March 10, 2026

Newsnap Kannada

The World at your finger tips!

Rain , storm , yellow alert

ಬೆಂಗಳೂರಿನಲ್ಲಿ ಬೆಳಗಿನ ಮಳೆ: ರಾಜ್ಯದಲ್ಲಿ ವರುಣನ ಆರ್ಭಟ, ಹವಾಮಾನ ಮಾಹಿತಿ

Spread the love

ಬೆಂಗಳೂರು: ಸೂರ್ಯೋದಯಕ್ಕೂ ಮುನ್ನವೇ ಸಿಲಿಕಾನ್ ಸಿಟಿಯಲ್ಲಿ ಮಳೆಯಾಗಿದ್ದು, ತಂಪಾದ ವಾತಾವರಣಕ್ಕೆ ನಗರ ಸಾಕ್ಷಿಯಾಗಿದೆ.

ಬೆಳಗ್ಗೆ 6 ಗಂಟೆಯಿಂದ ಚಾಮರಾಜಪೇಟೆ, ರಾಜಾಜಿನಗರ, ಶಾಂತಿನಗರ, ಕೆಆರ್ ಮಾರುಕಟ್ಟೆ, ವಿಜಯನಗರ, ಯಶವಂತಪುರ, ಕುಮಾರಸ್ವಾಮಿ ಲೇಔಟ್, ಮಾದವಾರ ಸೇರಿದಂತೆ ನಗರದ ಹಲವೆಡೆ ಮಳೆಯಾಗಿದೆ. ಬಂಗಾಳಕೊಲ್ಲಿಯಲ್ಲಿ ವಾಯುಬಾರ ಕುಸಿತದ ಪರಿಣಾಮವಾಗಿ ರಾಜ್ಯದ ಹಲವೆಡೆ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.

ಈ ಮುನ್ಸೂಚನೆಯ ಪ್ರಕಾರ, ಬೆಂಗಳೂರು ಸೇರಿದಂತೆ ದಕ್ಷಿಣ ಕನ್ನಡ, ಕೊಡಗು, ಮೈಸೂರು, ಚಾಮರಾಜನಗರ, ರಾಮನಗರ, ಮಂಡ್ಯ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಕೋಲಾರ ಮತ್ತು ಹಾಸನ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.ಇದನ್ನು ಓದಿ –ನಟ ಸೈಫ್ ಅಲಿ ಖಾನ್‌ಗೆ ಚಾಕು ಇರಿದ ಆರೋಪಿಯ ಬಂಧನ

ಮಳೆಯ ಕಾರಣವಾಗಿ ಮುಂಜಾನೆಯ ವಾಕಿಂಗ್‌ಗೆ ತೆರಳಿದ್ದವರು ಹಾಗೂ ದಿನ ನಿತ್ಯದ ಕೆಲಸಗಳಿಗೆ ಹೊರಟಿದ್ದವರು ತೊಂದರೆ ಅನುಭವಿಸಿದ್ದಾರೆ. ವಾಹನ ಸವಾರರು ಮಳೆಯಿಂದಾಗಿ ಸಮಸ್ಯೆಗೊಳಗಾದರೆ, ನಗರದಲ್ಲಿ ಚಳಿಯ ತೀವ್ರತೆಯೂ ಹೆಚ್ಚಾಗಿದೆ.

error: Content is protected !!