ಸುಳ್ಳು ಹೇಳುವುದರಲ್ಲಿ ಈ ಕುಮಾರಸ್ವಾಮಿ ನಿಸ್ಸೀಮ ಕಣ್ರಿ. ಅಪ್ಪ- ಮಗ ಕಣ್ಣೀರು ಹಾಕಿಕೊಂಡೇ ಬಂದ್ರು. ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲಿ ಕುಳಿತು ಆಡಳಿತ ಮಾಡಿದ ಕೀರ್ತಿ ಇವರಿಗೆ ಸಲ್ಲಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ , ಕುಮಾರಸ್ವಾಮಿ ವಿರುದ್ದ ವಾಗ್ದಾಳಿ ಮಾಡಿದರು.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ದ ಮಾಡಿದ ಎಲ್ಲಾ ಆರೋಪಗಳಿಗೆ ಪ್ರತಿಕ್ರಿಯೆ ನೀಡಿ, ದೇವೇಗೌಡ, ಕುಮಾರಸ್ವಾಮಿಗೆ ಕಣ್ಣೀರು ಹಾಕುವುದೇ ಒಂದು ಸಂಸ್ಕೃತಿ ಇಂತಹವರು ಕಾಂಗ್ರೆಸ್ ನಂಬಿ ಮೋಸ ಹೋದ್ರಾ ಇವರು ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.
ಕುಮಾರಸ್ವಾಮಿ ಸಿಎಂ ಆಗಿದ್ದಾಗ ತಾಜ್ ವೆಸ್ಟ್ಂಡ್ ಹೋಟೆಲ್ ನಲ್ಲಿ ಕುಳಿತು ಆಡಳಿತ ಮಾಡಿದರು. ನಮ್ಮ ಶಾಸಕರ ಕೈ ಗೆ ಸಿಗುತ್ತಿರಲಿಲ್ಲ. ಶಾಸಕರ ಕಷ್ಟ ಸುಖ ವಿಚಾರಿಸಲಿಲ್ಲ. ಅದ್ಕೆ ಸರ್ಕಾರ ಬಿದ್ದು ಹೋಯಿತು ಎಂದು ಹೇಳಿದರು.
ಕುಮಾರಸ್ವಾಮಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮ. ಬೇಜವಾಬ್ದಾರಿ ಮನುಷ್ಯ. ಹಿಟ್ ಆ್ಯಂಡ್ ರನ್ ಮನುಷ್ಯ. ನಾವು ಜಾತ್ಯಾತೀತ ಪಕ್ಷ ಎಂದು ತಿಳಿದು ಸರ್ಪೋಟ್ ಮಾಡಿದೆವು. ಯಾರನ್ನೂ ನಾವು ಟ್ರ್ಯಾಪ್ ಮಾಡಿಲ್ಲ. ಈಗ ಗ್ರಾಪಂ ಚುನಾವಣಾ ಬಂದಿದೆ. ಅದ್ಕೆ ಈ ರೀತಿಯಲ್ಲಿ ಹೇಳಿ ಬಿಜೆಪಿಯಿಂದ ಸಿಂಪಥಿ ಸೃಷ್ಟಿ ಮಾಡುತ್ತಿದ್ದಾರೆ ಎಂದು ಸಿದ್ದು ದೂರಿದರು.
- ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: 6 ಜನರ ಮೃತದೇಹ ಪತ್ತೆ
- ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ: DYSP ವಿರುದ್ಧ ಗಂಭೀರ ಆರೋಪ
- ಐಶ್ವರ್ಯ ಗೌಡ ಪ್ರಕರಣ: ಸರ್ಕಾರದ ವಿರುದ್ಧ ಹೆಚ್ಡಿಕೆ ವಾಗ್ದಾಳಿ
- ಸಾರಿಗೆ ನೌಕರರಿಗೆ ಸರ್ಕಾರದ ಭರವಸೆ: 2 ಸಾವಿರ ಕೋಟಿ PF ನಿಧಿ ಬಿಡುಗಡೆ
- ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ: ಚುನಾವಣೆಯ ಮೂಲಕ ತೀರ್ಮಾನ
More Stories
ಕಾನ್ಸ್ಟೇಬಲ್ ನೇಮಕಾತಿ ದೈಹಿಕ ಪರೀಕ್ಷೆ: ಓಟದ ವೇಳೆ ಬಿದ್ದ ಯುವಕನ ದುರ್ಮರಣ
ಸಂಕ್ರಾಂತಿ ಬಳಿಕ ಬಸ್ ಟಿಕೆಟ್ ದರ ಏರಿಕೆ ಸಾಧ್ಯತೆ
ಹೊಸ ವರ್ಷದ ಸಂಭ್ರಮ: KSBCLನಿಂದ ಒಂದೇ ದಿನ 308 ಕೋಟಿ ರೂ. ಮದ್ಯ ಮಾರಾಟ