November 16, 2024

Newsnap Kannada

The World at your finger tips!

iphone

ಐಫೋನ್‌ ಘಟಕದ ಮೇಲೆ ದಾಳಿ 7 ಸಾವಿರ ಮಂದಿ ವಿರುದ್ಧ ಎಫ್ ಐಆರ್ – 437 ಕೋಟಿ ಲಾಸ್

Spread the love

ಕೋಲಾರದ ವೇಮಗಲ್ ಸಮೀಪದ ಲ್ಲಿರುವ ವಿಸ್ಟ್ರಾನ್ ಕಂಪನಿಯ ಐಫೋನ್ ಮೊಬೈಲ್ ಅಸ್ಲೆಂಬ್ಲಿಂಗ್ ಘಟಕದಲ್ಲಿ ಕಳೆದ ಶನಿವಾರ ನೌಕರರ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರ ಹಾಗೂ ದಾಂಧಲೆ ಪ್ರಕರಣದ ಆರೋಪದ ಮೇಲೆ 7 ಸಾವಿರ ಜನರ ವಿರುದ್ಧ ಕೇಸ್​​ ದಾಖಲಾಗಿದೆ. ಅಲ್ಲದೆ 437 ಕೋಟಿ ರುಗಳ ಒಟ್ಟು ನಷ್ಟ ಸಂಭವಿಸಿದೆ.

ವಿಸ್ಟ್ರಾನ್​​​​ ಘಟಕದಲ್ಲಿ ನೌಕರರು ಕಳೆದ ಮೂರು ತಿಂಗಳಿನಿಂದ ನಮಗೆ ವೇತನ ನೀಡಿಲ್ಲ ಅಂತ ಆಕ್ರೋಶ ಗೊಂಡು ಕಚೇರಿ ಮೇಲೆ ಕಲ್ಲು ತೂರಾಟ ನಡೆಸಿ ಪೀಠೋಪಕರಣಗಳಿಗೆ ಬೆಂಕಿ ಇಟ್ಟು, ಐಫೋನ್ ಕಂಪ್ಯೂಟರ್​​ ಸೇರಿದಂತೆ ಹಲವು ವಸ್ತುಗಳನ್ನು ಒಡೆದು ಹಾಕಿದ್ದರು.

437 ಕೋಟಿ ರು ನಷ್ಟ:

ಈಗ ವಿಸ್ಟ್ರಾನ್ ಸಂಸ್ಥೆ ಪ್ರತಿಭಟನೆ ವೇಳೆ ಘಟಕದಲ್ಲಿ ಸಾವಿರಾರು ಐಫೋನ್​ಗಳ ಲೂಟಿಯಾಗಿದೆ. ಕಚೇರಿ ಧ್ವಂಸ ವಾಗಿ 437 ಕೋಟಿ ರು. ನಷ್ಟ ಉಂಟಾಗಿದೆ ಎಂದು ಪೊಲೀಸ್ ಹಾಗೂ ಕಾರ್ಮಿಕ ಇಲಾಖೆಗೆ ಕಂಪನಿ ಅಧಿಕಾರಿಗಳು ದೂರು ನೀಡಿದ್ದಾರೆ.

2 ಸಾವಿರ ಅಪರಿಚಿತರು:

5000 ಗುತ್ತಿಗೆ ನೌಕರರು ಹಾಗೂ ಇತರೆ 2 ಸಾವಿರ ಅಪರಿಚಿತ ವ್ಯಕ್ತಿಗಳ ವಿರುದ್ಧ ಕೋಲಾರದ ವೇಮಗಲ್ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕೊಳ್ಳಲಾಗಿದೆ. ಈ ಘಟನೆ ಕುರಿತು ಆಯಪಲ್ ಸಂಸ್ಥೆ ಕೂಡ ತನಿಖೆ ಆರಂಭಿಸಿದೆ.

1200 ಮಂದಿ ಖಾಯಂ ನೌಕರರು :

ರಾಜ್ಯ ಸರ್ಕಾರದ ಮಾಹಿತಿ ಯಂತೆ ಕಳೆದ ಮೂರು ತಿಂಗಳಿನಿಂದ ವಿಸ್ಟ್ರಾನ್ ಕಂಪನಿ ಹಾಗೂ ಗುತ್ತಿಗೆ ನೌಕರರ ನಡುವೆ ಜಟಾಪಟಿ ನಡೆಯುತ್ತಿತ್ತು. ವಿಸ್ಟ್ರಾನ್ ತನ್ನ ಕೋಲಾರ ಘಟಕಕ್ಕೆ 8,900 ಜನರನ್ನು ನೇಮಿಸಿಕೊಳ್ಳಲು ಆರು ಅಂಗ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಇದರ ಜೊತೆಗೆ ಕಂಪನಿಯಲ್ಲಿ 1200 ಖಾಯಂ ನೌಕರರಿದ್ದಾರೆ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ.

ವಿಸ್ಟ್ರಾನ್ ಸಂಸ್ಥೆ, ಗುತ್ತಿಗೆದಾರರು ಹಾಗೂ ನೌಕರರ ನಡುವೆ ಸಂವಹನ ಕೊರತೆಯಿಂದ ಈ ಗಲಾಟೆ ನಡೆದಿದೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.

ವಿಸ್ಟ್ರಾನ್ ಸಂಸ್ಥೆ ಗುತ್ತಿಗೆದಾರರಿಗೆ ವೇತನದ ಹಣ ನೀಡಿತ್ತು, ಆದ್ರೆ ಅವರು ನೌಕರರಿಗೆ ಸಂಬಳ ನೀಡಿಲ್ಲ ಎಂಬುದು ನಮಗೆ ತಿಳಿದುಬಂದಿರುವ ಮಾಹಿತಿ, ಈ ಬಗ್ಗೆ ಪರಿಶೀಲನೆ ಮಾಡ್ತಿದ್ದೇವೆ ಎಂದು ಅವರು ಹೇಳಿದ್ದಾರೆ. ನೌಕರರ ಬಾಕಿ ಸಂಬಳವನ್ನು ಮೂರು ದಿನಗಳ ಒಳಗಾಗಿ ಪಾವತಿಸುವಂತೆ ವಿಸ್ಟ್ರಾನ್​ಗೆ ನೋಟಿಸ್​ ನೀಡಿರುವುದಾಗಿ ಸಚಿವ ಹೆಬ್ಬಾರ್​ ಹೇಳಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!