ಅಹಮದಾಬಾದ್: ದೇಶದ ಪ್ರಮುಖ ಉದ್ಯಮಿಯಾದ ಗೌತಮ್ ಅದಾನಿ ಅವರ ಕಿರಿಯ ಪುತ್ರ ಜೀತ್ ಅದಾನಿ ಮತ್ತು ದಿವಾ ಜೈಮಿನ್ ಶಾ ವಿವಾಹ ಸರಳ ಮತ್ತು ಸಾಂಪ್ರದಾಯಿಕ ರೀತಿಯಲ್ಲಿ ನಡೆಯಿತು. ಫೆಬ್ರವರಿ 5 ರಂದು ಆರಂಭವಾದ ಈ ಸಮಾರಂಭವು ಶಾಂತಿಗ್ರಾಮ, ಅದಾನಿ ಟೌನ್‌ಶಿಪ್, ಅಹಮದಾಬಾದ್‌ನಲ್ಲಿ ಜೈನ ಹಾಗೂ ಗುಜರಾತಿ ಸಂಪ್ರದಾಯದ ಪ್ರಕಾರ ನೆರವೇರಿತು.
ಮಗನ ಮದುವೆಯನ್ನು ಸೀಮಿತ ಅತಿಥಿಗಳ ನಡುವೆ ಸರಳವಾಗಿ ಆಯೋಜಿಸಿರುವ ಗೌತಮ್ ಅದಾನಿ, ಸಾಮಾಜಿಕ ಕಾರ್ಯಗಳಿಗೆ ಬರೋಬ್ಬರಿ 10 ಸಾವಿರ ಕೋಟಿ ರೂ. ದಾನ ಮಾಡುವುದಾಗಿ ಘೋಷಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ಜೀತ್ ಮತ್ತು ದಿವಾ ಅವರ ಮದುವೆ ದೇವರ ದಯೆಯಿಂದ ಯಶಸ್ವಿಯಾಗಿ ನೆರವೇರಿತು. ಮದುವೆ ಚಿಕ್ಕದಾಗಿ ಆಯೋಜಿಸಿದ ಕಾರಣ ಅನೇಕ ಹಿತೈಷಿಗಳನ್ನು ಆಹ್ವಾನಿಸಲು ಸಾಧ್ಯವಾಗಲಿಲ್ಲ,” ಎಂದು ತಿಳಿಸಿದ್ದಾರೆ.
ಸಾಮಾಜಿಕ ಅಭಿವೃದ್ಧಿಗೆ ಭಾರೀ ದಾನ
ಗೌತಮ್ ಅದಾನಿ 10 ಸಾವಿರ ಕೋಟಿ ರೂಪಾಯಿ ಮೊತ್ತವನ್ನು ವಿಶ್ವದರ್ಜೆಯ ಆಸ್ಪತ್ರೆ, ವೈದ್ಯಕೀಯ ಕಾಲೇಜು, ಶಾಲೆಗಳು, ಉದ್ಯೋಗಾವಕಾಶಗಳು ಮತ್ತು ಜಾಗತಿಕ ಕೌಶಲ್ಯ ಅಭಿವೃದ್ಧಿ ಸಂಸ್ಥೆಗಳ ಸ್ಥಾಪನೆಗೆ ಮೀಸಲಿಟ್ಟಿದ್ದಾರೆ. ಈ ದಾನ ಮೊತ್ತವು ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಅವರ ಮದುವೆಯ ಖರ್ಚಿನ (5 ಸಾವಿರ ಕೋಟಿ) ಎರಡರಷ್ಟಾಗಿದೆ.
ದಿವ್ಯಾಂಗ ವಧುಗಳಿಗೆ ವಿಶೇಷ ನೆರವು
ಜೀತ್ ಅದಾನಿ ಮತ್ತು ದಿವಾ ಶಾ ಜೋಡಿ ಪ್ರತಿ ವರ್ಷ 500 ಅಂಗವಿಕಲ ವಧುಗಳಿಗೆ ತಲಾ 10 ಲಕ್ಷ ರೂಪಾಯಿ ನೆರವು ನೀಡಲು ನಿರ್ಧರಿಸಿದೆ. ಈ ಸೇವಾ ಪ್ರತಿಜ್ಞೆಯ ಭಾಗವಾಗಿ, ಜೀತ್ ಅದಾನಿ ಇತ್ತೀಚೆಗೆ 21 ಅಂಗವಿಕಲ ವಧುಗಳೊಂದಿಗೆ ಭೇಟಿಯಾಗಿ ಅವರ ಮದುವೆಗೆ ಸಹಾಯ ಹಸ್ತ ನೀಡಿದರು.ಇದನ್ನು ಓದಿ –ರಾಜ್ಯದಲ್ಲಿ 25 ಸಾವಿರ ಶಿಕ್ಷಕರ ನೇಮಕಾತಿ
ಮೌಲ್ಯಮಯ ವಿವಾಹ:
ಈ ಮದುವೆ ಕೇವಲ ಎರಡು ಕುಟುಂಬಗಳ ಒಕ್ಕೂಟವಲ್ಲ, ಸಮಾಜಕ್ಕಾಗಿ ಪ್ರೇರಣಾದಾಯಕ ಹೆಜ್ಜೆ. ಗೌತಮ್ ಅದಾನಿಯ ಈ ಔದಾರ್ಯವು ಹಲವಾರು ಸಾಮಾನ್ಯ ಜನರ ಬದುಕಿಗೆ ಬೆಳಕಾಗಲಿದೆ.


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು