February 21, 2026

Newsnap Kannada

The World at your finger tips!

kunigal giri

ಮಾಜಿ ಮಂತ್ರಿ ವರ್ತೂರು ಕಿಡ್ನ್ಯಾಪ್ ಹಿಂದೆ ರೌಡಿ ಕುಣಿಗಲ್ ಗಿರಿ ಕೈವಾಡ?ಪೊಲೀಸರಿಂದ ಡ್ರಿಲ್ ಶುರು!

Spread the love

ಮಾಜಿ‌‌ ಮಂತ್ರಿ ವರ್ತೂರು ಪ್ರಕಾಶ್ ಅಪಹರಣ ಹಿಂದೆ ನಿತ್ಯ ಹೊಸ ಟ್ವಿಸ್ಟ್ ಗಳು ಪೋಲೀಸರಿಗೆ ಲಭ್ಯವಾಗುತ್ತವೆ.

ಕಿಡ್ನ್ಯಾಪ್ ಪ್ರಕರಣದಲ್ಲಿ ಕುಖ್ಯಾತ ರೌಡಿ ಕುಣಿಗಲ್ ಗಿರಿಯನ್ನು ವಶಕ್ಕೆ ಪಡೆದಿರುವ ಬೆಂಗಳೂರಿನ ಕಾಮಾಕ್ಷಿ ಪಾಳ್ಯ ಪೋಲೀಸರು ಈಗ ಆತನ ಮೇಲೆ ಡ್ರಿಲ್ ಆರಂಭಿಸಿದ್ದಾರೆ.

ವರ್ತೂರು ಕಿಡ್ನ್ಯಾಪ್ ನಲ್ಲಿ ಬೆಂಗಳೂರು ಬಾಸ್ ಹೇಳಿದ್ದಾರೆಂದು ಅಪಹರಣಕಾರರ ತಂಡದ ಸದಸ್ಯರು ಹೇಳಿದ ಸುಳಿವಿನ ಮೇರೆಗೆ ಪೋಲಿಸರು ಗಿರಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಆರಂಭಿಸಿದ್ದಾರೆ.

ಸುಮಾರು 110 ವಿವಿಧ ಅಪರಾಧ ಪ್ರಕರಣಗಳಲ್ಲಿ ನೇರ ಭಾಗಿಯಾಗಿರುವ ಗಿರಿ ವರ್ತೂರು ಅಪಹರಣ ರೂವಾರಿ ಎಂಬ ಗುಮಾನಿ ದಟ್ಟವಾಗುತ್ತಿದಂತೆ ಹೆಚ್ಚಿನ ವಿಚಾರಣೆಗೆ ಆತನನ್ನು ಕರೆತರಲಾಗಿದೆ.

ಕಿಡ್ನ್ಯಾಪ್ ಪ್ರಕರಣದ ತನಿಖೆ ಚುರುಕಾಗಿ ಸಾಗಿದೆ. ಹಲವಾರು ಆಯಾಮಗಳಲ್ಲಿ ವಿಚಾರಣೆ ನಡೆದಿದೆ. ಕೋಲಾರ, ಬೆಳ್ಳಂದೂರು ಹಾಗೂ ಕಾಮಾಕ್ಷಿ ಪಾಳ್ಯ ಪೋಲೀಸರು ಏಕ ಕಾಲಕ್ಕೆ ಸಮನ್ವಯದ ತನಿಖೆ ಈ ಪ್ರಕರಣಕ್ಕೆ ಇತಿಶ್ರೀ ಹಾಡಲಿದ್ದಾರೆ.

error: Content is protected !!