March 14, 2026

Newsnap Kannada

The World at your finger tips!

film,Apple Box,production

Apple Box Studios: A new film production company from actress Ramya ಆಪಲ್ ಬಾಕ್ಸ್ ಸ್ಟುಡಿಯೋಸ್ : ನಟಿ ರಮ್ಯಾರಿಂದ ಹೊಸ ಚಿತ್ರ ನಿರ್ಮಾಣ ಸಂಸ್ಥೆ

ಮೋಹಕ ತಾರೆ, ರಮ್ಯಾ ಜಸ್ಟ್ 38 – ಹುಟ್ಟು ಹಬ್ಬದಂದೂ ಅಭಿಮಾನಿಗಳಿಗೆ ಸಿಗದೇ ಹೋಗಿದ್ದೆಲ್ಲಿಗೆ?

Spread the love

ಇಂದು ಮೋಹಕ ತಾರೆ , ಮಾಜಿ ಸಂಸದೆ ರಮ್ಯಾ ಹುಟ್ಟು ಹಬ್ಬ. ಲೆಕ್ಕಾಚಾರದ ಪ್ರಕಾರ 38 ನೇ ವರ್ಷದ ಹುಟ್ಟು ಹಬ್ಬ. ಆದರೆ ಅಭಿಮಾನಿಗಳಿಗೆ ಮಾತ್ರ ಇನ್ನೂ ಸ್ವೀಟ್ ಸಿಕ್ಟೀನ್ ಅಂತೆ.

ಏನೇ ಇರಲಿ ಹುಟ್ಟು ಹಬ್ಬದ ದಿನವೂ ನಾನು ಎಲ್ಲಿದ್ದೇನೆ ಎಂಬ ಸುಳಿವು ಕೊಡದೇ ನಾಪತ್ತೆಯಾಗಿದ್ದರೂ ಅಭಿಮಾನಿಗಳಿಗೆ ಕನವರಿಕೆ ಮಾತ್ರ ತಪ್ಪಿಲ್ಲ.

ಒಂದು ಕಾಲದಲ್ಲಿ ರಮ್ಯಾ ಹುಟ್ಟುಹಬ್ಬ ಮಂಡ್ಯದಲ್ಲಿ ತುಂಬಾ ಗ್ರ್ಯಾಂಡ್ ಆಗುತ್ತಿತ್ತು. ಊರು ತುಂಬಾ ಫ್ಲೆಕ್ಸ್ ಹಾಕಿ, ರೋಗಿಗಳಿಗೆ ಹಣ್ಣು ಹಂಪಲು ಹಂಚಿ ಆಕೆಗೆ ಶುಭ ಹಾರೈಕೆ ಮಾಡುತ್ತಿದ್ದ ಕಾಲ ಇತಿಹಾಸ ಪುಟ ಸೇರಿದೆ.

ಮಂಡ್ಯದಿಂದ ರಾಜಕಾರಣ ಆರಂಭಿಸಿದ ಮೋಹಕ ನಟಿ ಕಾಂಗ್ರೆಸ್ ಪಾರ್ಟಿ ಮೂಲಕ ಡೆಲ್ಲಿಯಲ್ಲೂ ರಾಜಕಾರಣ ಮಾಡಿ ವಾಪಸ್ಸು ಬಂದರು. ಪಕ್ಷದ ಸಾಮಾಜಿಕ ಜಾಲ ತಾಣದ ನಿರ್ವಹಣೆಯ ಮುಖ್ಯಸ್ಥೆಯಾಗಿ ಕಾರ್ಯ ಮಾಡಿದರು. ನಂತರ ಡೆಲ್ಲಿಗೆ ಸಲಾಂ ಹೊಡೆದು ಬಂದ ರಮ್ಯಾ ಕಾಂಗ್ರೆಸ್ ಪಕ್ಷದಿಂದ ದೂರವಾದರು ಮಾತ್ರವಲ್ಲ ಅವರನ್ನೇ ನಂಬಿದ್ದ ಅಭಿಮಾನಿಗಳಿಂದಲೂ ಅಂತರ ಕಾಯ್ದುಕೊಂಡು ಬಂದಿದ್ದಾರೆ.

ಮಾಲ್ಡೀವ್ಸ್ ನಲ್ಲಿ ಬರ್ಥಡೆ ಆಚರಣೆ?

ಇವತ್ತು ರಮ್ಯಾಳ 38 ನೇ ವರ್ಷದ ಹುಟ್ಟು ಹಬ್ಬವನ್ನು ದೂರದ ಮಾಲ್ಡೀವ್ಸ್ ನಲ್ಲಿ ಆಚರಿಸಿಕೊಳ್ಳುತ್ತಿದ್ದಾರೆಂಬ ಸುದ್ದಿ ಇದೆ. ಈ ಸಂಗತಿಯನ್ನು ಯಾರೂ ದೃಢಪಡಿಸಲು ಸಿದ್ದರಿಲ್ಲ. ಅಲ್ಲಗಳೆಯುತ್ತಲೂ ಇಲ್ಲ. ಅಭಿಮಾನಿಗಳಿಗೂ ರಮ್ಯಾ ಎಲ್ಲಿದ್ದಾರೆಂಬ ಸುಳಿವು ಸಿಗದೇ ಇರುವುದರಿಂದ ಆಕೆಯನ್ನು ನಂಬಿಕೊಂಡಿದ್ದ ಅಭಿಮಾನಿಗಳಿಗೆ ನಿರಾಶೆಯಾಗಿದೆ. ಆದರೂ ಒಂದು ಚಿಂತೆ ಅವರುಗಳನ್ನು ಕಾಡುತ್ತಿದೆ. ನಮ್ಮ ‘ ಪದ್ಮಾವತಿ ‘ ರಮ್ಯಾ ಮೇಡಂ ಮದುವೆ ಯಾವಾಗ ಎಂಬುದೇ ಯಕ್ಷ ಪ್ರಶ್ನೆಯಾಗಿದೆ ಅಂತೆ.

error: Content is protected !!