- ಹಿರಿಯ ಮನೆಯಲ್ಲಿ ಸಣ್ಣತನ, ದೊಡ್ಡ ಗಲಾಟೆ, ರಾಜ್ಯದ ಮಾನ ಮರ್ಯಾದೆ ಹರಾಜು
- ಸಭಾಪತಿಗಳ ಸಭೆಗೆ ಬರದಂತೆ ತಡೆದ ಬಿಜೆಪಿ ಸದಸ್ಯರು
- ಸಭಾಪತಿ ಪೀಠದಲ್ಲಿ ಕುಳಿತ ಇಬ್ಬರು ಸದಸ್ಯರು.
- ಉಪ ಸಭಾಪತಿಯನ್ನು ಪೀಠದಿಂಧ ಎಬ್ಬಿಸಿ ದ ಕಾಂಗ್ರೆಸ್ ಸದಸ್ಯರು
- ವಿಧಾನ ಪರಿಷತ್ ನ ಬಾಗಿಲು ಒದ್ದು ಗಲಾಟೆಗೆ ಪ್ರಚೋದನೆ ಮಾಡಿ ಕಾಂಗ್ರೆಸ್ ಸದಸ್ಯರು.
- ಸದಸ್ಯರು ನೆಲದಲ್ಲಿ ಹೊರಳಾಡಿ ಗಲಾಟೆ ಮಾಡಿದ ಸದಸ್ಯರು
- ರಾಜ್ಯಪಾಲರ ಭೇಟಿಗೆ ಬಿಜೆಪಿ ಸದಸ್ಯರ ದಂಡು ರಾಜಭವನಕ್ಕೆ
ಗೋ ಹತ್ಯೆ ನಿಷೇಧ ಕಾಯ್ದೆ ಮತ್ತು ವಿಧಾನ ಪರಿಷತ್ ನ ಸಭಾಪತಿಗಳ ಅವಿಶ್ವಾಸ ನಿರ್ಣಯ ಮಂಡಿಸಲು ಬಿಜೆಪಿ ರೂಪಿಸಿದ್ದ ಕಾರ್ಯ ತಂತ್ರ ವಿಧಾನ ಪರಿಷತ್ ವಿಫಲವಾಗಿದೆ.
ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಿರುವ ಹಿನ್ನೆಲೆಯಲ್ಲಿ ಉಪ ಸಭಾಪತಿ ಸಭೆಯ ಅಧ್ಯಕ್ಷತೆ ವಹಿಸಬೇಕು ಎಂಬ ವಿಷಯವೇ ಬಿಜೆಪಿ ಕಾಂಗ್ರೆಸ್ ಸದಸ್ಯರ ಜಟಾಪಟಿಗೆ ಕಾರಣವಾಯಿತು.
ಈ ವಿಷಯಕ್ಕೆ ಆರಂಭವಾದ ಮಾತಿನ ಚಕಮಕಿ ಕೊನೆಗೆ ತಳ್ಳಾಟ, ನೂಕಾಟ ದಿಂದ ಬಾರೀ ಗಲಾಟೆ, ಗದ್ದಲದಿಂದಾಗಿ ಬುದ್ಧಿವಂತರ ಮನೆ ಎಂದು ಕರೆಸಿಕೊಳ್ಳುವ ವಿಧಾನ ಪರಿಷತ್ ಹೇಯಕರ ಸಂಗತಿಗಳಿಗೆ ಸಾಕ್ಷಿಯಾಯಿತು.
ಯಾವುದೇ ಚರ್ಚೆಗಳಿಲ್ಲದೆ ಗೋ ಹತ್ಯೆ ನಿಷೇಧ ಕಾನೂನನ್ನು ವಿಧಾನ ಸಭೆಯಲ್ಲಿ ಸಲೀಸಾಗಿ ಅನುಮೋದನೆ ಪಡೆದ ರಾಜ್ಯ ಬಿಜೆಪಿ ಸರ್ಕಾರಕ್ಕೆ ವಿಧಾನ ಪರಿಷತ್ ನಲ್ಲಿ ಒಪ್ಪಿಗೆ ಪಡೆಯಲು ತಿಣುಕಾಟ ನಡೆಸಿದೆ.
ಕೈಗೆ ಸಿಕ್ಕ ವಸ್ತುಗಳನ್ನು ಎಸೆದು ಆಕ್ರೋಶ:
ಸಭಾಧ್ಯಕ್ಷ ಪೀಠದಲ್ಲಿದ್ದ ವಸ್ತುಗಳನ್ನು ಕೆಲ ಸದಸ್ಯರು ಎಸೆದು ಪೇಪರ್ ಹರಿದಾಕಿದರು ಎನ್ನಲಾಗಿದೆ. ತೀರಾ ಮಾರ್ಷಲ್ ಗಳು ಪರಿಸ್ಥಿತಿ ನಿಯಂತ್ರಿಸುವ ಮಟ್ಟಕ್ಕೆ ಬೆಳವಣಿಗೆಗಳಾಯಿತು. ಏನೇ ಆದರೂ ವಾತಾವರಣ ತಿಳಿಗೊಳ್ಳದ ಕಾರಣ ಸಭಾಧ್ಯಕ್ಷ ಪ್ರತಾಪ್ ಚಂದ್ರಶೆಟ್ಟಿ ಅವರು ಸದನವನ್ನು ಅನಿರ್ಧಿಷ್ಟವಧಿ ಸಮಯಕ್ಕೆ ಮುಂದೂಡಿದರು.
ಗೋ ಹತ್ಯೆ ನಿಷೇಧ ಕಾಯ್ದೆಗೆ ವಿಧಾನ ಪರಿಷತ್ ನಲ್ಲಿ ಅನುಮತಿ ಪಡೆಯುವ ಬಿಜೆಪಿಗೆ ಹಿನ್ನಡೆಯಾಗಿದೆ.
ಆದರೆ ಬಿಜೆಪಿ- ಜೆಡಿಎಸ್ ಸದಸ್ಯರು ಸಭಾಪತಿಯವರನ್ನು ಪದಚ್ಯುತ ಗೊಳಿಸುವ ಕುರಿತಂತೆ ಒಟ್ಟಾರೆ ಬದ್ಧತೆಯನ್ನು ತೋರಿದರು.
- ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
- ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ
- ದರ್ಶನ್ ಮಧ್ಯಂತರ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಲು ತೀರ್ಮಾನ
- ನ.20ರಂದು ಕರ್ನಾಟಕದಲ್ಲಿ ಬಾರ್ ಬಂದ್
- ಮಂಡ್ಯದ ಕಾರ್ಮೆಲ್ ಕಾಲೇಜಿನ ಪ್ರಥಮ, ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ
More Stories
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಆಯೋಧ್ಯೆ ರಾಮಮಂದಿರಕ್ಕೆ ಸ್ಫೋಟದ ಬೆದರಿಕೆ: ಆರ್ಡಿಎಕ್ಸ್ ಬಳಸಿ ಧ್ವಂಸಗೊಳಿಸುವ ಎಚ್ಚರಿಕೆ
ವಿಧಾನಸಭೆ ಉಪಚುನಾವಣೆ: ನ. 13 ರಂದು ರಾಜ್ಯ ಸರ್ಕಾರದಿಂದ ವೇತನ ಸಹಿತ ರಜೆ ಘೋಷಣೆ