ಐಟಿ ಬಿಟಿ ಉದ್ಯೋಗಿಗಳಿಗೆ ಸಧ್ಯಕ್ಕೆ ವಕ್೯ ಫ್ರಂ ಹೋಂ- ಡಿಸಿಎಂ ಅಶ್ವಥ್

Team Newsnap
1 Min Read

ಐಟಿ ಕಂಪನಿಗಳು ಕಚೇರಿಯನ್ನು ಶೀಘ್ರ ತೆರೆಯುವ ಅಗತ್ಯವಿಲ್ಲ. ಸಧ್ಯಕ್ಕೆ ವರ್ಕ್ ಫ್ರಂ ಹೋಂ ವ್ಯವಸ್ಥೆ ತುಂಬಾ ಸುರಕ್ಷಿತ. ಹೀಗಾಗಿ ಇನ್ನೂ ಕೆಲವು ತಿಂಗಳುಗಳ ಕಾಲ ಯಥಾ ಸ್ಥಿತಿ ಮುಂದುವರೆಸಿ ಎಂದು ಉಪ ಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಗುರುವಾರ ವಿಧಾನಸಭೆ ಯಲ್ಲಿ ತಿಳಿಸಿದರು.

ಹೊಸಕೋಟೆಯ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ ಈ ಕೊರೊನಾ ಸಾಂಕ್ರಾಮಿಕ ರೋಗ ಕಡಿಮೆಯಾದ ನಂತರ ಪರಿಸ್ಥಿತಿ ನೋಡಿಕೊಂಡು ಐಟಿ-ಬಿಟಿ ಕಂಪೆನಿಗಳೇ ಕಚೇರಿಗಳನ್ನು ತೆರೆಯಲಿವೆ. ಸದ್ಯದ ಪರಿಸ್ಥಿತಿಯಲ್ಲಿ ಇನ್ನೂ ಕೂಡ ಉದ್ಯೋಗಿಗಳು ಕಚೇರಿಗೆ ಹೋಗಿ ಕೆಲಸ ಮಾಡಬಹುದಾದ ವಾತಾವರಣವಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು.

ಐಟಿ ಬಿಟಿಯವರಿಗೆ ಕಚೇರಿಗಳನ್ನು ಆರಂಭಿಸಿ ಎಂದು ಸದ್ಯದ ಪರಿಸ್ಥಿತಿಯಲ್ಲಿ ಕಡ್ಡಾಯ ಮಾಡಲು ಸಾಧ್ಯವಿಲ್ಲ, ಅದರ ಬದಲು ಉದ್ಯೋಗಿಗಳು ತಾವಿರುವಲ್ಲಿಂದಲೇ ಅಥವಾ ತಮ್ಮ- ತಮ್ಮ ಮನೆಗಳಿಂದ ಕೆಲಸ ಮಾಡುವ ಸೌಲಭ್ಯವನ್ನು ಇನ್ನು ಕೆಲ ತಿಂಗಳುಗಳ ಮಟ್ಟಿಗೆ ಮುಂದೂಡುವಂತೆ ಸೂಚಿಸುತ್ತೇವೆ ಎಂದರು.

ಈ ನಡುವೆ ಶಾಸಕ ಗಣಪತಿ ಭಟ್ ಮಾಡಿ ಐಟಿ ಬಿಟಿ ಕಂಪನಿಗಳ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡಿದರೆ ಟ್ಯಾಕ್ಸಿ, ಕಾರು ಇತ್ಯಾದಿ ವಾಹನ ನೌಕರರಿಗೆ, ಕ್ಯಾಂಟೀನ್ ಸೌಲಭ್ಯ ನೀಡುವ ನೌಕರರಿಗೆ ತೊಂದರೆ ಆಗಲಿದೆ ಎಂದು ಹೇಳಿದರೂ ಸಹ ಡಿಸಿಎಂ ಅಶ್ವತ್ಥ ನಾರಾಯಣ ಮಾತ್ರ ಸರ್ಕಾರದ ನಿಲುವನ್ನು ಈ ಹಂತದಲ್ಲಿ ಬದಲಿಸಲು ಆಗದು ಎಂದ ಸ್ಪಷ್ಟವಾಗಿ ಹೇಳಿದರು.

Share This Article
Leave a comment