February 21, 2026

Newsnap Kannada

The World at your finger tips!

minister,congress,agriculture

State Agriculture Minister missing: Congress leaders appeal to search

ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು – ಕೖಷಿ ಸಚಿವ ಪಾಟೀಲ್

Spread the love

ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು ಎಂದು ರಾಜ್ಯ ಕೃಷಿ ಸಚಿವ
ಬಿ. ಸಿ. ಪಾಟೀಲ್ ಹೇಳಿದ್ದಾರೆ.

ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದ ಕಾಯ೯ಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಕೃಷಿ ಸಚಿವರು ಸಮಸ್ಯೆಗಳಲ್ಲಿ ಸಿಲುಕಿರುವ ರೈತರು ಶ್ರಮವಹಿಸಿ ಸಮಸ್ಯೆಗಳ ಸುಳಿಯಿಂದ ಹೊರಬರುವಂತಾಗಬೇಕು ಎಂದು ತಿಳಿಸಿದರು.
ರೈತರು ಸಮಸ್ಯೆಗಳನ್ನು ಎದುರಿಸಿ ಹೋರಾಟ ಮಾಡಿ ಬದುಕಬೇಕು.
ಅದು ಬಿಟ್ಟು ಹೇಡಿಗಳಂತೆ ಸಾವಿಗೆ ಶರಣಾಗಬಾರದು ಎಂದು ಸಲಹೆ ನೀಡಿದರು.

ರೈತರು ಹೆಂಡತಿ, ಮಕ್ಕಳನ್ನು ನೋಡಿಕೊಳ್ಳಲಾಗದೇ ಆತ್ಮಹತ್ಯೆ ಮಾಡಿಕೊಳ್ಳುವಾತ ಹೇಡಿ ಅನ್ನದೇ ಮತ್ತೇನು ಹೇಳಬೇಕು. ಈ
ಭೂಮಿಯನ್ನೇ ನಂಬಿಕೊಂಡು ಜೀವನದಲ್ಲಿ ಮುಂದೆ ಬಂದ ಅನೇಕರು ನಮ್ಮ ಮುಂದಿದ್ದಾರೆ ಎಂದು ರೈತ ಮಹಿಳೆಯರೊಬ್ಬರ ಸಕ್ಸಸ್ ಸ್ಟೋರಿ ಹೇಳಿದರು.

ರೈತರು ಸಮಸ್ಯೆ ಇದೆ ಎಂದು ಸಾವಿಗೆ ಶರಣಾಗುವುದು ಎಷ್ಟು ಸರಿ.
ಈಸಬೇಕು, ಇದ್ದು ಜಯಿಸಬೇಕು . ಅದು ಬಿಟ್ಟು ಯಾರೇ ಆತ್ಮಹತ್ಯೆ ಮಾಡಿ ಕೊಂಡರೂ ಅವು ಹೇಡಿಗಳ ಕೆಲಸ ಎಂದು ಪಾಟೀಲ್ ಜರಿದರು.

ಸಕಾ೯ರ ಸದಾ ರೈತರ ನೆರವಿಗೆ ಬದ್ದವಾಗಿದೆ – ಯಾರೂ ಸಮಸ್ಯೆಗಳಿಗೆ ಹೆದರಬೇಕಾಗಿಲ್ಲ ಎಂಬ ಸಂದೇಶವನ್ನು
ಸಚಿವರು ನೀಡಿದರು.

error: Content is protected !!