ಫೇಸ್ ಬುಕ್ ಟು ಬಸವನಬಾಗೇವಾಡಿ ತನಕ ಜೊತೆ- ಜೊತೆಯಲ್ಲೇ ಪಯಣ …..ಇಲ್ಲಿಂದ ಪರಾರಿ, ಅಲ್ಲಿ ಪತ್ತೆ

Team Newsnap
2 Min Read

ವಿವಾಹಿತ ಮಹಿಳೆ ಮತ್ತು ರಮೇಶ್ ಕಳೆದ 4 ವರ್ಷಗಳ ಹಿಂದೆ ಫೇಸ್​ಬುಕ್​ನಲ್ಲಿ ಪರಿಚಯವಾದರು. ಪರಿಚಯ ಲೌವ್ ಹಂತಕ್ಕೆ ಬಂತು. ಆದರೆ ಆಕೆ ವಿವಾಹಿತ ಮಹಿಳೆ. ಪರ್ವಾಗಿಲ್ಲ ಗಂಡನಿಗಿಂತ ಗೆಳೆಯನೇ ಮುಖ್ಯ ಎಂದು ಆಕೆ ನವೆಂಬರ್ 30 ಗೆಳೆಯನೊಂದಿಗೆ ಪರಾರಿಯಾದಳು.

ಟಿ ನರಸೀಪುರದಲ್ಲಿ ಫೇಸ್ ಬುಕ್ ಮೂಲಕ ಪರಿಚಯವಾಗಿದ್ದ ಗೆಳೆಯನೊಂದಿಗೆ ಈಕೆ ಈಗ ಬಸವನಬಾಗೇವಾಡಿಯಲ್ಲಿ ಪತ್ತೆಯಾಗಿದ್ದಾರೆ ಇಬ್ಬರು!

ಈ ವಿವಾಹಿತ ಮಹಿಳೆ ತನ್ನ ಪ್ರೇಮಿ ರಮೇಶ್ ಜೊತೆ ಹೋಗಲು ನಿರ್ಧರಿಸಿದಳು. ಆತನನ್ನು ನರಸೀಪುರಕ್ಕೆ ಕರೆಸಿಕೊಂಡು ನಂತರ ಇಬ್ಬರು ಪರಾರಿಯಾಗಿದ್ದರು.
ಪತ್ನಿ ಕಾಣೆಯಾದ ಬಗ್ಗೆ ಪತಿ ನವೆಂಬರ್ 30 ರಂದು ಪೋಲಿಸರಿಗೆ ದೂರು ನೀಡುತ್ತಾನೆ.

ಅಸಲಿಗೆ ನಡೆದಿದ್ದು ಏನು?:


ಮೈಸೂರು ಜಿಲ್ಲೆಯ ತಿ.ನರಸೀಪುರದ ನಟರಾಜು ತಮ್ಮ ಪತ್ನಿ ಕಾಣೆಯಾಗಿ ದ್ದಾಳೆಂದು ದೂರು ನೀಡಿದ ಮೇಲೆ 15 ದಿನಗಳ ನಂತರ ಆ ಮಹಿಳೆ ವಿಜಯಪುರದ ಬಸವನ ಬಾಗೇವಾಡಿಯಲ್ಲಿ ಪ್ರಿಯಕರನೊಂದಿಗೆ ಪತ್ತೆಯಾಗಿದ್ದಾಳೆ. ನನಗೆ ಪತಿ ಬೇಡ, ಪ್ರೇಮಿ ಬೇಕು ಎನ್ನುತ್ತಿದ್ದಾಳೆ ಎಂದು ಹಠ ಹಿಡಿದ್ದಾಳಂತೆ ಎಂದು ಪೋಲೀಸರು ತಿಳಿಸಿದ್ದಾರೆ.

5 ವರ್ಷವಾದರೂ ಮಕ್ಕಳಿಲ್ಲ:


ಟಿ.ನರಸೀಪುರದಲ್ಲಿ ಟೀ ಕ್ಯಾಂಟೀನ್ ಮಾಲೀಕ ಎಸ್.ನಟರಾಜು ಕಳೆದ 5 ವರ್ಷಗಳ ಹಿಂದೆ ಮದುವೆಯಾಗಿದ್ದರು. ಈ ದಂಪತಿಗಳಿಗೆ ಮಕ್ಕಳಾಗಿರಲಿಲ್ಲ. ಈಕೆಗೆ ಫೇಸ್ ಬುಕ್ ನಲ್ಲಿ ಪರಿಚಯವಾದ ಗೆಳೆಯ ರಮೇಶ್ ನೊಂದಿಗೆ ಹೋಗಲು ನಿರ್ಧಾರಗಳನ್ನು ಮಾಡಿ ಪರಾರಿಯಾದಳು.

ಪತ್ತೆಗೆ ಮೊಬೈಲ್ ಟವರ್ ಬಳಕೆ:

ದೂರು ದಾಖಲು ಮಾಡಿಕೊಂಡ ಪೋಲಿಸರು ಮೊಬೈಲ್ ಟವರ್ ಮೂಲಕ ಗೃಹಿಣಿಯನ್ನು ಪತ್ತೆ ಹಚ್ಚಿದರು. ಆಕೆ ಬಿಜಾಪುರದ ಬಸವನ ಬಾಗೇವಾಡಿಯಲ್ಲಿ ತನ್ನ ಪ್ರಿಯಕರ ರಮೇಶ್ ಎಂಬಾತನೊಂದಿಗೆ ಇರುವುದು ಗೊತ್ತಾಗಿದೆ ನಂತರ ಪ್ರೇಮಿಗಳಿಬ್ಬರನ್ನು ತಿ.ನರಸೀಪುರ ಪಟ್ಟಣ ಪೊಲೀಸ್​ ಠಾಣೆಗೆ ಕರೆತಂದು ವಿಚಾರಣೆ ಮಾಡಿದಾಗ ಫೇಸ್ ಬುಕ್ ಪ್ರೀತಿ ಬಹಿರಂಗವಾಗಿದೆ.

ಬಯಸಿ ಹೋಗಿದ್ದೇನೆ…..

ನಟರಾಜು ನನ್ನನ್ನು ಮದುವೆ ಆದಾಗಿ ನಿಂದ ಚೆನ್ನಾಗಿ ನೋಡಿಕೊಂಡಿಲ್ಲ. ನನ್ನ ಬೇಕು ಬೇಡಿಕೆಗಳನ್ನು ಈಡೇರಿಸಲು ಒಪ್ಪಲಿಲ್ಲ. ಕೊನೆಗೆ ನಾನೇ ಬಯಸಿ ರಮೇಶ್ ಜೊತೆಗೆ ಹೋಗಲು ನಿರ್ಧರಿಸಿದೆ ಎಂದು ಮಹಿಳೆ‌ ಪೊಲೀಸರಿಗೆ ತಿಳಿಸಿದ್ದಾರೆ. ಈ ವಿವಾಹಿತೆಯನ್ನು ಪೊಲೀಸರು ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳುಹಿಸಲು ಚಿಂತನೆ ನಡೆಸಿದ್ದಾರೆ.

ಮುಂದೆ ಪೋಲಿಸರು ಯಾವ ಕ್ರಮ ಜರುಗಿಸುತ್ತಾರೋ ಕಾದು ನೋಡಬೇಕು.

Share This Article
Leave a comment