ಹೋರಾಟ ತೀವ್ರಗೊಳಿಸಲು ನಿರ್ಧಾರ-ವಾಟಾಳ್

Team Newsnap
1 Min Read

ರಾಜ್ಯ ಸರ್ಕಾರದ ಮರಾಠ ಪ್ರಾಧಿಕಾರ ರಚನೆ ವಿರುದ್ಧ ಹೋರಾಟ ತೀವ್ರ ಗೊಳಿಸಲು ಕನ್ನಡ ಪರ ಸಂಘಟನೆಗಳು ನಿರ್ಧರಿಸಿವೆ.

ಈ ಸಂಬಂಧ ( ಡಿ 8) ಬುಧವಾರ ರಾಜ್ಯದ ರಾಜಧಾನಿಯಲ್ಲಿ ಸಭೆ ಕರೆದಿರುವುದಾಗಿ ಕನ್ನಡ ಚಳವಳಿಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ್ , ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ಅಂದು ಕನ್ನಡ ಸಂಘಟನೆಗಳ ಮುಖಂಡರು ಸಭೆ ನಡೆಸಿ ಹೋರಾಟ ರೂಪುರೇಷೆ ನಿರ್ಧರಿಸಲಾಗುವುದು ಎಂದರು.

ಇಂದು ಕರೆ ನೀಡಲಾಗಿದ್ದ ಕರ್ನಾಟಕ ಬಂದ್ ವಿಫಲ ಮಾಡಲು ಎಲ್ಲ ರೀತಿಯ ಯೋಜನೆ ನಡೆಯಿತು. ದೂರಿದರಲ್ಲದೆ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪರ ಭಾಷಿಕರ ಏಜೆಂಟ್ ಎಂದು ಜರಿದರು.

ಪ್ರಾಧಿಕಾರದ ರಚನೆಯನ್ನು ಕೈಬಿಡದ ಕಾರಣ ಮುಂದೆ ಉಗ್ರ ರೂಪದ ಹೋರಾಟದ ಜತೆಗೆ ಜೈಲ್‌ಭರೋ ಚಳವಳಯನ್ನು ನಡೆಸಲಾಗುತ್ತೆ ಎಂದು ಎಚ್ಚರಿಸಿದರು.

Share This Article
Leave a comment