ಗಾಂಜಾ ಇನ್ನು ಮುಂದೆ ಮಾದಕವಲ್ಲ – ವಿಶ್ವ ಸಂಸ್ಥೆ

Team Newsnap
1 Min Read

ಅಪಾಯಕಾರಿ ಮಾದಕ ವಸ್ತುಗಳ ಪಟ್ಟಿಯಿಂದ ಗಾಂಜಾ ಹೊರಕ್ಕೆ
ಅಪಾಯಕಾರಿ ಮಾದಕ ವಸ್ತುಗಳ ಪಟ್ಟಿಯಿಂದ ಗಾಂಜಾ ಮತ್ತು ಗಾಂಜಾ ಅಂಟನ್ನು ಹೊರಗಿಡುವುದಕ್ಕೆ ವಿಶ್ವಸಂಸ್ಥೆಯಿಂದ ಗ್ರೀನ್‌ಸಿಗ್ನಲ್ ದೊರೆತಿದೆ.

ಡಿಸೆಂಬರ್ ೨ರಿಂದ ೪ರವರೆಗೆ ನಡೆದ ಮಾದಕ ದ್ರವ್ಯ ವಸ್ತುಗಳಿಗೆ ಸಂಬಂಧಿಸಿದ ವಿಶ್ವಸಂಸ್ಥೆ ಆಯೋಗದ ಅಧಿವೇಶನದಲ್ಲಿ ಭಾರತ, ಅಮೆರಿಕ ಸೇರಿದಂತೆ ೨೭ ದೇಶಗಳು ಪರವಾಗಿ ಮತ ಚಲಾಯಿಸಿದ್ದರಿಂದ ಈ ಬಗೆಗಿನ ನಿರ್ಣಯ ಅಂಗೀಕಾರವಾಗಿದೆ.

ಆದರೆ ಪಾಕಿಸ್ತಾನ, ಚೀನಾ ರಷ್ಯಾ ಸೇರಿ ೨೫ ರಾಷ್ಟ್ರಗಳು ನಿರ್ಣಯವನ್ನು ವಿರೋಧಿಸಿದವು. ಹೆರಾಯಿನ್‌ನಂಥ ಅಪಾಯಕಾರಿ ಮಾದಕ ವಸ್ತುಗಳ ಪಟ್ಟಿಯಿಂದ ಗಾಂಜಾವನ್ನು ಹೊರಗಿಡಲು ೫೩ ಸದಸ್ಯ ದೇಶಗಳು ಮತದಾನದಲ್ಲಿ ಪಾಲ್ಗೊಂಡಿದ್ದವು. ಈ ನಿರ್ಣಯದಿಂದಾಗಿ ಇನ್ನು ಮುಂದೆ ಔಷಧ ಹಾಗೂ ಚಿಕಿತ್ಸೆಗೆ ಗಾಂಜಾ ಬಳಸಲು ಅನುಕೂಲವಾದಂತಾಗಿದೆ.

ಎನ್‌ಡಿಪಿಎಸ್ ಕಾಯ್ದೆ ಮೃದು?


ಭಾರತದಲ್ಲಿ ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆ ( ಎನ್‌ಡಿಪಿಎಸ್) ೧೯೮೫ರ ರೀತ್ಯ ಗಾಂಜಾ ಉತ್ಪಾದನೆ, ಮಾರಾಟ, ಖರೀದಿ, ವಶದಲ್ಲಿಟ್ಟುಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದೆ. ಈಗ ಭಾರತ ವಿಶ್ವ ಸಂಸ್ಥೆ ಆಯೋಗದ ಅಧಿವೇಶನದಲ್ಲಿ ಭಾರತ ನಿರ್ಣಯದ ಪರವಾಗಿ ಮತದಾನ ಮಾಡಿರುವುದರಿಂದ ಮುಂದಿನ ದಿನಗಳಲ್ಲಿಎನ್‌ಡಿಪಿಎಸ್ ಕಾಯ್ದೆ ಮೃದುವಾಗುತ್ತದೆಯೇ ಎಂಬ ಪ್ರಶ್ನೆ ಉದ್ಭವವಾಗಿದೆ.

ನಮ್ಮ ದೇಶದಲ್ಲಿ ಅಪಾಯಕಾರಿ ಮಾದಕ ವಸ್ತುಗಳ ಪಟ್ಟಿಯಿಂದ ಗಾಂಜಾವನ್ನು ಹೊರಗಿಡಬೇಕಾದರೆ ಡ್ರಗ್ ಮತ್ತು ಕಾಸ್ಮೆಟಿಕ್ ಕಾಯ್ದೆಗೆ ತಿದ್ದುಪಡಿ ತರಬೇಕಾಗುತ್ತದೆ ಎಂದು ಹೇಳಲಾಗಿದೆ.

Share This Article
Leave a comment