March 11, 2026

Newsnap Kannada

The World at your finger tips!

highway , national , banglore

ಟೋಲ್ ತಪ್ಪಿಸುವ ವಾಹನ ಸವಾರರಿಗೆ ಬಿಗ್ ಶಾಕ್: ಬೆಂ-ಮೈ ಎಕ್ಸ್‌ಪ್ರೆಸ್‌ವೇ ಸರ್ವೀಸ್ ರಸ್ತೆ ಬಂದ್

Spread the love

ಬೆಂಗಳೂರು: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಟೋಲ್ ಪಾವತಿ ತಪ್ಪಿಸಿ ಹೋಗುತ್ತಿದ್ದ ವಾಹನ ಸವಾರರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಹೊಸ ನಿರ್ಧಾರದಿಂದ ಬಿಗ್ ಶಾಕ್ ನೀಡಿದೆ.

ಎಕ್ಸ್‌ಪ್ರೆಸ್‌ವೇನಲ್ಲಿ ಟೋಲ್ ಪಾವತಿಸದೆ ಸರ್ವೀಸ್ ರಸ್ತೆಯ ಮೂಲಕ ಸಂಚರಿಸುತ್ತಿದ್ದವರನ್ನು ತಡೆಗಟ್ಟಲು, ಹೆದ್ದಾರಿ ಪ್ರಾಧಿಕಾರ ಸರ್ವೀಸ್ ರಸ್ತೆಯನ್ನು ಬಂದ್ ಮಾಡಿದೆ.

ಸರ್ವೀಸ್ ರಸ್ತೆ ಮುಚ್ಚಿದ ಹೆದ್ದಾರಿ ಪ್ರಾಧಿಕಾರ

ಟೋಲ್ ಪಾವತಿಸದೆ ಮೈಸೂರಿನಿಂದ ಬೆಂಗಳೂರಿಗೆ ಹೋಗಲು ಸರ್ವೀಸ್ ರಸ್ತೆ ಬಳಸುತ್ತಿದ್ದ ವಾಹನ ಸವಾರರಿಗೆ ತೊಡಕು ಉಂಟಾಗುವಂತೆ, ಬಿಡದಿ ಬಳಿಯ ನಿರ್ಗಮನ ರಸ್ತೆ (ಎಕ್ಸಿಟ್) ಬಂದ್ ಮಾಡಲಾಗಿದೆ. ಇದರಿಂದಾಗಿ, ಹೆದ್ದಾರಿಯಿಂದ ಸರ್ವೀಸ್ ರಸ್ತೆಗೆ ಇರುವ ಸಂಪರ್ಕ ಕಡಿತಗೊಂಡಿದೆ.

ಈ ಕ್ರಮದ ಪರಿಣಾಮವಾಗಿ, ಬೆಂಗಳೂರಿಗೆ ಬರುವ ವಾಹನ ಸವಾರರು ಬಿಡದಿ ಬಳಿಯ ಶೇಷಗಿರಿಹಳ್ಳಿ ಟೋಲ್‌ನಲ್ಲಿ ಪಾವತಿ ಮಾಡಿಯೇ ಮುಂದುವರಿಯಬೇಕಾದ ಅನಿವಾರ್ಯತೆ ಎದುರಿಸಿದ್ದಾರೆ.ಇದನ್ನು ಓದಿ -ಲೋಕಾಯುಕ್ತ ದಾಳಿ: ನಕಲಿ ದಾಖಲೆಗಳೊಂದಿಗೆ ₹7.50 ಲಕ್ಷ ನಗದು ವಶ

ಸಾರ್ವಜನಿಕರಿಂದ ಆಕ್ರೋಶ

ನಿರ್ಧಾರಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಯಾವುದೇ ಮುನ್ಸೂಚನೆ ನೀಡದೇ, ಆಕಸ್ಮಿಕವಾಗಿ ಎಕ್ಸಿಟ್ ರಸ್ತೆ ಬಂದ್ ಮಾಡಿರುವುದು ಸೂಕ್ತವಲ್ಲ ಎಂದು ಅವರು ಹೇಳಿದ್ದಾರೆ. ಅಲ್ಲದೆ, ರಾಮನಗರದಿಂದ ಬೆಂಗಳೂರಿಗೆ ತೆರಳಲು ಹೆಚ್ಚಿನ ಟೋಲ್ ಪಾವತಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ಅಸಮಾಧಾನ ವ್ಯಕ್ತವಾಗಿದೆ.

error: Content is protected !!