ಬೆಂಗಳೂರಿನ ಕೋರಮಂಗಲದ ಆರ್ ಟಿ ಒ ಕಚೇರಿಯ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಹಣದ ಮಳೆ ಸುರಿದಿದೆ.
ಈ ವೇಳೆ ಕಿಟಕಿಗಳಿಂದ ಹೊರ ಹಾಕಿದ ಹಣವನ್ನು ಕೆಳಗಿದ್ದ ಅಂಗಡಿ ಹಾಗೂ ಫುಟ್ ಪಾತ್ ನಲ್ಲಿ ನಿಂತಿದ್ದ ಜನರು ಆಯ್ಕೆ ಮಾಡಿಕೊಂಡು ಧನ್ಯವಾದರು.
ಎಸಿಬಿ ಅಧಿಕಾರಿಗಳು ದಾಳಿ ಮಾಡುತ್ತಿದ್ದಾರೆ ಎಂಬ ವಿಷಯ ತಿಳಿಯುತ್ತಿದ್ದಂತೆ ಕಚೇರಿಯಲ್ಲಿದ್ದಂತಹ ಸಿಬ್ಬಂದಿಗಳು ಕಿಟಕಿಯ ಮೂಲಕ ಹಣ ಹೊರ ಎಸೆದಿದ್ದಾರೆ.
ಸಿಬ್ಬಂದಿಗಳು ಹೀಗೆ ಎಸೆದಿದ್ದೇ ತಡ, ಕಿಟಕಿಯಿಂದ ಬಿದ್ದ ಹಣವನ್ನು ನಾ ಮುಂದು, ತಾ ಮುಂದೆ ಅಂತ ಜನರು ಬಾಚಿಕೊಂಡಿದ್ದಾರೆ.
ಕೋರಮಂಗಲದ ಆರ್ ಟಿ ಒ ಕಚೇರಿಯಲ್ಲಿ ವಾಹನ ನೊಂದಣಿ, ಚಾಲನಾ ಪರವಾನಗಿ ವಿತರಣೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿರುವುದಾಗಿ ಎಸಿಬಿಗೆ ದೂರುಗಳು ಬಂದಿದ್ದವು.
ಬೆಂಗಳೂರು ವಿಭಾಗದ ಎಸ್ ಪಿ ಕುಲದೀಪ್ ಆರ್ ಜೈನ್ ನೇತೃತ್ವದ ಎಸಿಬಿ ಅಧಿಕಾರಿಗಳ ತಂಡ, ಕಚೇರಿಯ ಮೇಲೆ ದಿಢೀರ್ ದಾಳಿ ನಡೆಸಿದ್ದರು.
5 ಲಕ್ಷ ನಗದು ವಶ
ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದ ಅಧಿಕಾರಿಗಳು ದಾಳಿ ಮಾಡಿ ಕೈಗೆ 5.96 ಲಕ್ಷ ನಗದು ಹಣ ಸಿಕ್ಕಿದ್ದು ವಶಪಡಿಸಿಕೊಂಡಿದ್ದಾರೆ.ದಾಖಲೆಗಳ ಕೊಠಡಿ, ಅಧಿಕಾರಿಗಳ ಕೊಠಡಿ, ಕಚೇರಿ ಪಕ್ಕದ ಖಾಸಗಿ ಅಂಗಡಿ ಸೇರಿದಂತೆ ಹಲವು ಕಡೆಗಳಲ್ಲಿ ಲಂಚದ ಹಣವನ್ನು ಬಚ್ಚಿಟ್ಟಿರುವುದನ್ನು ತನಿಖಾ ತಂಡ ಪತ್ತೆಮಾಡಿದೆ.
ಆರ್‌ಟಿಒ ಕಚೇರಿಯ ಒಳಗಡೆ ಇದ್ದ ನಾಲ್ವರು ಖಾಸಗಿ ಮಧ್ಯವರ್ತಿಗಳು ಹಾಗೂ ಅಕ್ರಮದಲ್ಲಿ ಶಾಮೀಲಾದ ಶಂಕೆ ಇರುವ ಇಬ್ಬರು ಅಧಿಕಾರಿಗಳನ್ನು ಎಸಿಬಿ ತಂಡ ವಶಕ್ಕೆ ಪಡೆದು, ವಿಚಾರಣೆ ನಡೆಯುತ್ತದೆ.
- ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ದಂಪತಿ
- 2024-25ನೇ ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಆಹ್ವಾನ
- 10ನೇ ತರಗತಿ ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಅವಕಾಶ
- HMPV ವೈರಸ್ ಕರ್ನಾಟಕಕ್ಕೆ ಪ್ರವೇಶ: ಬೆಂಗಳೂರಿನಲ್ಲಿ 8 ತಿಂಗಳ ಮಗುವಿಗೆ ಸೋಂಕು ದೃಢ
- ಮಳೆ ನಿಂತರೂ ಮರದ ಹನಿ ನಿಲ್ಲದು
More Stories
ಕಾನ್ಸ್ಟೇಬಲ್ ನೇಮಕಾತಿ ದೈಹಿಕ ಪರೀಕ್ಷೆ: ಓಟದ ವೇಳೆ ಬಿದ್ದ ಯುವಕನ ದುರ್ಮರಣ
ಸಂಕ್ರಾಂತಿ ಬಳಿಕ ಬಸ್ ಟಿಕೆಟ್ ದರ ಏರಿಕೆ ಸಾಧ್ಯತೆ
ಹೊಸ ವರ್ಷದ ಸಂಭ್ರಮ: KSBCLನಿಂದ ಒಂದೇ ದಿನ 308 ಕೋಟಿ ರೂ. ಮದ್ಯ ಮಾರಾಟ