ಅಮಿತ್ (17) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯಾಗಿದ್ದು, ಫೆಬ್ರವರಿ 11ರಂದು ತರಗತಿಯಲ್ಲಿದ್ದಾಗ ಇಂಗ್ಲಿಷ್ ಪುಸ್ತಕ ತರುವುದಾಗಿ ಹೇಳಿ ಕ್ಲಾಸ್‌ರೂಮ್‌ನಿಂದ ಹೊರಗೆ ಹೋಗಿದ್ದ. ಅದಾದ ಬಳಿಕ ಅವನು ನಾಪತ್ತೆಯಾಗಿದ್ದ.
ನಿನ್ನೆ ಕೂಟುಪೊಳೆ ಬಳಿ ಅಮಿತ್‌ನ ಚಪ್ಪಲಿ ಪತ್ತೆಯಾಗಿತ್ತು. ಇಂದು ಅದೇ ನದಿಯಲ್ಲಿ ಅವನ ಶವ ಪತ್ತೆಯಾಗಿದೆ.
ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಇದಕ್ಕೆ ಕಾರಣ ಏನು ಎಂಬುದು ಇನ್ನೂ ತಿಳಿದು ಬಂದಿಲ್ಲ.ಇದನ್ನು ಓದಿ –ಮೆಟ್ರೊ ದರ ಪರಿಷ್ಕರಣೆ: ಶೇ 70ಕ್ಕಿಂತ ಹೆಚ್ಚು ಏರಿಕೆಯಾದಲ್ಲಿ ಶೇ 30ರಷ್ಟು ಇಳಿಕೆ
ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು