ಅಧಿವೇಶನ ಮುಗಿದ ಬಳಿಕ ರೈತರಿಗೆ ಕೃಷಿ ಮತ್ತು ಎಪಿಎಂಸಿ ಕಾಯಿದೆ ಬಗ್ಗೆ ಸಮಗ್ರ ಮಾಹಿತಿ ನೀಡಲು ತಾವು ಸಚಿವರ ತಂಡದೊಂದಿಗೆ ರಾಜ್ಯ ಪ್ರವಾಸ ಮಾಡುವುದಾಗಿ ಕೃಷಿ ಸಚಿವ ಬಿ ಸಿ ಪಾಟೀಲ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪಾಟೀಲ್ ಪಶುಸಂಗೋಪನೆ, ಸಹಕಾರಿ, ಕಂದಾಯ ಸಚಿವರು ಸೇರಿ ರಾಜ್ಯಾದ್ಯಂತ ಪ್ರವಾಸ ಹಮ್ಮಿಕೊಂಡಿ ದ್ದೇವೆ. ರೈತರಿಗೆ ಕೃಷಿ ಕಾಯಿದೆ ತಿದ್ದುಪಡಿಯಿಂದಾಗುವ ಲಾಭಗಳ ಬಗ್ಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ಕಾಂಗ್ರೆಸ್ ಬಳಸಿದ್ದನ್ನು ನಾವು ಮಾಡಿದ್ದೇವೆ
ರೈತರು ಬಾರುಕೋಲು ಹಿಡಿದು ಚಳುವಳಿ ಮಾಡುವಂತಹ ಪರಿಸ್ಥಿತಿ ಬಂದಿಲ್ಲ. ದೇಶ ಹಾಗೂ ರಾಜ್ಯದ ರೈತರ ಅನುಕೂಲಕ್ಕಾಗಿಯೇ ಕಾಯಿದೆ ತರಲಾಗಿದೆ. ಕಾಂಗ್ರೆಸ್ 2019 ರ ಪ್ರಣಾಳಿಕೆಯಲ್ಲಿ ಎಪಿಎಂಸಿ ರದ್ದುಮಾಡಿ ಮುಕ್ತಮಾರುಕಟ್ಟೆ ಮಾಡುವ ಬಗ್ಗೆ ನೀಡಿದ ಭರವಸೆ ನೀಡಿದ್ದರು. ನಮ್ಮ ಸರ್ಕಾರ ಅವರು ಹೇಳಿದ್ದನ್ನೇ ಮಾಡಿದೆ.ಇದಕ್ಕೆ ಕಾಂಗ್ರೆಸ್‌ನವರು ಮೆಚ್ಚುಗೆ ವ್ಯಕ್ತಪಡಿಸಬೇಕೇ ಹೊರತು ರಾಜಕೀಯಕ್ಕಾಗಿ ವಿರೋಧಿಸುವುದಲ್ಲ ಎಂದರು.
ಮಾಜಿ ಸಿಎಂ ಸಿದ್ದರಾಮಯ್ಯ ಸಹ ಹಿಂದೆ ಕಾಯಿದೆ ತಿದ್ದುಪಡಿಗಾಗಿ ಪತ್ರ ಬರೆದಿದ್ದರು. ಹೂವುಹಣ್ಣು ತರಕಾರಿಗಳನ್ನು ಎಪಿಎಂಸಿಯಿಂದ ಹೊರಗಿಡಬೇಕು.ಇದರಿಂದ ರೈತರ ಶೋಷಣೆಯಾಗುತ್ತಿದೆ ಎಂದಿದ್ದರು.
ದ್ವಿಮುಖ ನಿಲುವು ಕೈ ಬಿಡಿ :
ರೈತರು ಬುದ್ಧಿವಂತರಿದ್ದಾರೆ.ಅವರಿಗೆ ಸರಿತಪ್ಪುಗಳ ಬಗ್ಗೆ ಅರಿವಿದೆ.ತಾವು ನಡೆಸಿದ ಪ್ರವಾಸದಲ್ಲಿ ಎಲ್ಲಿಯೂ ರೈತರೂ ಈ ಕಾಯಿದೆಗಳನ್ನು ವಿರೋಧಿಸಿಲ್ಲ.ವಿನಾಕಾರಣ ರಾಜಕೀಯಕ್ಕಾಗಿ ಕಾಂಗ್ರೆಸ್ ಸುಮ್ಮನೆ ಆರೋಪಿಸುವುದು ಸರಿಯಲ್ಲ.ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದರೆ ಭರವಸೆ ಈಡೇರಿಸುತ್ತಿರಲಿಲ್ಲವೇ?ದ್ವಿಮುಖ ನಿಲುವನ್ನು ಕಾಂಗ್ರೆಸ್ ಬಿಡಬೇಕು ಎಂದರು.
ಈಗಾಗಲೇ ಒಂದು ಸಾರಿ ಪ್ರವಾಸ ಮಾಡಿದ್ದೇವೆ.ಆದರೆ ಎಲ್ಲಿಯೂ ಕೂಡ ಯಾವ ರೈತರಿಂದಲೂ ಕಾಯಿದೆ ಬಗ್ಗೆ ಅಪಸ್ವರ ಬಂದಿಲ್ಲ.ವಿಧಾನಸಭೆ ಅಧಿವೇಶನ ನಡೆಯೋವಾಗ ಇಂತಹ ಪ್ರತಿಭಟನೆ ಸಹಜ.ಇದರಿಂದ ಸಾರ್ವಜನಿಕರಿಗೆ ಸುಮ್ಮನೆ ತೊಂದರೆ ಕೊಡುತ್ತಿದ್ದಾರೆ.ಯಾವುದೇ ಕಾರಣಕ್ಕೂ ಕಾಯಿದೆ ಬದಲಾವಣೆ ಇಲ್ಲ.ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರ ಈ ಬಗ್ಗೆ ಸ್ಪಷ್ಟ ಪಡಿಸಿದೆ ಎಂದರು
ರಾಹುಲ್ ಗಾಂಧಿ ಎಂದಾದರೂ ಹೊಲಕ್ಕೆ ಹೋಗಿದ್ರಾ?
ರೈತರ ಬಗ್ಗೆ ಮಾತನಾಡುವ ಎಐಸಿಸಿ ನಾಯಕ ರಾಹುಲ್ ಗಾಂಧಿ ಎಂದಿಗೂ ಹೊಲಕ್ಕೆ ಹೋಗಿ ಕೆಸರು ತುಳಿದಿಲ್ಲ.
ಅವರಿಗೆ ಹೊಲ ಉಳುಮೆ, ಬಿತ್ತುವುದು ಏನೂ ಗೊತ್ತಿಲ್ಲ.ಅವರ ಮುಂದೆ ಬೆಳೆಗಳನ್ನು ಇಟ್ಟರೆ ಯಾವ ಬೆಳೆ ಎನ್ನುವುದೇ ಗೊತ್ತಿಲ್ಲ.ಇವತ್ತಿಗೂ ರಾಹುಲ್ ಗಾಂಧಿ ಗೆ ಹಾಲು ಎಲ್ಲಿ ಬರುತ್ತದೇ ಎಂಬುದೇ ಗೊತ್ತಿಲ್ಲ.ಅಕ್ಕಿ ಎಲ್ಲಿಂದ ಬರುತ್ತದೆ ಎಂದು ಕೇಳಿದರೆ ಭತ್ತದಿಂದ ಬರುತ್ತದೆ ಎಂದು ಹೇಳಲು ಗೊತ್ತಿಲ್ಲ.ಪಾಪ ಅವರು ಎಲ್ಲೋ ಹೈಫೈ ನಲ್ಲಿ ವಿದೇಶದಲ್ಲಿ ಓದಿಕೊಂಡು ಬಂದಿರುವುದರಿಂದ ಅವರಿಗೆ ರೈತನ ಕಷ್ಟ ಏನು ಗೊತ್ತಿಲ್ಲ ಎಂದು ಬಿ.ಸಿ.ಪಾಟೀಲ್ ಹೇಳಿದರು.
- ರಾಜ್ಯದಲ್ಲಿ ಮುಂದಿನ 5 ದಿನ ಮಳೆಯ ಮುನ್ಸೂಚನೆ
- 10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
- ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )
- ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ
- ಬೆಂಗಳೂರಿನಲ್ಲಿ ಮಹಿಳೆಗೆ 30 ಲಕ್ಷ ರೂ. ವಂಚನೆ!
More Stories
10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
ವಿರಾಟ್ ಕೊಹ್ಲಿಗೆ ಬಿಬಿಎಂಪಿ ನೋಟಿಸ್