ಗ್ರಾಮ ಪಂಚಾಯತಿ ಚುನಾವಣೆಗೆ ಏನೆಲ್ಲಾ ಸಿದ್ದತೆ ? ಹೇಗಿರಬೇಕು ?

Team Newsnap
1 Min Read

ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧೆ ಮಾಡಬೇಕಾದರೆ ಕೆಲವೊಂದು ಅರ್ಹತೆಗಳು ಇವೆ ಹಾಗೂ ಅದಕ್ಕೂ ಸೂಕ್ತ ದಾಖಲೆಗಳನ್ನು ಸಲ್ಲಿಸ ಬೇಕಾಗುತ್ತದೆ.

ಚುನಾವಣೆಗೆ ಸ್ಪರ್ಧೆ ಮಾಡಬೇಕಾದರೆ ಯಾವೆಲ್ಲಾ ದಾಖಲೆಗಳು ಬೇಕು?
ಅರ್ಹತೆಗಳೇನು..? ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಲು ಅವಶ್ಯವಿರುವ ದಾಖಲೆಗಳು ಯಾವುವು? ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

ಚುನಾವಣೆಗೆ ಸ್ಪರ್ಧಿಸಲುಬೇಕಾಗುವ ದಾಖಲೆಗಳು :

  • ಪತ್ರ-5ರ ನಾಮಪತ್ರ ( ಒಬ್ಬ ವ್ಯಕ್ತಿ ನಾಲ್ಕು ನಾಮಪತ್ರಗಳನ್ನು ಸಲ್ಲಿಸಬಹುದು)
  • ಜಾತಿ ಪ್ರಮಾಣ ಪತ್ರ
  • ಘೋಷಣಾ ಪತ್ರ (ರೂ.20ರ ಮುಖಬೆಲೆಯ 2 ಪ್ರತಿಗಳಲ್ಲಿ. ಒಂದು ಪ್ರತಿ ಝರಾಕ್ಸ್ ಅಫಿಡವಿಟ್)
  • ಠೇವಣಿ ಹಣ – ಸಾಮಾನ್ಯ ಸ್ಥಾನಕ್ಕೆ ರೂ.200, ಮೀಸಲಿರಿಸಿದ ಸ್ಥಾನಗಳಿಗೆ ರೂ.100 ( ಎಸ್ ಸಿ, ಎಸ್ಟಿ, ಬಿಸಿಎ, ಬಿಸಿಬಿ ಪ್ರವರ್ಗಗಳಿಗೆ ಮತ್ತು ಮಹಿಳೆಯರಿಗೆ)
  • ಮತಪತ್ರದಲ್ಲಿ ಮುದ್ರಿಸಬೇಕಾದ ಹೆಸರಿನ ಬಗ್ಗೆ ಲಿಖಿತ ಪತ್ರ
  • ಅಭ್ಯರ್ಥಿಗಳು ಚುನಾವಣಾಧಿಕಾರಿಗಳಿಗೆ ಸಲ್ಲಿಸಬೇಕಾದ ಹೆಚ್ಚುವರಿ ಮಾಹಿತಿ ( ಬಯೋಡಟಾ )
  • ಗ್ರಾಮ ಪಂಚಾಯಿತಿಯಿಂದ ಪಡೆದ ಬೇಬಾಕಿ ಪ್ರಮಾಣ ಪತ್ರ
  • ಅಭ್ಯರ್ಥಿಗಳ 3 ಪಾಸ್ ಪೋರ್ಟ್ ಅಳತೆಯ ಭಾವಚಿತ್ರಗಳು
  • ಇತ್ತೀಚಿನ ಮತದಾರರ ಗುರುತಿನ ಚೀಟಿ
  • ಆಧಾರ್ ಕಾರ್ಡ್ ಝರಾಕ್ಸ್ ಪ್ರತಿ

ಗ್ರಾ.ಪಂ ಚುನಾವಣೆಗೆ ಸ್ಪರ್ಧಿಸಲು ಬೇಕಾದ ಅರ್ಹತೆಗಳು :

  • ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತದಾರರ ಪಟ್ಟಿಯಲ್ಲಿ ಮತದಾನದ ಹಕ್ಕು ಹೊಂದಿರಬೇಕು
  • ಅಭ್ಯರ್ಥಿಗೆ 21 ವಯಸ್ಸಿಗಿಂತ ಕಡಿಮೆ ಇರಬಾರದು.
  • ಸರ್ಕಾರಿ ನೌಕರನಾಗಿರಬಾರದು.
  • ಗ್ರಾ. ಪಂ. ವ್ಯಾಪ್ತಿಯಲ್ಲಿ ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆದಾರರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ (ಹೊಸ ನಿಯಮ)
Share This Article
Leave a comment