಿಪಾದಿಸಿದರು. ಹರಿಪ್ರಸಾದ್‍ರವರ ಈ ನಡೆಯು ನಮ್ಮ ಅಂತಃಕರಣ ಕಲಕಿದೆ. ಸರ್ಕಾರ ಇಂದು 2029 ರವರೆಗೆ ಮಾತ್ರ ಬಂದೂಕ ವಿನಾಯಿತಿ ಮುಂದುವರೆಸಿರುವುದನ್ನು ಕಿತ್ತು ಹಾಕಿ ಸೂರ್ಯ-ಚಂದ್ರ ಇರುವಲ್ಲಿಯವರೆಗೆ ಶ್ರೀ ಹರಿಪ್ರಸಾದ್ ಪ್ರತಿಪಾದಿಸಿದಂತೆ, ಕೊಡವರ ಕೋವಿಯ ಹಕ್ಕು ಅಭಾದಿತವಾಗಿ ಮುಂದುವರೆಸುವಂತೆ ನಿರ್ಣಯ ಅಂಗೀಕರಿಸಲಾಯಿತು.

ನಿರ್ಣಯ – 3
ಕೊಡವ ಬುಡಕಟ್ಟು ಕುಲವನ್ನು ತುರ್ತಾಗಿ ಸಂವಿಧಾನದ 340-342 ನೇ ವಿಧಿಯಂತೆ ಎಸ್.ಟಿ. ಪಟ್ಟಿಗೆ ಸೇರಿಸಿ ಅಳಿವಿನಂಚಿನಲ್ಲಿರುವ ಅಪರೂಪದ ಕೊಡವ ಕುಲವನ್ನು ರಕ್ಷಿಸಿ, ಪೋಷಿಸಿ, ಸಬಲೀಕರಣಗೊಳಿಸಬೇಕೆಂದು ಒತ್ತಾಯಿಸುವ ನಿರ್ಣಯ ಅಂಗೀಕರಿಸಲಾಯಿತು.

ನಿರ್ಣಯ – 4
ಕೊಡವ ನಾಗರಿಕತೆ ಉಗಮವಾದಂದಿನಿಂದಲೂ ತಮ್ಮ ಬದುಕಿನ ಅವಿಭಾಜ್ಯ ಅಂಗವಾಗಿ ಬಳಸುತ್ತಾ ಬಂದಿರುವ ಆಯುಧವನ್ನು (ಅಂದು ಬಿಲ್ಲು-ಬಾಣ, ಈಟಿ-ಭರ್ಜಿ, ಇಂದು ತೋಕ್(ಬಂದೂಕ)-ಒಡಿಕತ್ತಿ) ನಿರಂತರವಾಗಿ ಪೂಜಿಸುವ ಪದ್ದತಿಯನ್ನು ಮುಂದಿನ ಪೀಳಿಗೆಯು ಮುಂದುವರಿಸಿಕೊಂಡು ಹೋಗುವಂತೆ ಯುವ ಜನಾಂಗಕ್ಕೆ ಪ್ರೇರಣೆ ಮೂಡಿಸಬೇಕೆಂದು ನಿರ್ಣಯಿಸಲಾಯಿತು.

ನಿರ್ಣಯ – 5
ಕೊಡವ ಕ್ಷಾತ್ರ ಬುಡಕಟ್ಟು ವಿಶ್ವದÀ ಗರ್ಭಗುಡಿಯಾದ “ನೆಲ್ಲಕ್ಕಿ”ಯಡಿಯಲ್ಲಿ ಪ್ರಧಾನ ಸ್ಥಾನ ಪಡೆದಿರುವ ಆಯುಧ-ಬಂದೂಕವು ಕೊಡವರ ಧಾರ್ಮಿಕ ಮತ್ತು ಸಾಂಸ್ಕøತಿಕ ಲಾಂಛನವಾಗಿದ್ದು ಅದನ್ನು ಸರಕಾರ ಮಾನ್ಯ ಮಾಡಿ ಗೌರವಿಸಬೇಕೆಂದು ಒತ್ತಾಯಿಸಿ ನಿರ್ಣಯ ಕೈಗೊಳ್ಳಲಾಯಿತು.

ನಿರ್ಣಯ – 6
ಇಂಡಿಯನ್ ಆಮ್ರ್ಸ್ ಆ್ಯಕ್ಟ್ ಪ್ರಕಾರ ಕೊಡವರ ಜನಪದೀಯ ಕಾಯ್ದೆಯ ಆಧಾರದಲ್ಲಿ ಕೊಡಮಾಡಲಾಗಿರುವ ಬಂದೂಕ ವಿನಾಯತಿ ಹಕ್ಕನ್ನು ಸರ್ಕಾರ ದುರ್ಭಲಗೊಳಿಸುವುದಾಗಲಿ- ಕಸಿದುಕೊಳ್ಳುವುದಾಗಲಿ ಮಾಡಕೂಡದು. ಆ ವಿಶೇಷ ಹಕ್ಕು ಅಭಾದಿತವಾಗಿ ಮುಂದುವರಿಯಬೇಕೆಂದು ನಿರ್ಣಯಿಸಲಾಯಿತು. ಅಲ್ಲದೆ ವಿದೇಶಿ ನುಸುಳುಕೋರ ರ್ಯಾಡಿಕಲ್ ಭಯೋತ್ಪಾದಕರು ಹಾಗೂ ನಕ್ಸಲ್ ಮಾವೋವಾದಿ ರಾಷ್ಟ್ರದ್ರೋಹಿಗಳು ಕೊಡಗಿನೊಳಗೆ ಮುಕ್ತವಾಗಿ ರಾಜಾರೋಷದಿಂದ ನಿರ್ಭಯವಾಗಿ ಓಡಾಡಲು ಅವಕಾಶ ನೀಡುವ ಸಲುವಾಗಿಯೂ ಅವರಿಗೆ ಬೆಂಗಾವಲಾಗಿ ನಿಂತಿರುವ ಕರ್ನಾಟಕದ ಎಡವಕ್ರ ಬುದ್ದಿಜೀವಿ ಭಯೋತ್ಪಾದಕರು ಅಧಿಕಾರ ಶಾಹಿಯೊಂದಿಗೆ ಸೇರಿ ಕೊಡವರಿಗೆ ಮಾನಸಿಕ ಸ್ಥೈರ್ಯ ಮತ್ತು ನೈತಿಕ ಭದ್ರತೆ ನೀಡಿರುವ ಕೋವಿ ವಿನಾಯಿತಿ ಪತ್ರವನ್ನು (ಕೊಡವರ ಕೋವಿ ವಿನಾಯಿತಿಯ ಹಕ್ಕು ಸಹಜವಾಗಿ ರಾಷ್ಟ್ರದ್ರೋಹಿ ಭಯೋತ್ಪಾದಕರಲ್ಲಿ ತಲ್ಲಣ ಉಂಟುಮಾಡಿದೆ.) ಸಕಾಲದಲ್ಲಿ ಕೊಡವರಿಗೆ ನೀಡುವಲ್ಲಿ ವಿಳಂಬದ್ರೋಹದ ಪಾತಕಕ್ಕೆ ಪಿತೂರಿ ನಡೆಸಿದ್ದು, ಅದರಿಂದ ಸಾವಿರಾರು ಎಕ್ಸಂಪ್ಷÀನ್ ಪತ್ರ ಕೋರಿದ ಅರ್ಜಿಗಳು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಕೊಳೆಯುತ್ತಾ ಬಿದ್ದಿದ್ದು, ಇದು ಅಧಿಕಾರಶಾಹಿಯಿಂದ ನಡೆದ ಕಾನೂನು ಬಾಹಿರ ಕೃತ್ಯವಾಗಿದ್ದು, ಒಡನೇ ತಡೆಹಿಡಿಯಲ್ಪಟ್ಟ ಕೊಡವರ ಎಕ್ಸಂಪ್ಷನ್ ಸರ್ಟಿಫಿಕೇಟನ್ನು ಸಲೀಸಾಗಿ ಫಲಾನುಭವಿ ಕೊಡವರಿಗೆ ನೀಡಬೇಕೆಂದು ನಿರ್ಣಯಿಸಲಾಯಿತು.

kodagu3

ನಿರ್ಣಯ – 7ಕೊಡವ-ಕೊಡವತಿಯರು ಇಂಡಿಯನ್ ಆಮ್ರ್ಸ್ ಆ್ಯಕ್ಟ್ ಪ್ರಕಾರ ಕೋವಿ ಹೊಂದಿಕೊಳ್ಳಲು ವಿನಾಯತಿ ಪತ್ರಕ್ಕಾಗಿ ಕಾಲಕಾಲಕ್ಕೆ ಕೊಡವರೆನ್ನುವ ಗುರುತು ಚೀಟಿಯ ಆಧಾರದಲ್ಲಿ ಅವರೆಲ್ಲೇ ನೆಲಸಿರಲಿ ಅವರು ಅರ್ಜಿ ಸಲ್ಲಿಸುವುದಕ್ಕಾಗಿ ಕಾಯದೆ ಮತ್ತು ಅವರಿಂದ ಅದನ್ನು ನಿರೀಕ್ಷಿಸದೆ ಇಂಡಿಯನ್ ಆಮ್ರ್ಸ್ ಆ್ಯಕ್ಟ್‍ನ ವಿನಾಯತಿಯ ಫಲ ಅವರಿಗೆ ನೇರವಾಗಿ ತಲುಪುವಂತೆ ಒಬ್ಬ ವಿಶೇಷ ಅಧಿಕಾರಿಯನ್ನು ನೇಮಿಸಿ ಆ ಮೂಲಕ ದಿನನಿತ್ಯ ಕೊಡವ – ಕೊಡವತಿಯರಿಗೆ SUಔ-ಒಔಖಿU ತಾವಾಗಿಯೇ ವಿನಾಯತಿ ಪತ್ರ ನೀಡುವ ಪದ್ದತಿ ಮುಂದುವರಿಸುವ ವ್ಯವಸ್ಥೆ ಕಲ್ಪಿಸಬೇಕು. ಈ ಕಾರ್ಯಕ್ರಮ “ಏಕ ಗವಾಕ್ಷಿ” ಮುಖಾಂತರ ನಡೆಯಬೇಕು. ಆ ಮೂಲಕ ಇಲ್ಲಿಯತನಕ ಆಗಿ ಹೋದ ವಿಳಂಬ ದ್ರೋಹದ ಕ್ರೌರ್ಯ ಮತ್ತು ಶೋಷಣೆ ಕೊನೆಗಾಣಿಸಬೇಕೆಂದು ಒತ್ತಾಯಿಸುವ ನಿರ್ಣಯ ಕೈಗೊಳ್ಳಲಾಯಿತು, ಹಾಗೂ ಬಡತನದಲ್ಲಿರುವ ಕುಟುಂಬದ ಎಲ್ಲಾ ಸದಸ್ಯರೂ ವಿನಾಯಿತಿ ಪತ್ರ ಹೊಂದಿದ್ದರೂ ಪ್ರತ್ಯೇಕ ಪ್ರತ್ಯೇಕ ಬಂದೂಕ ಖರೀದಿಸಲು ಅವರುಗಳಿಗೆ ತ್ರಾಣವಿಲ್ಲದ ಕಾರಣ ಕುಟುಂಬದ ಮುಖ್ಯಸ್ಥ ಹೊಂದಿರುವ ಒಂದು ಬಂದೂಕವನ್ನೇ ವಿನಾಯಿತಿ ಪತ್ರ ಹೊಂದಿರುವ ಕುಟುಂಬದ ಪ್ರತಿಯೊಬ್ಬ(ಎಲ್ಲಾ) ಸÀದಸ್ಯರು ಬಳಸಿಕೊಳ್ಳಲು ಅವಕಾಶ ರೂಪಿಸಬೇಕೆಂದು ನಿರ್ಣಯಿಸಲಾಯಿತು

ನಿರ್ಣಯ – 8
ಕೊಡವ ಮಹಿಳೆಯರು ಅದರಲ್ಲೂ ಎಳೆಯ ಪ್ರಾಯದ ಹುಡುಗಿಯರನ್ನು ಜಾಗೃತಿಗೊಳಿಸಿ ಕೆಲವು ಅಸ್ಥಿತ್ವರಹಿತ ಹಾದಿ ತಪ್ಪಿದ ಅಪರಾಧಿಗಳಿಂದ ಅವರ ಮೇಲಾಗುತ್ತಿರುವ ದೌರ್ಜನ್ಯದ ಕುರಿತುಅರಿವಿಕೆ ಮೂಡಿಸಿ ಅದನ್ನು ಸಮರ್ಪಕವಾಗಿ ಎದುರಿಸಲು ಇಂಡಿಯನ್ ಆಮ್ರ್ಸ್ ಆ್ಯಕ್ಟ್‍ನಲ್ಲಿ ಬಂದೂಕ ಹೊಂದಲು ಕೊಡವರಿಗಿರುವ ವಿಶೇಷ ವಿನಾಯತಿ ಪತ್ರದ ಸದ್ಬಳಿಕೆ ಪಡೆದು ಸಾಹಸದಿಂದ ತಮ್ಮ ಆತ್ಮ ರಕ್ಷಣೆ ಮಾಡಿಕೊಳ್ಳಲು ಬಂದೂಕ ಅನಿವಾರ್ಯ ಅವಶ್ಯವೆಂಬುದನ್ನು ಪ್ರತಿಪಾದಿಸಿ ತುರ್ತಾಗಿ ಅದರ ಫಲಾನುಭವಿಗಳಾಗಬೇಕೆಂದು ನಿರ್ಣಯ ಕೈಗೊಳ್ಳಲಾಯಿತು.

ನಿರ್ಣಯ – 9
ಕೊಡವ ತಂದೆ-ತಾಯಂದಿರು ತಮ್ಮ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಡುವ ಸಂದರ್ಭ ಮದುವೆಗೆ ಮುನ್ನ ನಡೆಯುವ “ಪುಟ್ಟಿದುಂಬ್‍ಚಿಡುವ” ಮಂಗಳ ಕಾರ್ಯದಲ್ಲಿ ಸೀರೆ-ರವಿಕೆಯೊಂದಿಗೆ ಒಂದು ಬಂದೂಕ (ಕೋವಿ-ತೋಕ್) ಮತ್ತು ಎಕ್ಸಮ್‍ಸನ್ ಸರ್ಟಿಪಿಕೇಟ್‍ನ್ನು (ವಿನಾಯತಿ ಪತ್ರ) ಕೂಡಾ ಬಳುವಳಿಯಾಗಿ ತಮ್ಮ ಮಗಳಿಗೆ ನೀಡುವ ಶುಭಮಂಗಳಕರ ಪದ್ದತಿ ರೂಢಿಸಿಕೊಳ್ಳಬೇಕೆಂದು ಸಲಹೆ ನೀಡುವ ನಿರ್ಣಯ ಕೈಗೊಳ್ಳಲಾಯಿತು.

ನಿರ್ಣಯ – 10

ಇಂದಿನ ಬದಲಾದ ಕಾಲಘಟ್ಟದಲ್ಲಿ ಯುದ್ದ ಮತ್ತು ಬೇಟೆ ನಿಷಿದ್ದವಾಗಿರುವುದರಿಂದ ಸಮರಕಲಾ ವೀರರಾದ ಕೊಡವರಿಗೆ ಶೌರ್ಯ, ಸಾಹಸ ಮತ್ತು ಪರಾಕ್ರಮವನ್ನುಜೀವಂತವಾಗಿ ಇರಿಸಿಕೊಳ್ಳಲು –ಅದರ ತಾಲೀಮು ಮುಂದುವರಿಸಲುಹಾಗೂ ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡಲು ಮತ್ತು ನಮ್ಮ ಸಂಸ್ಕøತಿಯ ಭಾಗವಾಗಿ ಮುಂದುವರಿಸುತ್ತಾ ಲೋಕಕ್ಕೆ ಮತ್ತು ಸರಕಾರಕ್ಕೆ ಕಾಲಕಾಲಕ್ಕೆ ಬಂದೂಕದ ಮಹತ್ವ ಮತ್ತು ಅದರೊಂದಿಗಿನ ಆಧ್ಯಾತ್ಮಿಕ-ಪಾರಮಾರ್ಥಿಕ ಶಕ್ತಿಯನ್ನುತಿಳಿಸುವ ನಿಟ್ಟಿನಲ್ಲಿ ಮದುವೆ ಸಮಾರಂಭದಲ್ಲಿ ಕಡ್ಡಾಯವಾಗಿ ಗಾಳಿಯಲ್ಲಿ ಬಾನಿಗೆ(ಆಕಾಶಕ್ಕೆ)ಗುಂಡು ಹೊಡೆಯುವ ಪದ್ದತಿಯನ್ನು ಅಳವಡಿಸಿಕೊಳ್ಳಬೇಕೆಂದು ನಿರ್ಣಯಿಸಲಾಯಿತು.

ನಿರ್ಣಯ – 11
ಕೊಡವರು ಬಂದೂಕವನ್ನು ಹೊಂದುವ ವಿಚಾರದಲ್ಲಾಗಲಿ ಅವರಿಗೆ ನೀಡಲಾಗಿರುವ ವಿನಾಯತಿ ಪತ್ರದ ವಿಚಾರದಲ್ಲಾಗಲಿ ಸಂಬಂಧಿಸಿದವರು ಅನಾವಶ್ಯ ತಂಟೆ ಮಾಡುವುದನ್ನು ಸಂವಿಧಾನದ 25 ಮತ್ತು 26ರ ವಿಧಿಯಂತೆ ನೀಡಲಾಗಿರುವ ಕೊಡವರ ಧಾರ್ಮಿಕ ಸ್ವಾತಂತ್ರ್ಯದ ಸ್ಪಷ್ಟ ಉಲ್ಲಂಘನೆಯೆಂದು ಸರಕಾರಕ್ಕೆ ಎಚ್ಚರಿಕೆ ನೀಡುವ ನಿರ್ಣಯ ಕೈಗೊಳ್ಳಲಾಯಿತು.

ನಿರ್ಣಯ – 12
ಅಂತೆಯೇ ಕೊಡವರು ಕೋವಿ ಹೊಂದಲಿರುವ ವಿಶೇಷ ವಿನಾಯತಿ ಹಕ್ಕಿನ ಕುರಿತು ಅದನ್ನು ದುರ್ಬಲಗೊಳಿಸಲು ಸರಕಾರದ ವಿಫಲ ಯತ್ನದ ಭಯಜನಕ ಪ್ರವೃತ್ತಿಯ ಕುರಿತು ಕೊಡವರು ಸದಾ ಜಾಗೃತರಾಗಿರಬೇಕೆಂದು ನಿರ್ಣಯ ಅಂಗೀಕರಿಸಲಾಯಿತು.

ಕೊಡವ ಯೋಧ ಬುಡಕಟ್ಟು ವಿಶ್ವದ ಕೊಡವರ ‘ನೆಲ್ಲಕ್ಕಿ’ಯಡಿಯಲ್ಲಿ ಪೂಜ್ಯ ಸ್ಥಾನ ಪಡೆದಿರುವ ಅವರ ಸಾಂಸ್ಕøತಿಕ ಮತ್ತು ಧಾರ್ಮಿಕ ಲಾಂಛನವಾಗಿರುವ ಕೋವಿಯು ಕೊಡವರ ಬದುಕಿನ ಅವಿಭಾಜ್ಯ ಅಂಗವಾಗಿದ್ದು, ಅದಕ್ಕಿರುವ ವಿನಾಯಿತಿಯ ಮಹತ್ವದ ಕುರಿತು ಪ್ರಚುರ ಪಡಿಸುವ ಸಲುವಾಗಿಯೂ, ಪ್ರಾಚೀನ ಯೋಧ ಪರಂಪರೆಯ ಮತ್ತು ಜನಪದೀಯ ಮಹತ್ವದ ದ್ಯೋತಕದ ಅನಾವರಣಗೊಳಿಸುವ ಸಲುವಾಗಿಯೂ ಮತ್ತು ನಮ್ಮ ಪಾರಂಪರ್ಯ ಹಕ್ಕು, ಮೂಲಭೂತ ಹಕ್ಕು, ಜನ್ಮಸಿದ್ದ ಹಕ್ಕು ಮತ್ತು ಸಂವಿಧಾನಿಕ ಹಕ್ಕಿನ ಕುರಿತು ಸದಾ ಜಾಗೃತರಾಗಿರಲು ಈ ಬಂದೂಕ ಉತ್ಸವವನ್ನು–ತೋಕ್ ನಮ್ಮೆ- ಗನ್ ಕಾರ್ನಿವಲ್ ಸಿಎನ್‍ಸಿ ಆಯೋಜಿಸುತ್ತಾ ಬಂದಿದ್ದು, ಕೊಳಕೇರಿಯಲ್ಲಿರುವ ಅಪ್ಪಚ್ಚೀರ ರಮ್ಮಿ ನಾಣಯ್ಯರವರ ಕಾವೇರಿ ಎಸ್ಟೇಟ್ ಮೈದಾ£ದಲ್ಲಿ ಇಂದು ಸಾಕಷ್ಟು ಪ್ರಮಾಣದ ಬಂದೂಕಗಳ ಪ್ರದರ್ಶನ ಮತ್ತು ಅವುಗಳಿಗೆ ಸಾಮೂಹಿಕ ಪೂಜೆ ನಡೆಯಿತು.

ಕಾವೇರಿ ನದಿ ದಂಡೆಯಲ್ಲಿರುವ ಕಾವೇರಿ ಎಸ್ಟೇಟ್ ಮೈದಾನದಲ್ಲಿ ಶ್ರದ್ಧಾ-ಭಕ್ತಿ-ಗೌರವಗಳಿಂದ ಎಲ್ಲಾ ಬಂದೂಕಗಳಿಗೂ ಸಾಮೂಹಿಕ ಪೂಜೆಯನ್ನು ಸಿ.ಎನ್.ಸಿ. ಮುಖಂಡ ಎನ್.ಯು. ನಾಚಪ್ಪನವರ ನೇತೃತ್ವದಲ್ಲಿ ನೆರವೇರಿಸಲಾಯತು. ಕೋವಿಯ – ಆಯುಧದ ಕುರಿತಾದ ಜನಪದೀಯ ತೋಕ್ ಪಾಟನ್ನು ನುಡಿಸಲಾಯಿತು.

ಗುಂಡು ಹೊಡೆಯುವ ಸ್ಪರ್ಧೆಯನ್ನು ಪುರುಷರಿಗೆ, ಮಹಿಳೆಯರಿಗೆ ಮತ್ತು ಮಕ್ಕಳಿಗೆ ಪ್ರತ್ಯೇಕವಾಗಿ ಆಯೋಜಿಸಲಾಗಿತ್ತು. ಗುಂಡು ಹೊಡೆಯುವ ಸ್ಪರ್ಧೆಯ ನಂತರ ಸಭಾ ಕಾರ್ಯಕ್ರಮ ನಡೆಯಿತು. ಗುಂಡು ಹೊಡೆಯುವ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಆ ನಂತರ ಕೊಡವ ಸಾಂಪ್ರದಾಯಿಕ ಅಡುಗೆಯ ಊಟೋಪಚಾರವನ್ನು ಭಾಗವಹಿಸಿದವರಿಗೆ ಉಣಬಡಿಸಲಾಯಿತು. ಅಂತಿಮವಾಗಿ ಎಲ್ಲರೂ ಮಾನವ ಸರಪಳಿ ಮೂಲಕ ಕೊಡವ ಲ್ಯಾಂಡ್ ಕೇಂದ್ರಾಡಳಿತ ಪ್ರದೇಶ ಮತ್ತು ಕೊಡವ ಬುಡಕಟ್ಟು ಕುಲಕ್ಕೆ ರಾಜ್ಯಾಂಗ ಖಾತ್ರಿಗಾಗಿ ಸಿ.ಎನ್.ಸಿ.ಯ ಧೀರೋದ್ದಾತ ಹೋರಾಟಕ್ಕೆ ಸಮರ್ಪಿಸಿಕೊಳ್ಳುವ ಪ್ರತಿಜ್ಞೆಯನ್ನು ಸೂರ್ಯ-ಚಂದ್ರರ ಸಾಕ್ಷಿಯಾಗಿ ಸ್ವೀಕರಿಸಿದರು. ..

Copyright © All rights reserved Newsnap | Newsever by AF themes.
error: Content is protected !!