February 21, 2026

Newsnap Kannada

The World at your finger tips!

rowdy

ಹಾಸನದಲ್ಲಿ ಕುಖ್ಯಾತ ರೌಡಿ ಕೊಚ್ಚಿ ಕೊಲೆ – ಪರಾರಿಯಾದ ದುಷ್ಕರ್ಮಿಗಳು

Spread the love

ರೌಡಿ ಶೀಟರ್ ಒಬ್ಬನನ್ನು, ದುಷ್ಕರ್ಮಿ ಗಳ ಗುಂಪೊಂದು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆಗೈದು ಪರಾರಿ ಘಟನೆ ಹಾಸನದಲ್ಲಿ ಜರುಗಿದೆ.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಕಮರವಳ್ಳಿ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ.

ಲಿಂಗರಾಜ್ ಅಲಿಯಾಸ್ ವಿಲ್ಸನ್ ಗಾರ್ಡನ್ ಲಿಂಗ( 42) ಕೊಲೆಯಾದ ರೌಡಿ. ಈತ ಬೆಂಗಳೂರಿನ ಸೈಲೆಂಟ್ ಸುನೀಲ್ ನ ರೈಟ್ ಆಗಿದ್ದನು.

ಕಮರಹಳ್ಳಿ ಗ್ರಾಮದಲ್ಲಿ ವಾಸ್ತವ್ಯ ಮಾಡಿದ್ದ ಆತನನ್ನು ನಿನ್ನೆ ತಡರಾತ್ರಿ ಮನೆಯ ಬಾಗಿಲು ಒಡೆದು ಒಳಗೆ ನುಗ್ಗಿದ ದುಷ್ಕರ್ಮಿಗಳು ಲಾಂಗು ಮಚ್ಚುಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಅಟ್ಯಾಕ್ ಮಾಡಿದ ವೇಳೆ ತಡೆಯಲು ಬಂದ ಲಿಂಗನ ತಮ್ಮನ ಮೇಲೆ ಕೂಡ ಅಟ್ಯಾಕ್ ಮಾಡಿದ್ದಾರೆ. ಲಿಂಗ ಅಲಿಯಸ್ ವಿಲ್ಸನ್ ಗಾರ್ಡನ್ ಲಿಂಗ ಬೆಂಗಳೂರಿನಲ್ಲೆ ಇದ್ದನು.

ಕೊರೊನಾ ಲಾಕ್ ಡೌನ್ ವೇಳೆ ಊರಿಗೆ ವಾಪಾಸು ಬಂದು ಊರಿನಲ್ಲೇ ಕೋಳಿ ಫಾರಂ ನಡೆಸುತ್ತಾ ಜೀವನ ಮಾಡುತ್ತಿದ್ದನು.

ಬೆಂಗಳೂರು ಬಿಟ್ಟು ಊರಿಗೆ ಸೇರಿದ ಕೆಲವೇ ತಿಂಗಳಲ್ಲೆ ಈ ದುಷ್ಕೃತ್ಯ ನಡೆದಿದೆ.

ಈ ಸಂಬಂಧ ಹಿರಿಸಾವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

error: Content is protected !!