ಚಿರಂಜೀವಿ ಸರ್ಜಾ ನಿಧನದಿಂದ ಸಾಕಷ್ಟು ನೋವುಂಡ ಮೇಘನಾ ರಾಜ್ ಕುಟುಂಬಕ್ಕೆ ಆಘಾತ ಮೇಲೆ ಆಘಾತ.
ಮರಿ ಚಿರು ಮನೆಗೆ ಬಂದ ಮೇಲೆ ಸಂತೋಷದ ಅಲೆ ಎದ್ದಿತ್ತು. ಆದರೆ ಈಗ ಮೇಘನಾ ರಾಜ್ ಕುಟುಂಬಕ್ಕೆ ಆಘಾತ ಕಾಡಿದೆ.
ಎಲ್ಲರಿಗೂ ಕೊರೋನಾ ಸೋಂಕು:
ಮೇಘನಾ ರಾಜ್ ಮತ್ತು ಮಗುವಿಗೆ ಕೊರೊನಾ ಪಾಸಿಟಿವ್ ಬಂದಿದೆ. ಮೇಘನಾ ರಾಜ್ ಅಪ್ಪ ಸುಂದರ್ ರಾಜ್ ಹಾಗೂ ಅಮ್ಮ ಪ್ರಮೀಳಾ ಜೋಷಾಯ್ ಗೂ ಕೊರೊನಾ ಸೋಂಕು ತಗುಲಿದೆ.
ಹಿರಿಯ ನಾಗರಿಕರಾದ ಕಾರಣ ಸುಂದರ್ ರಾಜ್ ಮತ್ತು ಪ್ರಮೀಳಾ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿದ್ದಾರೆ. ಆದರೆ ಮೇಘನಾ ರಾಜ್ ಮತ್ತು ಮಗು ಹೋಂ ಕ್ವಾರೆಂಟೈನ್ ನಲ್ಲಿ ಇದ್ದಾರೆ. ಆ ಇಬ್ಬರಿಗೂ ಮನೆಯಲ್ಲೆ ಚಿಕಿತ್ಸೆ ನೀಡಲಾಗುತ್ತಿದೆ.
ಧ್ರುವ ಸರ್ಜಾ ಮತ್ತು ಪತ್ನಿ ಪ್ರೇರಣಾಗೆ ಕೂಡ ಕೊರೊನಾ ಸೋಂಕು ತಗುಲಿತ್ತು. ಅವರಿಬ್ಬರು ಕೊರೊನಾ ಸೋಂಕಿನಿಂದ ಮುಕ್ತರಾದರೂ ಎನ್ನುತ್ತಿರುವಾಗಲೇ ಈಗ ಮೇಘನಾ ರಾಜ್ ಕುಟುಂಬ ಕೊರೊನಾ ವಿರುದ್ಧ ಹೋರಾಟ ಆರಂಭವಾಗಿದೆ. ಪ್ರಮೀಳಾ ಜೋಷಾಯಿ ಹಾಗೂ ಸುಂದರ್ ರಾಜ್ ವಯಸ್ಸಾಗಿರುವುದರಿಂದ ಮೇಘನಾ ರಾಜ್ ಅವರಿಗೆ ಚಿಂತೆ ಕಾಡುತ್ತಿದೆ
- 10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
- ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )
- ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ
- ಬೆಂಗಳೂರಿನಲ್ಲಿ ಮಹಿಳೆಗೆ 30 ಲಕ್ಷ ರೂ. ವಂಚನೆ!
- ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
More Stories
10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
ವಿರಾಟ್ ಕೊಹ್ಲಿಗೆ ಬಿಬಿಎಂಪಿ ನೋಟಿಸ್