ಟಾಲಿವುಡ್ ಹಾಗೂ ಕಾಲಿವುಡ್‌ನ ಖ್ಯಾತ ಗಾಯಕಿ ಸುನೀತಾ ಉಪದ್ರಸ್ತ 42 ನೇ ವಯಸ್ಸಿನಲ್ಲಿ ಸರಳವಾಗಿ ಮಕ್ಕಳು ಹಾಗೂ ಆಪ್ತರ ಸಮ್ಮುಖದಲ್ಲಿ ಎರಡನೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಸುನೀತಾ ನಿವಾಸದಲ್ಲೇ ರಾಮ್ ಜೊತೆ ನಿಶ್ಚಿತಾರ್ಥ ಕಾರ್ಯಕ್ರಮ ನಡೆದಿದೆ. ರಾಮ್ ವೃತ್ತಿಯಲ್ಲಿ ಮೀಡಿಯಾ ಹೌಸ್ ನ ಸಿಇಒ ಆಗಿ ಕಾರ್ಯ ನಿರ್ವಹಿಸುತ್ತಿ ದ್ದಾರೆ.
ಈ ಹಿಂದೆ ಅನೇಕ ಬಾರಿ ಸುನೀತಾ ಮದುವೆ ವಿಚಾರವನ್ನು ಅವರೇ ಪ್ರಸ್ತಾಪಿಸುತ್ತಿದ್ದರು. ಆದರೆ ಯಾವುದೇ ಉತ್ತರ ನೀಡದೇ ಮುಂದೆ ಹಾಕುತ್ತಿದ್ದರು. ಆದರೀಗ ಸೋಷಿಯಲ್ ಮೀಡಿಯಾ ದಲ್ಲಿ ತಮ್ಮ ಮದುವೆ ವಿಷಯವನ್ನು ಅಧಿಕೃತವಾಗಿ ಘೋಷಿಸಿದ್ದಾರೆ.
ಎಲ್ಲ ತಾಯಿಯಂತೆ ನಾನೂ ನನ್ನ ಮಕ್ಕಳು ಜೀವನದಲ್ಲಿ ಸೆಟಲ್ ಆಗಲಿ. ನಾನೂ ಸ್ಲೆಟ್ ಆಗಬೇಕೆಂದು ಬಯಸಿದವಳು ಎಂದು ಸುನೀತಾ ಹೇಳಿದ್ದಾರೆ.
19ನೇ ವಯಸ್ಸಿನಲ್ಲಿದ್ದಾಗ ಸುನೀತಾ ಕಿರಣ್ ಕುಮಾರ್ ಎಂಬಾತನನ್ನು ವಿವಾಹವಾಗಿ ದ್ದರು.ಆಕಾಶ್, ಶ್ರೇಯಾ ಎಂಬ ಇಬ್ಬರು ಮಕ್ಕಳೂ ಇದ್ದಾರೆ. ನಂತರ ಕೆಲವು ವರ್ಷಗಳ ಬಳಿಕ ಸಂಸಾರದಲ್ಲಿ ಬಿರುಕು ಉಂಟಾದಾಗ ಕಿರಣ್ ರಿಂದ ವಿವಾಹ ವಿಚ್ಛೇದನ ಪಡೆದುಕೊಂಡರು.
17 ವರ್ಷ ಮಕ್ಕಳೊಂದಿಗೆ ಏಕಾಂಗಿ!
ಕಳೆದ 17 ವರ್ಷಗಳಿಂದ ಮಕ್ಕಳೊಂದಿಗೆ ಕಾಲ ಕಳೆಯುತ್ತಿದ್ದ ಸುನೀತಾ ವಿವಾಹ ವಾಗಲು ರಾಮ್ ಪ್ರಯತ್ನ ನಡೆಸಿದ್ದರು. ಆದರೆ ಆಕೆ ಒಪ್ಪಿರಲಿಲ್ಲ. ಮಕ್ಕಳು ಮದುವೆ ಮಾಡಿಕೊಂಡು ಹೋದರೆ ಮುಂದೆ ಒಂಟಿ ಜೀವನ ಸಾಗಿಬೇಕಾಗುತ್ತದೆ ಎಂಬ ಸಂಗತಿ ಕಾಡತೊಡಗಿತು. ಕೊನೆಗೆ ಮಕ್ಕಳೂ ಸಹ ಎರಡನೇ ವಿವಾಹಕ್ಕೆ ಅನುಮತಿ ನೀಡಿದ ಮೇಲೆ ರಾಮ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು.
ಸುನೀತಾರನ್ನು ಕೈ ಹಿಡಿಯಲಿರುವ ರಾಮ್ ಅವರ ಪತ್ನಿಯ ವೈವಾಹಿಕ ಜೀವನದ ಬಗ್ಗೆ ಸಧ್ಯಕ್ಕೆ ಯಾವುದೇ ಮಾಹಿತಿ ಲಭ್ಯವಿಲ್ಲ.
- ರಾಜ್ಯದಲ್ಲಿ ಮುಂದಿನ 5 ದಿನ ಮಳೆಯ ಮುನ್ಸೂಚನೆ
- 10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
- ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )
- ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ
- ಬೆಂಗಳೂರಿನಲ್ಲಿ ಮಹಿಳೆಗೆ 30 ಲಕ್ಷ ರೂ. ವಂಚನೆ!
More Stories
ರಾಜ್ಯದಲ್ಲಿ ಮುಂದಿನ 5 ದಿನ ಮಳೆಯ ಮುನ್ಸೂಚನೆ
10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )