March 15, 2026

Newsnap Kannada

The World at your finger tips!

Malavika Krishna 1

ಎಸ್. ಎಂ. ಕೃಷ್ಣ ಪುತ್ರಿ ಮಾಳವಿಕಾ ಈಗ ಕೆಫೆ ಕಾಫಿ ಡೇ ಸಿಇಓ

Spread the love

ಸಿದ್ದಾರ್ಥ ಹೆಗ್ಡೆ ಹುಟ್ಟು ಹಾಕಿದ ಕೆಫೇ ಕಾಫಿ ಡೇ ಗೆ ಈಗ ಹೊಸ ಅಧಿಪತಿ ಬಂದಿದ್ದಾರೆ.

ಎಸ್ ಎಂ ಕೃಷ್ಣ ಪುತ್ರಿ, ಸಿದ್ದಾರ್ಥ ಹೆಗ್ಡೆ ಪತ್ನಿ ಮಾಳವಿಕಾ ಅವರನ್ನು ಕೆಫೇ ಕಾಫಿ ಡೇ ನೂತನ ಸಿಇಒ ಆಗಿ ನೇಮಕ ಮಾಡಲಾಗಿದೆ.

ಕಾಫಿಗೆ ಅಂತರರಾಷ್ಟ್ರೀಯ ಮಾರುಕಟ್ಟೆ ಯಲ್ಲಿ ಒಂದು ಮೌಲ್ಯ ಒದಗಿಸಿ, ದೇಶ-ವಿದೇಶಗಳಲ್ಲಿ ಖ್ಯಾತಿ ಪಡೆದಿರುವ ಕೆಫೆ ಕಾಫಿ ಡೇ ಸಂಸ್ಥೆಯ ಹೊಸ ಜವಾಬ್ದಾರಿ ವಹಿಸಿಕೊಂಡ ಮೇಲೆ ಕಂಪನಿ ಶೇರ್ ಗಳಿಗೆ ಡಿಮ್ಯಾಂಡ್ ಹೆಚ್ಚಾಗುವ ನಿರೀಕ್ಷೆ ಇದೆ.

ccd

ಕಾಫಿ ಡೇ ಸಂಸ್ಥೆ ಸಂಸ್ಥಾಪಕ ಜಿ.ವಿ. ಸಿದ್ಧಾರ್ಥ ನಿಧನದ ನಂತರ ಸಂಸ್ಥೆ ಆಡಳಿತ ಮಂಡಳಿ ಸದಸ್ಯ ಎಸ್.ವಿ.ರಂಗನಾಥ್ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು.

ಕಂಪನಿಯ ನಿರ್ದೇಶಕ ಮಂಡಳಿಯು ಸಿ.ಎಚ್‍. ವಸುಂಧರಾ ದೇವಿ, ಗಿರಿ ದೇವನೂರ್, ಮೋಹನ್ ರಾಘವೇಂದ್ರ ಕೊಂಡಿ ಅವರನ್ನು ಹೆಚ್ಚುವರಿ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ.

error: Content is protected !!