ಅನಾರೋಗ್ಯದ ನಡುವೆಯೂ ಸೂಪರ್ ಸ್ಟಾರ್ ರಜನೀಕಾಂತ್ ರಾಜಕೀಯಕ್ಕೆ ಪಾದಾರ್ಪಣೆ ಮಾಡುವುದು ಪಕ್ಕಾ ಅದಂತಾಗಿದೆ.
ಈ ಡಿಸೆಂಬರ್ ಅಂತ್ಯದೊಳಗೆ ತಾವೇ ಒಂದು ಪಾರ್ಟಿ ಕಟ್ಟಿ ಹೆಸರು ಘೋಷಣೆ ಮಾಡಲು ರಜನಿ ಸಜ್ಜಾಗಿದ್ದಾರೆ. ಆ ಮೂಲಕ ರಜನಿಕಾಂತ್ ರಾಜಕೀಯಕ್ಕೆ ಅಧಿಕೃತವಾಗಿ ಪಾದಾರ್ಪಣೆ ಮಾಡಲು ನಿಶ್ಚಯ ಮಾಡಿದಂತಾಗಿದೆ.
ರಜನಿಕಾಂತ್ ಬಿಜೆಪಿಗೆ ಸೇರ್ಪಡೆ ಆಗಲಿದ್ದಾರೆ ಎನ್ನುವುದು ವದಂತಿ ಆದಂತಾಗಿದೆ. ಏಕೆಂದರೆ ರಜನೀಯೇ ಒಂದು ಸ್ವಂತ ಪಕ್ಷ ಘೋಷಣೆಗೆ ಅಣಿಯಾಗಿದ್ದಾರೆ .
ಡಿಸೆಂಬರ್ 31 ಕ್ಕೆ ರಜನಿಕಾಂತ್ ಅಧಿಕೃತವಾಗಿ ಹೊಸ ಪಕ್ಷ ಘೋಷಣೆ ಮಾಡಲು ಮೂಹೂರ್ತ ನಿಗದಿಯಾಗಿದೆ. 2021 ರಲ್ಲಿ ತಮಿಳುನಾಡಿನಲ್ಲಿ ವಿಧಾನ ಸಭೆ ಚುನಾವಣೆಯಲ್ಲಿ ರಜನಿಕಾಂತ್ ಸ್ಪರ್ಧೆ ಮಾಡಲಿದ್ದಾರೆ ಎನ್ನುವುದು ದಿಟವಾಗಿದೆ.
ತಮಿಳುನಾಡಿನಲ್ಲಿ ಎಐಡಿಎಂಕೆ ಜೊತೆ ಬಿಜೆಪಿ ಮೈತ್ರಿ ಮಾಡಿಕೊಳ್ಳುವುದು ನಿಶ್ಚಿತ. ಡಿಎಂಕೆ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳುವುದು ಇನ್ನೂ ಅಡ್ಡಗೋಡೆ ಮೇಲೆ ದೀಪ ಇಟ್ಟ ಹಾಗಿದೆ.
ಹಿರಿಯ ರಾಜಕಾರಣದಲ್ಲಿ ವೈಕೋ ಮತ್ತು ವಿಜಯಕಾಂತ್ ಸ್ವಂತ ಪಕ್ಷದಿಂದ ಚುನಾವಣೆ ಎದುರಿಸಲಿದ್ದಾರೆ. ಈ ನಡುವೆ ರಜನಿಕಾಂತ್ ಸ್ಪರ್ಧೆ, ಆವರ ಪಕ್ಷದ ಹೋರಾಟ ಕೂಡ ಕುತೂಹಲ ಮೂಡಿಸಲಿದೆ.
- ಮಂಗಳೂರಿನಲ್ಲಿ ಬಾಲಕಿಗೆ ಸಾಮೂಹಿಕ ಅತ್ಯಾಚಾರ – ಮೂವರಿಗೆ ಜೀವಾವಧಿ ಶಿಕ್ಷೆ
- ಥಿಯೇಟರ್ ಮಾಲೀಕನನ್ನು ಕಟ್ಟಿಹಾಕಿ ಮನೆಯ ಕೆಲಸದವರಿಂದ ಕಳ್ಳತನ – ದಂಪತಿ ಬಂಧನ
- ನಾಲ್ವರು ಕೆ.ಎ.ಎಸ್. ಅಧಿಕಾರಿಗಳ ವರ್ಗಾವಣೆ
- ಮುಂದಿನ ಮೂರೂವರೆ ವರ್ಷ ನಾನೇ ಮುಖ್ಯಮಂತ್ರಿಯಾಗಿರುತ್ತೇನೆ: ಸಿಎಂ ಸಿದ್ದರಾಮಯ್ಯ
- ವಕ್ಫ್ ಭೂ ವಿವಾದದ ಕಲೆ ಈಗ ಲಾಲ್ ಬಾಗ್ ಉದ್ಯಾನವನದ ಮೇಲೂ!
More Stories
ನಾಲ್ವರು ಕೆ.ಎ.ಎಸ್. ಅಧಿಕಾರಿಗಳ ವರ್ಗಾವಣೆ
ವಕ್ಫ್ ಭೂ ವಿವಾದದ ಕಲೆ ಈಗ ಲಾಲ್ ಬಾಗ್ ಉದ್ಯಾನವನದ ಮೇಲೂ!
ಮಂಡ್ಯ: ಡಿಸಿ, ಎಸ್ಪಿ ಕಚೇರಿಗಳ ಸಮೀಪದಲ್ಲಿ ಗಾಂಜಾ ಗಿಡಗಳು ಪತ್ತೆ!