ಡಿಸೆಂಬರ್ 8 ರಂದು ಭಾರತ್ ಬಂದ್ :ಜನರಿಗೆ ಮತ್ತೊಂದು ಸವಾಲು

Team Newsnap
1 Min Read

ಕರ್ನಾಟಕ ಬಂದ್ ವಿಫಲವಾದ ಬೆನ್ನಲ್ಲೇ ಡಿಸೆಂಬರ್ 8 ರ :ಭಾರತ್ ಬಂದ್’ ಗೆ ಕರೆ ನೀಡಲಾಗಿದೆ.

ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ಹಾಗೂ ಕೃಷಿ ಕಾಯ್ದೆ ವಿರೋಧಿಸಿ ರೈತ ಸಂಘಟನೆಗಳು ಡಿಸೆಂಬರ್ 8 ರಂದು ಭಾರತ್ ಬಂದ್ ಗೆ ಕರೆ ನೀಡಿವೆ.

ಈ ಬಂದ್ ಕರೆಗಳಿಂದ ರೋಸಿ ಹೋಗಿರುವ ಜನಕ್ಕೆ ಮತ್ತೊಂದು ಬಂದ್ ಗೆ ಮನಸ್ಸು ಅನ್ನು ಸಿದ್ದ ಮಾಡಿಕೊಳ್ಳ ಬೇಕಿದೆ.

ಕೃಷಿ ಹಾಗೂ ಎಪಿಎಂಸಿ ಕಾಯ್ದೆ ಗಳನ್ನು ರದ್ದು ಮಾಡುವಂತೆ ರೈತರು ಕಳೆದ 11 ದಿನಗಳಿಂದ ಕೊರೆಯುವ ಚಳಿ, ಬಿರುಗಾಳಿ ಲೆಕ್ಕಿಸದೇ ನಡೆಸಿರುವ ಹೋರಾಟ ತಾರಕಕ್ಕೇರಿದೆ.

ಈಗ ಡಿಸೆಂಬರ್ 8 ರಂದು ಭಾರತ್‌ ಬಂದ್‌ ನೀಡಲಾಗಿದೆ. ಬಂದ್ ರೂಪರೇಷೆಗಳನ್ನು ರೈತ ನಾಯಕರು ಸಿದ್ದ ಮಾಡುತ್ತಿದ್ದಾರೆ.

ರೈತರು ತಮ್ಮ ಪ್ರತಿಭಟನೆಯನ್ನು ದೇಶ ವ್ಯಾಪಿ ಮಾಡುವುದರ ಜೊತೆಗೆ ವಿವಿಧ ಸಂಘಟನೆಗಳ ನೆರವು ಪಡೆದುಕೊಳ್ಳಲು ನಿರ್ಧರಿಸಿದ್ದಾರೆ.

ಈ ನಡುವೆ ಕೇಂದ್ರ ಸರ್ಕಾರದ ಸಚಿವ ಅಮಿತ್ ಶಾ, ರಾಜನಾಥ ಸಿಂಗ್ ತೋಮರ್ ಅವರುಗಳು 6 – 7 ಸುತ್ತಿನ ಮಾತುಕತೆ ನಡೆಸಿದರೂ ಫಲಪ್ರದವಾಗ ಲಿಲ್ಲ. ಅಂತಿಮವಾಗಿ ಡಿ. 8 ರಂದು ಭಾರತ್ ಬಂದ್ ಗೆ ನಿರ್ಧರಿಸಲಾಗಿದೆ.

ಕರ್ನಾಟಕ ಬಂದ್ ವಿಫಲ:

ಮರಾಠ ಅಭಿವೃದ್ಧಿ ಪ್ರಾಧಿಕಾರ ವಿರೋಧಿಸಿ ಕನ್ನಡ ಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ್ ಬಂದ್ ವಿಫಲವಾಗಿದೆ.

ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಬೆಂಗಳೂರು, ಮಂಡ್ಯ, ಮೈಸೂರು ಸೇರಿದಂತೆ ಇತರೆಡೆ ಪ್ರತಿಭಟನೆ ನಡೆಸಿ ಅಂಗಡಿ ಮುಂಗಟ್ಟು ಮುಚ್ಚಿಸುವ ಪ್ರಯತ್ನ ಮಾಡಿದರಾದರೂ ಪೊಲೀಸರು ಇದಕ್ಕೆ ಅವಕಾಶ ನೀಡಲಿಲ್ಲ.

ಕೆಎಸ್ಆರ್ ಟಿಸಿ ಬಸ್ ಗಳು ಸೇರಿದಂತೆ ಸಾರಿಗೆ ಸಂಚಾರ ಎಂದಿನಂತೆ ಇತ್ತು. ಬಂದ್ ಮಾಡಿಸಲು ಮಾಜಿ ಶಾಸಕ ವಾಟಾಳ್ ನಾಗರಾಜ್ ಸೇರಿದಂತೆ ಹಲವು ಮುಖಂಡರು ಮುಂದಾದರೂ ಅದಕ್ಕೆ ಅವಕಾಶ ನೀಡದ ಪೊಲೀಸರು ಬಂಧಿಸಿದರು.

ಅಂಗಡಿ ಮುಂಗಟ್ಟು ಎಂದಿನಂತೆ ತೆರೆದಿದ್ದವು, ವ್ಯಾಪಾರ ವಹಿವಾಟ ಎಂದಿನಂತೆ ನಡೆಯಿತು. ಒಟ್ಟಾರೆ ಕರ್ನಾಟಕ ಬಂದ್ ಗೆ ಜನರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿ ಬಂದ್ ವಿಫಲವಾಯಿತು.

Share This Article
Leave a comment