April 26, 2025

Newsnap Kannada

The World at your finger tips!

crime scene

ಕ್ಷಣಾರ್ಧದಲ್ಲಿ 33 ಲಕ್ಷ ಕಳ್ಳತನ: ಓರ್ವ ಆರೋಪಿ ಬಂಧನ

Spread the love

ಹಾವೇರಿ: ಕೇವಲ 33 ಸೆಕೆಂಡುಗಳಲ್ಲಿ ಕಾರಿನ ಗಾಜು ಒಡೆದು 33 ಲಕ್ಷ ರೂಪಾಯಿ ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಎಸ್ಪಿ ಅಂಶುಕುಮಾರ್ ತಿಳಿಸಿದ್ದಾರೆ.

ಬಂಧಿತನನ್ನು ಆಂಧ್ರಪ್ರದೇಶ ಮೂಲದ ಎ. ಜಗದೀಶ್ (28) ಎಂದು ಗುರುತಿಸಲಾಗಿದೆ. ನಾಲ್ಕು ದಿನಗಳ ಹಿಂದೆ ಈತ ಮತ್ತು ಸಹಚರರು ಕಾರಿನ ಗಾಜು ಒಡೆದು 33 ಲಕ್ಷ ರೂಪಾಯಿ ದೋಚಿ ಪರಾರಿಯಾಗಿದ್ದರು. ಈ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು, ಇದನ್ನಾಧರಿಸಿ ಪೊಲೀಸರು ತನಿಖೆ ಕೈಗೊಂಡು ಜಗದೀಶ್ ಅನ್ನು ಬಂಧಿಸಿದ್ದಾರೆ. ಸದ್ಯ ಆರೋಪಿಯಿಂದ 30 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ.

ಘಟನೆ ವಿವರ:
ಸಿವಿಲ್ ಕಾನ್‌ಟ್ರ್ಯಾಕ್ಟರ್ ಸಂತೋಷ್ ಹಾವೇರಿಯ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ದೈನಂದಿನ ವ್ಯವಹಾರಕ್ಕಾಗಿ 33 ಲಕ್ಷ ರೂಪಾಯಿ ಹಣವನ್ನು ಸಂಬಂಧಿಕರ ಖಾತೆಯಿಂದ ಚೆಕ್ ಮುಖಾಂತರ ಡ್ರಾ ಮಾಡಿಕೊಂಡಿದ್ದರು. ಹಣವನ್ನು ಕಾರಿನ ಹಿಂಭಾಗದ ಸೀಟಿನಲ್ಲಿಟ್ಟು ಹೊರಡುತ್ತಿದ್ದಂತೆ, ಕಳ್ಳರು ಈ ಸುಲಭಾವಕಾಶವನ್ನು ಬಳಸಿಕೊಂಡು ಕಾರಿನ ಗಾಜು ಒಡೆದು ಕ್ಷಣಾರ್ಧದಲ್ಲಿ ಹಣ ದೋಚಿ ಪರಾರಿಯಾದರು.
ಇದನ್ನು ಓದಿ -ಚಾಮರಾಜನಗರದಲ್ಲಿ ಖಾಸಗಿ ಬಸ್ ಪಲ್ಟಿ: ಓರ್ವ ಸಾವು, 30ಕ್ಕೂ ಹೆಚ್ಚು ಜನರಿಗೆ ಗಾಯ

ಈ ಕುರಿತು ಹಾವೇರಿ ಪೊಲೀಸರು ತನಿಖೆ ಮುಂದುವರಿಸಿಕೊಂಡು ಇನ್ನೂ ಪರಾರಿಯಾಗಿರುವ ಆರೋಪಿಗಳನ್ನು ಪತ್ತೆ ಹಚ್ಚಲು ಕಾರ್ಯಾಚರಣೆ ನಡೆಸುತ್ತಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!