ರಾಜ್ಯದಲ್ಲಿ ಡಿ. 26- ಜ.2ರ ತನಕ ರಾತ್ರಿ ಕರ್ಫ್ಯೂ ? ತಜ್ಞರ ಸಲಹೆಗೆ ಸರ್ಕಾರದ ಗ್ರೀನ್ ಸಿಗ್ನಲ್?

Team Newsnap
1 Min Read

2021 ರ ಹೊಸ ವರ್ಷವನ್ನು ಸಂಭ್ರಮ, ಮೋಜು, ಮಸ್ತಿಗಳಿಂದ ಬರಮಾಡಿ ಕೊಳ್ಳುವ ಜನರ ಲೆಕ್ಕಾಚಾರಕ್ಕೆ ಸರ್ಕಾರ ಬ್ರೇಕ್ ಹಾಕುವ ಸಾಧ್ಯತೆಗಳು ನಿಚ್ಚಳವಾಗಿದೆ.

ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಕಡಿಮೆಯಾಗಿದೆ. ಆದರೆ ಚಳಿಗಾಲಕ್ಕೆ ಮತ್ತೆ ಎರಡನೇ ಬಾರಿಗೆ ಅಲೆ ಅಪ್ಪಳಿಸುವ ಅಪಾಯವಿರುವ ಹಿನ್ನೆಲೆಯಲ್ಲಿ ರಾತ್ರಿ ಕರ್ಫ್ಯೂ ವಿಧಿಸುವಂತೆ ತಜ್ಙರು ಸರ್ಕಾರಕ್ಕೆ ಸಲಹೆ ನೀಡಿರವ ಹಿನ್ನೆಲೆಯಲ್ಲಿ ಸರ್ಕಾರ ಹೊಸವರ್ಷಾಚರಣೆಗೆ ಬ್ರೇಕ್ ಹಾಕುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಈಗಾಗಲೇ ತಾಂತ್ರಿಕ ಸಲಹಾ ಸಮಿತಿ ರಾಜ್ಯ ಸರಕಾರಕ್ಕೆ ವರದಿ ಸಲ್ಲಿಸಿದೆ. ಈ ತಿಂಗಳಾಂತ್ಯದಲ್ಲಿ ರಾತ್ರಿ ಕರ್ಫ್ಯೂ ಜಾರಿ ಮಾಡುವಂತೆ ಸಲಹೆ ನೀಡಿದೆ. ಡಿಸೆಂಬರ್ ಡಿ 26 ರಿಂದ ಜನವರಿ2 ರ ತನಕ ಹೊಸವರ್ಷಾಚರಣೆಯಲ್ಲಿ ಜನತೆ ಮೈ ಮರೆಯುವ ಅಪಾಯವಿದೆ. ಹೀಗಾಗಿ 8 ದಿನಗಳ ಕಾಲರಾತ್ರಿ ಕರ್ಫ್ಯೂ ವಿಧಿಸುವುದು ಹೆಚ್ಚು ಸುರಕ್ಷಿತ ಎಂದು ಸಮಿತಿ ಹೇಳಿದೆ.

ಈಗಾಗಲೇ ಬಿಬಿಎಂಪಿಯವರು ಬೆಂಗಳೂರಿನ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಸೇರಿದಂತೆ ಪ್ರಮುಖ ಏರಿಯಾಗಳಲ್ಲಿ ಹೊಸ ವರ್ಷಾಚರಣೆಯನ್ನು ಬ್ಯಾನ್ ಮಾಡಿದ್ದಾರೆ.

ಡಿ 26 ರ ರಾತ್ರಿಯಿಂದ ಜನರು ಮನೆಯಿಂದಲೇ ಹೊರಗೆ ಬರುವಂತೆ ಇಲ್ಲ. ಹೀಗಾಗಿ ವರ್ಷಾಚರಣೆಗೆ ಈ ಬಾರಿ ಬ್ರೇಕ್ ಬೀಳಲಿದೆ.

Share This Article
Leave a comment