February 21, 2026

Newsnap Kannada

The World at your finger tips!

farmers

ಡಿ . 8 ರಂದು ಭಾರತ್ ಬಂದ್ : ಡಿ.9 ಬಾರಕೋಲು ಚಳವಳಿ ರೈತ ಸಂಘ ಘೋಷಣೆ

Spread the love

ಮರಾಠಾ ಸಮುದಾಯ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ
ಡಿಸೆಂಬರ್ 5 ರಂದು ಕರ್ನಾಟಕ ಬಂದ್ ಬೆನ್ನಲ್ಲೇ ಡಿ 8 ರಂದು ನಡೆಯಲಿರುವ ಭಾರತ್ ಬಂದ್ ಗೆ ಕರೆ ನೀಡಲಾಗಿದೆ.

ರಾಜ್ಯ ರೈತ ಸಂಘ, ಹಸಿರು ಸೇನೆ ನೇತೃತ್ವದಲ್ಲಿ ಬಂದ್ ಗೆ ಕರೆ ನೀಡಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ರೈತ ವಿರೋಧಿ ಮಸೂದೆಯನ್ನು ಸುಗ್ರೀವಾಜ್ಞೆಯ ಮೂಲಕ ಜಾರಿಗೆ ತಂದಿದೆ. ಹೊಸ ಕೃಷಿ ಸುಧಾರಣಾ ಕಾನೂನುಗಳ ರೈತ ವಿರೋಧಿ ಮಸೂದೆ ವಿರೋಧಿಸಿ ಭಾರತ ಬಂದ್ ಮಾಡಲಾಗುತ್ತಿದೆ. ರಾಜ್ಯದಲ್ಲೂ ಡಿ.8ರಂದು ಬಂದ್ ಮಾಡಲಿದ್ದೇವೆ ಎಂದು ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ತಿಳಿದಿದ್ದಾರೆ.
ಡಿ.8ರಂದು ರಾಜ್ಯ ಬಂದ್, 9ರಂದು ಬೆಂಗಳೂರಿನಲ್ಲಿ ಬಾರುಕೋಲು ಚಳವಳಿ ಮೂಲಕ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದ್ದೇವೆ ಎಂದು ಕೋಡಿಹಳ್ಳಿ ಹೇಳಿದರು .

farmers 1

ಭಾರತ್ ಬಂದ್ ಗೆ ಕನ್ನಡ ಪರ ಸಂಘಟನೆಗಳು, ಸಾರಿಗೆ ನೌಕರರ ಒಕ್ಕೂಟ ರಸ್ತೆ ಬದಿಯ ವ್ಯಾಪಾರಿಗಳ ಸಂಘ , ರಾಜ್ಯದ ಕಬ್ಬು ಬೆಳೆಗಾರರು ಬೆಂಬಲ ಸೂಚಿಸಿದ್ದಾರೆ.

error: Content is protected !!