ನಾಳೆ ಕರ್ನಾಟಕ ಬಂದ್: ಸಾರಿಗೆ, ಸರ್ಕಾರಿ ಕಚೇರಿಗಳು ಎಂದಿನಂತೆ

Team Newsnap
1 Min Read
Karnataka bandh on June 22 to condemn the increase in electricity rates ವಿದ್ಯುತ್ ದರ ಏರಿಕೆ ಖಂಡಿಸಿ ಜೂನ್ 22ರಂದು ಕರ್ನಾಟಕ ಬಂದ್ #Bandh
  • ಕನ್ನಡಿಗರ ಪ್ರತಿಷ್ಠೆ ಬಂದ್ . ಇದು ಬಿವೈಎಸ್ – ಕನ್ನಡಿಗರ ನಡುವಿನ ಪೈಟ್ – ವಾಟಾಳ್ ನಾಗರಾಜ್
  • ಕರ್ನಾಟಕ ವನ್ನು ಸಂಪೂರ್ಣ ಬಂದ್ ಮಾಡುತ್ತವೆ – ಸಾ ರಾ ಗೋವಿಂದು
  • ನಮ್ಮದು ಬಂದ್ ಗೆ ನೈತಿಕ ಬೆಂಬಲ ಪ್ರವೀಣ್ ಶೆಟ್ಟಿ
  • ಬಂದ್ ಗೆ ಕರವೇ ನಾರಾಯಣ ಗೌಡರ ಹಾಗೂ ಶಿವ ರಾಮೇಗೌಡರ ಬಣದಿಂದಲೂ ಬೆಂಬಲ
  • ನಾಳೆ ಸಿಎಂ ಮನೆಗೆ ಜಾಥ ನಡೆಸಲು ಸಿದ್ದತೆ.

ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿರುವ ಸರ್ಕಾರದ ನಿರ್ಧಾರ ವಿರೋಧಿಸಿ ನಾಳೆ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ.

ಕನ್ನಡ ಪರ ಸಂಘಟನೆಗಳಲ್ಲಿ ಒಮ್ಮತ ಇಲ್ಲದಿರುವುದರಿಂದ ನಾಳೆ ಬಂದ್ ಪರಿಣಾಮಕಾರಿಯಾಗಿ ಇರುವುದಿಲ್ಲ . ಆದರೂ ಬಂದ್ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಬಿಗಿ ಬಂದೋಬಸ್ತು ಮಾಡಲಾಗಿದೆ. ಬಲವಂತವಾಗಿ ಬಂದ್ ಮಾಡಿಸಿದರೆ ಕಠಿಣ ಕ್ರಮ ಅನಿವಾರ್ಯ ಎಂದು ಪೋಲೀಸರು ತಿಳಿಸಿದ್ದಾರೆ.

ರಾಜ್ಯದ ಅನೇಕ ಪ್ರಮುಖ ನಗರ‌ ಹಾಗೂ‌ ಪಟ್ಟಣಗಳಲ್ಲಿ ಬಂದ್ ಗೆ ಹೆಚ್ಚು ಇಲ್ಲ.

ಆದರೆ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡಿ ಸತ್ಯಾಗ್ರಹ ಮಾಡುವುದಾಗಿ ಚಳವಳಿಗಾರರು ಹೇಳಿದ್ದಾರೆ.

ನಾಳೆ ಬಂದ್ ಏನಿರುತ್ತದೆ ? ಏನಿರೋಲ್ಲಾ?

  • ಸಾರಿಗೆ ಸೇವೆಯಲ್ಲಿ ಯಾವುದೇ
    ವ್ಯತ್ಯಯ ಇರುವುದಿಲ್ಲ.
  • ಬ್ಯಾಂಕ್, ಸರ್ಕಾರಿ ಕಚೇರಿಗಳಲ್ಲಿ ಎಂದಿನಂತೆ ಕೆಲಸ ನಿರ್ವಹಣೆ
  • ಹೋಟೆಲ್ ಗಳು ಮುಚ್ಚುವುದಿಲ್ಲ.

ಏನು ಇರೋಲ್ಲಾ?

  • ಬೀದಿ ಬದಿಯ ವ್ಯಾಪಾರ, ಓಲಾ ಊಬರ್ ಸೇರಿದಂತೆ ಖಾಸಗಿ ಸಂಚಾರ
  • ಬಲವಂತವಾಗಿ ಬಂದ್ ಮಾಡಿಸೋಲ್ಲಾ -ಚಳುವಳಿಗಾರರು

ನಾಳೆ ಬಂದ್ ನ ರೂಪರೇಷೆಗಳ ಬಗ್ಗೆ ನಿರ್ದಿಷ್ಟವಾಗಿ ಹೇಳುವುದು ಕಷ್ಟ ಸಾಧ್ಯ. ಸರ್ಕಾರ ಹಾಗೂ ಕನ್ನಡ ಪರ ಸಂಘಟನೆ ಗಳ ನಡುವೆ ನಡೆದಿರುವ ಹೋರಾಟ ತಾರಕಕ್ಕೇರುವುದು ಮಾತ್ರ ನಿಜ.

Share This Article
Leave a comment