February 19, 2026

Newsnap Kannada

The World at your finger tips!

taj

ಮೈಸೂರಿನಲ್ಲಿ ಹೊಸ ಹೋಟೆಲ್ ಆರಂಭಿಸಲು ತಾಜ್ ಗ್ರೂಪ್ ಸಿದ್ಧ

Spread the love

ಮೈಸೂರು, ಫೆಬ್ರವರಿ 11: ಪ್ರತಿಷ್ಠಿತ ತಾಜ್ ಗ್ರೂಪ್ ಮೈಸೂರಿನಲ್ಲಿ ಹೊಸ ಐಷಾರಾಮಿ ಹೋಟೆಲ್ ಆರಂಭಿಸಲಿದೆ. ಜಂಗಲ್ ಲಾಡ್ಜಸ್‌ ಮತ್ತು ರೆಸಾರ್ಟ್ಸ್‌ (ಜೆಎಲ್‌ಆರ್‌) ಅಡಿಯಲ್ಲಿರುವ ಐತಿಹಾಸಿಕ ಲಲಿತ ಮಹಲ್ ಪ್ಯಾಲೇಸ್ ಹೋಟೆಲ್ ನಿರ್ವಹಣೆಯನ್ನು ಈ ಗ್ರೂಪ್ ಪಡೆಯುವುದಿಲ್ಲ ಎಂಬುದು ಖಚಿತವಾಗಿದೆ.

ಟಾಟಾ ಸಮೂಹದ ಇಂಡಿಯನ್ ಹೋಟೆಲ್ಸ್ ಕಂಪನಿ ಲಿಮಿಟೆಡ್ (ಐಎಚ್‌ಸಿಎಲ್) ತನ್ನ ತಾಜ್ ಬ್ರಾಂಡ್ ಮೂಲಕ ಮೈಸೂರಿನಲ್ಲಿ ಹೋಟೆಲ್ ಆರಂಭಿಸಲು ಒಪ್ಪಂದ ಮಾಡಿಕೊಂಡಿದೆ. ಈ ಒಡಂಬಡಿಕೆಯಿಂದ ರಾಡಿಸನ್ ಬ್ಲೂ ಪ್ಲಾಜಾ ಹೋಟೆಲ್‌ ನಿರ್ವಹಣೆ ತಾಜ್ ಗ್ರೂಪ್ ವಹಿಸಿಕೊಳ್ಳಲಿದೆ.

ಅಂತಾರಾಷ್ಟ್ರೀಯ ಮಟ್ಟದ ಸೇವೆ:
ಇಂಡಿಯನ್ ಹೋಟೆಲ್ಸ್ ಕಂಪನಿ ಈಗಾಗಲೇ 12 ದೇಶಗಳ 150ಕ್ಕೂ ಹೆಚ್ಚು ಸ್ಥಳಗಳಲ್ಲಿ ತನ್ನ ಹೋಟೆಲ್‌ಗಳನ್ನು ಯಶಸ್ವಿಯಾಗಿ ನಡೆಸುತ್ತಿದೆ. ಮೈಸೂರಿನಲ್ಲಿ ತಾಜ್ ಬ್ರಾಂಡ್ ಹೋಟೆಲ್ ಆರಂಭವಾಗುವುದರಿಂದ ದೇಶಿ ಮತ್ತು ವಿದೇಶಿ ಪ್ರವಾಸಿಗರಿಗೆ ಆಕರ್ಷಣೆಯ ಕೇಂದ್ರವಾಗಲಿದೆ.

ಹೋಟೆಲ್ ಒಪ್ಪಂದದ ವಿವರ:
ಮೈಸೂರಿನ ಎಂ.ಜಿ. ರಸ್ತೆಯಲ್ಲಿರುವ ರಾಡಿಸನ್ ಬ್ಲೂ ಪ್ಲಾಜಾ ಹೋಟೆಲ್‌ ಪ್ರಸ್ತುತ ಡಿಎಂ ಸೌತ್ ಇಂಡಿಯಾ ಹಾಸ್ಪಿಟಾಲಿಟಿ ಒಡೆತನದಲ್ಲಿದೆ. ಈ ಹೋಟೆಲ್ ನಿರ್ವಹಣೆ ಕುರಿತ ಒಪ್ಪಂದ ಮಾರ್ಚ್‌ನಲ್ಲಿ ಅಂತ್ಯಗೊಳ್ಳಲಿದ್ದು, ಅದನ್ನು ಮುಂದುವರಿಸಲು ಐಎಚ್‌ಸಿಎಲ್ ಜತೆಗೆ ಹೊಸ ಒಪ್ಪಂದ ಮಾಡಲಾಗಿದೆ. ಮಾರ್ಚ್ ಬಳಿಕ, ತಾಜ್ ಬ್ರಾಂಡ್ ಈ ಹೋಟೆಲ್ ನಿರ್ವಹಣೆ ಕೈಗೆತ್ತಿಕೊಳ್ಳಲಿದೆ.

ಲಲಿತ ಮಹಲ್ ಪ್ಯಾಲೇಸ್ ಹೋಟೆಲ್ ಗುತ್ತಿಗೆ ಪ್ರಕ್ರಿಯೆ:
ಈ ಮೊದಲು, ಐಎಚ್‌ಸಿಎಲ್ ಲಲಿತ ಮಹಲ್ ಪ್ಯಾಲೇಸ್ ಹೋಟೆಲ್‌ ನಿರ್ವಹಣೆಗೆ ಆಸಕ್ತಿ ತೋರಿಸಿದ್ದರೂ, ಷರತ್ತು ಹಾಗೂ ನಿಯಮಗಳ ಕಾರಣದಿಂದ ಈ ಯೋಜನೆಯಿಂದ ಹಿಂದೆ ಸರಿದಿದೆ.ಇದನ್ನು ಓದಿ –ಬೆಂಗಳೂರು ಹೊರತಾಗಿ ಇತರ ಭಾಗಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಆದ್ಯತೆ: ಡಿ.ಕೆ. ಶಿವಕುಮಾರ್

ಈಗ, ಜಂಗಲ್ ಲಾಡ್ಜಸ್‌ ಮತ್ತು ರೆಸಾರ್ಟ್ಸ್‌ (ಜೆಎಲ್‌ಆರ್‌) ಈ ಐತಿಹಾಸಿಕ ಹೋಟೆಲ್‌ನ್ನು ಖಾಸಗಿಯವರಿಗೆ ಗುತ್ತಿಗೆ ನೀಡಲು ಟೆಂಡರ್ ಪ್ರಕ್ರಿಯೆ ಆರಂಭಿಸಿದೆ. ಈ ಟೆಂಡರ್ ಫೆಬ್ರವರಿ 18ರಂದು ತೆರೆಯಲಿದ್ದು, ಲಲಿತ ಮಹಲ್ ಪ್ಯಾಲೇಸ್ ಹೋಟೆಲ್ ನಿರ್ವಹಣೆಯನ್ನು ಯಾವ ಖಾಸಗಿ ಸಂಸ್ಥೆ ವಹಿಸಿಕೊಳ್ಳಲಿದೆ ಎಂಬುದು ಮುಂದಿನ ದಿನಗಳಲ್ಲಿ ನಿರ್ಧಾರವಾಗಲಿದೆ.

error: Content is protected !!