November 9, 2024

Newsnap Kannada

The World at your finger tips!

parliament

ನೂತನ ಸಂಸತ್ ಭವನ ಶಂಕುಸ್ಥಾಪನೆಗೆ ಸುಪ್ರೀಂ ಸಮ್ಮತಿ

Spread the love

ಕೇಂದ್ರ ಸರ್ಕಾರದ ಮಹತ್ವದ ಯೋಜನೆ ನೂತನ ಸಂಸತ್ ಭವನ ನಿರ್ಮಿಸುವ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲು ಸೋಮವಾರ ಸುಪ್ರೀಂಕೋರ್ಟ್ ಸಮ್ಮಿತಿ ನೀಡಿದೆ. ವಿಡಿಯೋ ಕಾನ್ಪರೆನ್ಸ್ ಮೂಲಕ ವಿಚಾರಣೆ ನಡೆಸಿದ ನ್ಯಾಯಾಲಯ, ಈ ಯೋಜನೆಗೆ ಪರಿಸರಿ ಇಲಾಖೆ ನೀಡಿದ ಅನುಮತಿ ಹಾಗೂ ಇತರ ಕೆಲವು ವಿಷಯಗಳ ಕುರಿತು ಸರ್ಕಾರವನ್ನು ಪ್ರಶ್ನೆ ಮಾಡಿತು.


ಕೇವಲ ಶಂಕುಸ್ಥಪನೆ ಮಾಡುವ ಕಾರ್ಯಕ್ರಮವಾಗಿದೆ. ಸದ್ಯ ಕಟ್ಟಡ ನಿರ್ಮಾಣ ಕಾರ್ಯ ಆಗುವುದಿಲ್ಲ ಎಂದು ಕೇಂದ್ರ ಸರ್ಕಾರದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ನ್ಯಾಯಪೀಠಕ್ಕೆ ಮಾಹಿತಿ ನೀಡಿದರು. ಸಂಸತ್ ಭವನ ನಿರ್ಮಾಣ ಸಂಬAಧ ಸುಪ್ರೀಂಕೋರ್ಟ್ನಲ್ಲಿ ಬಾಕಿ ಇರುವ ಅರ್ಜಿಗಳು ಇತ್ಯರ್ಥವಾಗುವ ತನಕ ನಿಗದಿತ ಜಾಗದಲ್ಲಿ ಕಟ್ಟಡ ತೆರವುಗೊಳಿಸುವ ಕೆಲಸವಾಗಲಿ, ಕಟ್ಟಡ ನಿರ್ಮಾಣವಾಗಲಿ ಮಾಡುವುದಿಲ್ಲ ಎಂದು ಕೇಂದ್ರ ಸರ್ಕಾರ ಭರವಸೆ ನೀಡಿದ ಮೇಲೆ ಶಂಕುಸ್ಥಾಪನೆಗೆ ಸುಪ್ರೀಂ ಒಪ್ಪಿಗೆ ನೀಡಿದೆ. ಹೊಸದಾಗಿ ಸಂಸತ್ ಭವನ ನಿರ್ಮಾಣದ ಆಶಯದ ಕೇಂದ್ರದ ಮಹತ್ವದ ‘ಸೆಂಟ್ರಲ್ ವಿಸ್ಟಾ’ಯೋಜನೆ ಇದಾಗಿದೆ. ಭವನ ನಿರ್ಮಾಣಕ್ಕೆ ಸಂಬAಧಿಸಿದAತೆ ಶೀಘ್ರವಾಗಿ ಮಾಹಿತಿ ನೀಡಬೇಕೆಂದು ಸಾಲಿಸಿಟರ್ ಜನರಲ್ ಅವರಿಗೆ ನ್ಯಾಯಾಲಯ ಹೇಳಿತಲ್ಲದೆ, ಸೂಕ್ತ ದಾಖಲೆಗಳೊಂದಿಗೆ ಸರ್ಕಾರ ಮುಂದುವರಿಯಬಹುದಾಗಿದೆ ಎಂದು ನಿರ್ದೇಶನ ನೀಡಿತು.


ಹೊಸ ಕಟ್ಟಡ ನಿರ್ಮಾಣ ತೀರ್ಮಾನವನ್ನು ಗಡಿಬಿಡಿಯಲ್ಲಿ ತೆಗೆದುಕೊಂಡಿಲ್ಲ ಮತ್ತು ಯಾವುದೇ ಕಾನೂನು ನಿಯಮಗಳನ್ನು ಉಲ್ಲಂಘಿಸಿಲ್ಲ ಎಂದು ಮೆಹ್ತಾ ಅವರು ಈ ಹಿಂದೆ ವಿಚಾರಣೆ ವೇಳೆ ನ್ಯಾಯಾಲಯದ ಗಮನಕ್ಕೆ ತಂದಿದ್ದರು.
ಹಳೆಯ ಸಂಸತ್ ಭವನದ ಬಳಿಯಲ್ಲೇ ೯೦೦ರಿಂದ ೧೨೦೦ ಮಂದಿ ಸಂಸದರು ಕುಳಿತುಕೊಳ್ಳಬಹುದಾದ ತ್ರಿಕೋನಾಕೃತಿಯ ಹೊಸ ಸಂಸತ್ ಭವನ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಡಿ. ೧೦ರಂದು ಶಂಕುಸ್ಥಾಪನೆ ನೆರವೇರಿಸುವರೆಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. ಸುಮಾರು ೯೭೧ ಕೋಟಿರೂ. ವೆಚ್ಚದ ಈ ನೂತನ ಭವನ ೨೦೨೨ರವೇಳೆಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.

Copyright © All rights reserved Newsnap | Newsever by AF themes.
error: Content is protected !!