ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಗೆ ಕೆಟ್ಟಮೇಲೆ ಬುದ್ಧಿಬಂದಿದೆ.ಇನ್ಮೇಲಾದ್ರೂ ಕಾಂಗ್ರೆಸ್ ಸಹವಾಸ ಮಾಡಬೇಡಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಕಿವಿಮಾತು ಹೇಳಿದ್ದಾರೆ.
ಬೆಳಗಾವಿಯಲ್ಲಿ ಶನಿವಾರ ನಡೆದ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆಯ ನಂತರ ಸುದ್ದಿಗಾರರ ಜೊತೆ ಮಾತನಾಡಿ,ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ನವರ ವಾಗ್ಯದ್ದ ಗಳನ್ನು ಕೇಳಿದ್ದೇನೆ.ಡಾ. ಅಂಬೇಡ್ಕರ್ ಬಹು ಹಿಂದೆ ಹೇಳಿದ್ದರು. ಕಾಂಗ್ರೆಸ್ ಉರಿಯುವ ಮನೆಯಾಗಿದೆ ಎಂದು ಆ ಮಾತು ನಿತ್ಯ ಸತ್ಯ ಎಂದು ಮೊನಚಾಗಿ ಚುಚ್ಚಿದರು.
ಕಾಂಗ್ರೆಸ್ ಕುರಿತು ಕುಮಾರಸ್ವಾಮಿ ಚಂಚಲ ನಿಲುವು ಹೊಂದಿರಬಾರದು. ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಅವರಿಂದಾಗಿ ನನಗೆ ಕೆಟ್ಟಹೆಸರು ಬರುವಂತಾಯಿತು ಎಂದು ಎಚ್‌ಡಿಕೆ ಕೊನೆಗೂ ನೋವು ತೊಡಿಕೊಂಡಿದ್ದಾ ರೆಂದು ಹೇಳಿದರು.
ಸಿದ್ದು ವೈಚಾರಿಕ ಕ್ರಾಸ್ ಬೀಡ್ :
ಸಿದ್ದರಾಮಯ್ಯನವರ ಕ್ರಾಸ್‌ಬೀಡ್ ವ್ಯಾಖ್ಯಾನ ಕುರಿತು ಮಾತನಾಡಿದ ರವಿ , ಡಿಎನ್‌ಎ – ಕ್ರಾಸ್‌ಬೀಡ್ ಬೇರೆ, ಬೇರೆ. ಐಡಿಯಾಲಜಿ ಕ್ರಾಸ್‌ಬೀಡ್ ಬೇರೆ. ವೈಚಾರಿಕ ಕ್ರಾಸ್ ಬೀಡ್ ಸಿದ್ದ ರಾಮಯ್ಯ ಆಗಿದ್ದಾರೆ ಎಂದು ವ್ಯಂಗ್ಯವಾಡಿದರು.
ನಾವಲ್ಲದೇ ಯಾರು ಜಾರಿ ತರುತ್ತಾರೆ? :
ಗೋಹತ್ಯೆ ನಿಷೇಧ ವಿಚಾರ ಪ್ರಸ್ತಾಪಿಸಿದ ಬಿಜೆಪಿ ನಾಯಕ, ಗೋಹತ್ಯೆ ನಿಷೇಧ ಕಾಯ್ದೆ ನಾವಲ್ಲದೆ ಇನ್ಯಾರು ಜಾರಿಗೊಳಿಸುತ್ತಾರೆ? ಎಂದು ಪ್ರಶ್ನಿಸಿ, ಮುಂದೆ ದೇಶದಲ್ಲಿ ಏಕರೂಪ
ನಾಗರಿಕ ಸಂಹಿತೆ( ಕಾಮನ್ ಸಿವಿಲ್ ಕೋಡ್) ಬಂದರೂ ಆಶ್ಚರ್ಯವಿಲ್ಲ ಎಂದರು.
ರೈತರ ಸಮಸ್ಯೆ ಕುರಿತಂತೆ ಮಾತನಾಡಿ, ಬಿಜೆಪಿ ಹಿಂದೆಯೂ ರೈತರ ಪರವಾಗಿತ್ತು, ಮುಂದೆಯೂ ಇರುತ್ತದೆ ಎಂದು ಭರವಸೆ ನೀಡಿದರು.
- ₹450 ಕೋಟಿ ವಂಚನೆ ಹಗರಣ: ಟೀಂ ಇಂಡಿಯಾ ಆಟಗಾರ ಶುಭಮನ್ ಗಿಲ್ಗೆ CID ಸಮನ್ಸ್
- ಮನು ಭಾಕರ್, ಡಿ ಗುಕೇಶ್ ಸೇರಿದಂತೆ ನಾಲ್ವರಿಗೆ 2024ರ ಖೇಲ್ ರತ್ನ ಪ್ರಶಸ್ತಿ
- 2025ರ ಕರ್ನಾಟಕ SSLC ಮಾದರಿ ಪ್ರಶ್ನೆಪತ್ರಿಕೆ ಪ್ರಕಟ
- KPSC ಮೂಲಕ ಕೃಷಿ ಇಲಾಖೆಯಲ್ಲಿ 945 ಹುದ್ದೆಗಳ ನೇಮಕಾತಿ: ಅರ್ಜಿ ಆಹ್ವಾನ
- 1.20 ಲಕ್ಷ ಲಂಚ ಸ್ವೀಕಾರ : ಲೋಕಾಯುಕ್ತ ಬಲೆಗೆ ಬಿದ್ದ ನೀರಾವರಿ ನಿಗಮದ ಅಧಿಕಾರಿಗಳು
More Stories
ಸಂಕ್ರಾಂತಿ ಬಳಿಕ ಬಸ್ ಟಿಕೆಟ್ ದರ ಏರಿಕೆ ಸಾಧ್ಯತೆ
ಹೊಸ ವರ್ಷದ ಸಂಭ್ರಮ: KSBCLನಿಂದ ಒಂದೇ ದಿನ 308 ಕೋಟಿ ರೂ. ಮದ್ಯ ಮಾರಾಟ
ಮೈಸೂರಲ್ಲಿ ಹೊಸ ವರ್ಷಾಚರಣೆಗೆ ಪೊಲೀಸ್ ಮಾರ್ಗಸೂಚಿ ಜಾರಿ