March 8, 2026

Newsnap Kannada

The World at your finger tips!

KSRTC , UPI , Ticket

2025ರ BMTC ನೌಕರರ ಸಾಮಾನ್ಯ ವರ್ಗಾವಣೆ: ಮಾರ್ಗಸೂಚಿ ಪ್ರಕಟ

Spread the love

ಬೆಂಗಳೂರು: 2025ನೇ ಸಾಲಿನ BMTC ನೌಕರರ ಸಾಮಾನ್ಯ ವರ್ಗಾವಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಈ ಸಂಬಂಧ ಸಂಸ್ಥೆಯ ನೌಕರರ ವರ್ಗಾವಣೆ ನೀತಿ ಜಾರಿಗೆ ಬರುವುದಾಗಿ ತಿಳಿಸಲಾಗಿದೆ.

ವರ್ಗಾವಣೆಯ ಅರ್ಜಿ ಸಲ್ಲಿಸಲು ಅರ್ಹತೆಗಳು:

  1. ಅರ್ಜಿದಾರರು ಸೇವೆಯಲ್ಲಿ ಖಾಯಂಗೊಂಡಿರಬೇಕು.
  2. ಸಾಮಾನ್ಯ ವರ್ಗಾವಣೆಗಾಗಿ, ಪ್ರಸ್ತುತ ಕಾರ್ಯಸ್ಥಳದಲ್ಲಿ ಕನಿಷ್ಠ 2 ವರ್ಷ ಸೇವೆ ಸಲ್ಲಿಸಿರಬೇಕು.
  3. ಪರಸ್ಪರ ವರ್ಗಾವಣೆಗೆ, ಇಬ್ಬರು ಅರ್ಜಿದಾರರು ಪ್ರಸ್ತುತ ಕಾರ್ಯಸ್ಥಳದಲ್ಲಿ ಕನಿಷ್ಠ 1 ವರ್ಷ ಸೇವೆ ಸಲ್ಲಿಸಿರಬೇಕು.
  4. ಶಿಸ್ತು ಪ್ರಕರಣಗಳು ಅಥವಾ ಆರೋಪಣಾ ಪತ್ರ ಹೊಂದಿದ ನೌಕರರು ಅರ್ಹರಲ್ಲ.

ವಿಶೇಷ ಆದ್ಯತೆ ನೀಡುವ ಪ್ರಕರಣಗಳು:

  1. ತೀವ್ರ ಅನಾರೋಗ್ಯದ ಪ್ರಕರಣಗಳು.
  2. 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಹೊಂದಿರುವ ವಿಧವೆ/ವಿಧುರ.
  3. ಶೇಕಡಾ 40 ಅಥವಾ ಹೆಚ್ಚಿನ ಅಂಗವಿಕಲತೆ ಹೊಂದಿರುವವರು.
  4. ಪತಿ-ಪತ್ನಿ ಸರ್ಕಾರಿ ನೌಕರರ ಪರಿ.
  5. ನಿವೃತ್ತಿಗೆ 2 ವರ್ಷ ಅಥವಾ ಅದಕ್ಕಿಂತ ಕಡಿಮೆ ಅವಧಿ ಇರುವವರು.

ವರ್ಗಾವಣೆಯ ಅರ್ಜಿ ಸಲ್ಲಿಸುವ ವಿಧಾನ:

  • ಅರ್ಜಿಗಳನ್ನು ಕಡ್ಡಾಯವಾಗಿ EMS login ಮೂಲಕ ಆನ್‌ಲೈನ್ ಮೂಲಕ ಸಲ್ಲಿಸಬೇಕು.
  • ಅರ್ಜಿಗಳನ್ನು 2025ರ ಫೆಬ್ರವರಿ 1ರಿಂದ 28ರ ಸಂಜೆ 6 ಗಂಟೆ ಒಳಗಾಗಿ ಸಲ್ಲಿಸಬೇಕು.
  • ಮೂರು ಆಧ್ಯತೆ ಸ್ಥಳಗಳನ್ನು ಕಡ್ಡಾಯವಾಗಿ ನಮೂದಿಸಬೇಕು.
  • ಅರ್ಜಿ ಸಲ್ಲಿಸಿದ ನಂತರ ಮುದ್ರಿತ ಪ್ರತಿಯನ್ನು ತಿದ್ದುಪಡಿಯೊಂದಿಗೆ ಘಟಕ ವ್ಯವಸ್ಥಾಪಕರಿಗೆ ಸಲ್ಲಿಸಬೇಕು.ಇದನ್ನು ಓದಿ –ಭೀಕರ ದುರಂತ : ಕರ್ನಾಟಕ ಎಕ್ಸ್‌ಪ್ರೆಸ್ ರೈಲು ಹರಿದು 11 ಮಂದಿ ಸಾವು

ವಿಭಿನ್ನ ಅನಾರೋಗ್ಯ ಮತ್ತು ವಿಶೇಷ ಕಾರಣಗಳ ಆಧಾರದಲ್ಲಿ ಅರ್ಹತೆಗಳನ್ನು ಪರಿಶೀಲಿಸಿ, ನಿಗದಿಪಡಿಸಿದ ಮಾರ್ಗಸೂಚಿ ಪ್ರಕಾರವೇ ವರ್ಗಾವಣೆಯನ್ನು ಪೂರ್ಣಗೊಳಿಸಲಾಗುವುದು.

error: Content is protected !!