January 11, 2025

Newsnap Kannada

The World at your finger tips!

hospital1

ನೆರ್ವಿ ಬಾಡೂಟ- ವಾಂತಿ – ಭೇದಿಯಿಂದ 200 ಮಂದಿ ಅಸ್ವಸ್ಥ

Spread the love

ಮದುವೆಯಾದ ನಂತರ ನೆರ್ವಿ ( ಬೀಗರೌತಣ) ಯಲ್ಲಿ ಬಾಡೂಟ ಸವಿದ 200 ಕ್ಕೂ ಹೆಚ್ಚು ಜನರಿಗೆ ವಾಂತಿ-ಬೇದಿ ಶುರುವಾಗಿ ತೀವ್ರ ಅಸ್ವಸ್ಥರಾದ ಘಟನೆ ಚನ್ನಪಟ್ಟಣದಲ್ಲಿ ಇಂದು ಜರುಗಿದೆ.

ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಮೋಳೆದೊಡ್ಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಗ್ರಾಮದಲ್ಲಿ ಮದುವೆ ಸಂಭ್ರಮದ ನಂತರ ಬೀಗರ ಊಟದ ವ್ಯವಸ್ಥೆ ಮಾಡಿದ್ದರು. ಸುಮಾರು 500 – 600 ಜನರಿಗೆ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದಿದೆ . 200 ಹೆಚ್ಚು ಜನ
ವಾಂತಿ-ಬೇದಿಯಿಂದ ತತ್ತರಿಸಿದರು.

hospital

ಸ್ಥಳಕ್ಕೆ ತಹಸೀಲ್ದಾರ್ , ಪೊಲೀಸ್ ಅಧಿಕಾರಿಗಳ ಭೇಟಿ ನೀಡಿ ಅಸ್ವಸ್ಥರಾದವರನ್ನು ಆಸ್ಪತ್ರೆ ಗೆ ದಾಖಲು ಮಾಡಿದರು.
ಗ್ರಾಮದ ಶಾಲೆ ಮತ್ತು ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆಯಲ್ಲಿ‌ ಚಿಕಿತ್ಸೆ ನಡೆಯುತ್ತಿದೆ.

Copyright © All rights reserved Newsnap | Newsever by AF themes.
error: Content is protected !!