ತಮ್ಮ ಜೆ.ಪಿ ನಗರ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಕೃಷಿ ಸಮ್ಮಾನ್ ಯೋಜನೆ ನಂತೆ ನಿರ್ವಹಣಾ ಧನವನ್ನು ನಿಯಮಿತವಾಗಿ ರೈತರ ಖಾತೆಗೆ ಜಮಾ ಮಾಡಲಾಗುತ್ತಿದೆ. ಅದೇ ರೀತಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವೂ ತನ್ನ ಗ್ಯಾರಂಟಿ ಯೋಜನೆಗಳ ಹಣವನ್ನು ಪ್ರತಿ ತಿಂಗಳು ಪಾವತಿಸಬೇಕೆಂದು ಒತ್ತಾಯಿಸಿದರು. “ನೀವು ನುಡಿದಂತೆ ನಡೆಯುತ್ತೇವೆ ಎಂದಿದ್ದೀರಾ, ಆದರೆ ನುಡಿದ ಮಾತುಗಳು ಮತ್ತು ನಡೆ ತಾನೇ ಭಿನ್ನವಾಗಿದೆ?” ಎಂದು ಪ್ರಶ್ನೆ ಎತ್ತಿದರು.
ಗ್ಯಾರಂಟಿ ಯೋಜನೆಗಳ ಪಾವತಿ ದಿನಾಂಕ ಘೋಷಿಸಿ:
ನಿಮ್ಮ ಸರ್ಕಾರದ ಬಳಿ ಹಣವಿದೆಯೋ ಇಲ್ಲವೋ ಸ್ಪಷ್ಟಪಡಿಸಿ. ಐದು ಗ್ಯಾರಂಟಿ ಯೋಜನೆಗಳಿಗೆ ಪೂರಕ ಹಣ ನೀಡುತ್ತಿಲ್ಲ. ಆದ್ದರಿಂದ ಸರಿಯಾಗಿ ಹಣ ಪಾವತಿ ಮಾಡುವ ದಿನಾಂಕವನ್ನು ನಿಗದಿಪಡಿಸಿ. ಹಣ ಹೇಗೆ ಹೊಂದಿಸುತ್ತೀರೋ ಗೊತ್ತಿಲ್ಲ, ಆದರೆ ಒಂದು ದಿನಾಂಕ ಘೋಷಿಸಿ ಗ್ಯಾರಂಟಿ ಹಣ ಪಾವತಿಸಬೇಕು ಎಂದು ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದರು.
ಪ್ರಿಯಾಂಕಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಟೀಕೆ:
ಚುನಾವಣೆ ಸಮಯದಲ್ಲಿ ಪ್ರಿಯಾಂಕಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು “ಕಟಾ ಕಟ್ ಹಣ ಜಮಾ ಮಾಡಿಸುತ್ತೇವೆ” ಎಂದು ಭರವಸೆ ನೀಡಿದ್ದರು. ಆದರೆ ಈಗ, ಹಣ ಕಟಾ ಕಟ್ ಆಗಿ ಬರುವುದಿಲ್ಲ, ಬದಲಿಗೆ ಕಟ್ ಕಟ್ ಆಗುತ್ತಿದೆ ಎಂದು ಕಿಡಿಕಾರಿದರು. ಹೆಣ್ಣು ಮಕ್ಕಳಿಗೆ ನಿಗದಿತ ಹಣ ಪಾವತಿಸಬೇಕು, ಗ್ಯಾರಂಟಿ ಹಣದ ಬಗ್ಗೆ ಸ್ಪಷ್ಟ ಉತ್ತರ ನೀಡಬೇಕು.
ಗ್ಯಾರಂಟಿ ಪರಿಷ್ಕರಣೆ ಕುರಿತ ಸಚಿವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ:
ಗ್ಯಾರಂಟಿ ಯೋಜನೆಗಳನ್ನು ಪರಿಷ್ಕರಣೆ ಮಾಡಲಾಗುತ್ತಿದೆ ಎಂಬ ಸಚಿವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಅವರು, “ನುಡಿದಂತೆ ನಡೆಯುವ ಸರ್ಕಾರವೆಂದರೆ, ಸಿಎಂ ಸಿದ್ದರಾಮಯ್ಯ, ಸಚಿವರು ಪೂರಕ ಭರವಸೆ ನೀಡಿದ್ದರು. ಆದರೆ ಈಗ ಅವರೇ ಯೂ-ಟರ್ನ್ ತೆಗೆದುಕೊಂಡಿದ್ದಾರೆ” ಎಂದು ಟೀಕಿಸಿದರು.ಇದನ್ನು ಓದಿ –ಇಡ್ಲಿ ಪ್ರಿಯರಿಗೆ ಶಾಕ್ – ಪ್ಲಾಸ್ಟಿಕ್ ಬಳಕೆಯಿಂದ ಕ್ಯಾನ್ಸರ್ ಅಪಾಯ!
“ನಮಗೆ ಅವರ ಗ್ಯಾರಂಟಿ ಬಗ್ಗೆ ಅಸೂಯೆ ಇಲ್ಲ. ಅವರು ಕೊಟ್ಟ ಮಾತು ಉಳಿಸಿಕೊಳ್ಳಲಿ. ಹೆಣ್ಣುಮಕ್ಕಳಿಗೆ ದ್ರೋಹ ಮಾಡಬೇಡಿ. ನಿಮ್ಮ ಭರವಸೆ ಈಡೇರಿಸಿ. ಹಣವಿದೆಯಾ ಇಲ್ಲವಾ ಎಂದು ಸ್ಪಷ್ಟಪಡಿಸಿ” ಎಂದು ನಿಖಿಲ್ ಕುಮಾರಸ್ವಾಮಿ ಸರ್ಕಾರವನ್ನು ಪ್ರಶ್ನಿಸಿದರು.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು