ಮಾಜಿ ಮಂತ್ರಿ ವರ್ತೂರು ಪ್ರಕಾಶ್ ಕಿಡ್ನ್ಯಾಪ್ ಪ್ರಕರಣಕ್ಕೆ ಮತ್ತೆ ಹೊಸ ತಿರುವು ಸಿಗುತ್ತಿದೆ .
ಈ ಅಪಹರಣದ ಹಿಂದೆ ಎರಡನೇ ಪತ್ನಿ ಹಾಗೂ ಆಕೆಯ ಮೊದಲ ಗಂಡನ ಪುತ್ರನ ಕೈವಾಡವೂ ಎಂಬ ಸಂಶಯ ಪೋಲೀಸರನ್ನು ಕಾಡುತ್ತಿದೆ.
ಪ್ರಕಾಶ್ ಅಪಹರಣ ತನಿಖೆ ವೇಳೆ ಸಾಕಷ್ಟು ಸಂಶಯಗಳು ಎದುರಾಗಿವೆ. ಈ ನಡುವೆ ಹೊಸದೊಂದು ಸಂಗತಿ ಅನುಮಾನ ಹುಟ್ಟಿಸಿದೆ.
ಈ ಕುರಿತು ತನಿಖೆ ನಡೆಸುತ್ತಿರುವ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.ಎರಡನೇ ಹೆಂಡತಿ ಮತ್ತು ಆಕೆಯ ಮೊದಲ ಗಂಡನ ಪುತ್ರ ಸೇರಿ ವರ್ತೂರು ಪ್ರಕಾಶ್ ಅವರನ್ನು ಅಪಹರಣ ಮಾಡಿಸಿರಬಹುದು ಎನ್ನುವ ಅನುಮಾನಕ್ಕೆ ಸಾಕ್ಷಿ ಹುಡುಕುತ್ತಿದ್ದಾರೆ.
ವರ್ತೂರು ಪ್ರಕಾಶ್ ರ ಮೊದಲ ಪತ್ನಿ ಡೆಂಗ್ಯೂನಿಂದ 2017 ತೀರಿಕೊಂಡರು. ಆಗ ಪ್ರಕಾಶ್ ತಮ್ಮ ತೋಟದ ಮನೆ ನೋಡಿಕೊಳ್ಳುತ್ತಿದ್ದ ಮಹಿಳೆಯನ್ನೇ ವಿವಾಹವಾದರು.
ಪ್ರಕಾಶ್ ಗೆ ಮೊದಲೇ ಹೆಂಡತಿ ಇಬ್ಬರು ಗಂಡು ಮಕ್ಕಳಿದ್ದ ಕಾರಣ ಆಸ್ತಿ ವಿವಾದ ಇತ್ತು. ಫಾರ್ಮ್ ಹೌಸ್ ಬೇರೆಯವರಿಗೆ ಕೊಡುವ ನಿರ್ಧಾರಕ್ಕೆ ಬರಲಾಗಿತ್ತು. ಆ ಕಾರಣಕ್ಕಾಗಿ ಎರಡನೇ ಪತ್ನಿ ಹಾಗೂ ಆಕೆಯ ಮೊದಲ ಪತಿಯ ಮಗ ಸೇರಿ ಅಪಹರಣ ಮಾಡಿಸಿರಬಹುದು ಎಂಬ ಅನುಮಾನ ಪೋಲೀಸರನ್ನು ತೀವ್ತವಾಗಿ ಕಾಡುತ್ತಿದೆ.
ಈ ನಡುವೆ ಕಾರಿನಲ್ಲಿ ಸಿಕ್ಕ ವೇಲ್ ಯಾರದ್ದು? ಹುಡುಗಿಯ ಡ್ರೆಸ್ ಎಲ್ಲಿಂದ ಬಂತು? ಹನಿ ಟ್ರ್ಯಾಪ್ ಗೆ ಬಲಿಯಾಗಿದ್ದು ನಿಜವೆ ಎಂಬ ಹಲವಾರು ಅಂಶಗಳನ್ನು ಪೋಲೀಸರು ತುಂಬಾ ಆಳವಾಗಿ ತನಿಖೆ ಮಾಡುತ್ತಿದ್ದಾರೆ.
- KSRTC : ಪ್ರಯಾಣಿಕರು UPI ಮೂಲಕ ಟಿಕೆಟ್ ಖರೀದಿಸಲು ಅವಕಾಶ
- Weekly Horoscope: ವಾರದ ಜಾತಕ ನ. 24 ರಿಂದ ನ. 30, 2024.
- ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು
- ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಗೆಲುವು: ಅಧಿಕೃತ ಘೋಷಣೆ ಬಾಕಿ
- ರಾಜ್ಯದ ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ: ಬಿಜೆಪಿಗೆ ಆಘಾತ
More Stories
KSRTC : ಪ್ರಯಾಣಿಕರು UPI ಮೂಲಕ ಟಿಕೆಟ್ ಖರೀದಿಸಲು ಅವಕಾಶ
ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ