ನ್ಯೂಸ್ ಸ್ನ್ಯಾಪ್
ಮಂಡ್ಯ
ರಾಜ್ಯದ ಪ್ರತಿ ಹಳ್ಳಿಗಳಲ್ಲೂ ಡ್ರಗ್ಸ್ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಈ ದಂಧೆಗೆ ಪೊಲೀಸರ ಬೆಂಬಲ ಇದ್ದೇ ಇದೆ ಎಂದು ಮದ್ದೂರಿನ ಶಾಸಕ ಡಿ.ಸಿ.ತಮ್ಮಣ್ಣ ಗುರುವಾರ
ಹೇಳಿದರು.
ಮದ್ದೂರಿನ ನಗರ ಕೆರೆ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ತಮ್ಮಣ್ಣ, ಅನೇಕ ಸಿನಿಮಾ ತಾರೆಯರು, ರಾಜಕಾರಣಿಗಳ ಮಕ್ಕಳು ಮಾತ್ರ ಡ್ರಗ್ಸ್ ಗೆ ದಾಸರಾಗಿದ್ದಾರೆಂದು
ಭಾವಿಸುವುದು ಬೇಡ. ಪ್ರತಿ ಹಳ್ಳಿಗಳಲ್ಲೂ ಈ ದಂಧೆ ನಡೆಯುತ್ತಿದೆ. ಪೊಲೀಸರು ಕಣ್ಣು ಮುಚ್ಚಿ ಕುಳಿತಿದ್ದಾರೆ. ಪೊಲೀಸರು ಮನಸ್ಸು ಮಾಡಿದರೆ ಎಲ್ಲವನ್ನೂ ನಿಯಂತ್ರಣ ಮಾಡಬಹುದು
ಎಂದು ತಿಳಿಸಿದರು.
ಕೊರೋನಾ ವೇಳೆಯಲ್ಲಿ ನಾವು ಪೊಲೀಸರನ್ನು ವಾರಿಯರ್ಸ್ ಎಂದು ಬಿಂಬಿಸಿ ತಲೆ ಮೇಲೆ ಹೂವು ಹಾಕಿ ಗೌರವಿಸಿದ್ದೇವೆ. ಆದರೆ ಪೊಲೀಸರ ಇನ್ನೊಂದು ಮುಖವನ್ನೂ ನಾವು
ನೋಡಬೇಕು. ದಂಧೆಗಳಿಗೆ ಪೊಲೀಸರು ನೆರವು ನೀಡಿದ್ದಾರೆಯೇ ಎಂಬುದರ ಬಗ್ಗೆಯೂ ತನಿಖೆ ಮಾಡಿ, ಬಂದೋಬಸ್ತು ಮಾಡಬೇಕು ಎಂದು ಅಭಿಪ್ರಾಯಪಟ್ಟರು.
ರಾಜ್ಯದ ಪ್ರತಿ ಜಿಲ್ಲೆ ಹಾಗೂ ಹಳ್ಳಿಗಳಿಗೂ ಡ್ರಗ್ಸ್ ಜಾಲ ಹರಡಿದೆ. ಈ ಜಾಲವನ್ನು ಬೇಧಿಸುವ ಕೆಲಸ ಮಾಡುವಂತೆ ನಾನು ಸಿಎಂ ಯಡಿಯೂರಪ್ಪ ಹಾಗೂ ಗೃಹ ಸಚಿವ ಬೊಮ್ಮಾಯಿ
ಅವರಿಗೆ ಪತ್ರ ಬರೆಯುತ್ತೇನೆ ಎಂದು ಹೇಳಿದರು.
More Stories
ಬಿಜೆಪಿ ಪರಿಷತ್ ಸದಸ್ಯ ಸಿ.ಟಿ. ರವಿ ಬಿಡುಗಡೆ: ಹೈಕೋರ್ಟ್ ತಕ್ಷಣ ಬಿಡುಗಡೆಗೆ ಆದೇಶ
ಯೂಟ್ಯೂಬ್ ನೋಡಿ ಬೈಕ್ ಕಳವು ತರಬೇತಿ: 13 ಲಕ್ಷ ಮೌಲ್ಯದ 20 ಬೈಕ್ಗಳ ಕಳ್ಳತನ
ಮಂಡ್ಯ: 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ