January 14, 2026

Newsnap Kannada

The World at your finger tips!

icc trophy

ICC ಚಾಂಪಿಯನ್ಸ್ ಟ್ರೋಫಿ 2025: ಭಾರತ ತಂಡದ ಘೋಷಣೆ ಹಾಗೂ ವೇಳಾಪಟ್ಟಿ

Spread the love

ICC ಚಾಂಪಿಯನ್ಸ್ ಟ್ರೋಫಿ 2025: ಫೆಬ್ರವರಿ 19 ರಿಂದ ಆರಂಭಗೊಳ್ಳಲಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಗಾಗಿ ಭಾರತ ಕ್ರಿಕೆಟ್ ಮಂಡಳಿ (ಬಿಸಿಸಿಐ) ಭಾರತ ತಂಡವನ್ನು ಶನಿವಾರ (ಜನವರಿ 18) ಅಧಿಕೃತವಾಗಿ ಘೋಷಿಸಿದೆ.

ಟೀಮ್ ಇಂಡಿಯಾವನ್ನು ಅನುಭವಿ ನಾಯಕ ರೋಹಿತ್ ಶರ್ಮಾ ಮುನ್ನಡೆಸಲಿದ್ದು, ಯುವ ಆಟಗಾರ ಶುಭಂ ಗಿಲ್ ಅವರನ್ನು ಉಪನಾಯಕರಾಗಿ ನೇಮಿಸಲಾಗಿದೆ. ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸೋಲಿನ ನಂತರ, ಬಿಸಿಸಿಐ ಈ ಆಯ್ಕೆಯಲ್ಲಿ ಸಾಕಷ್ಟು ಅಳೆದು ತೂಗಿ ಅಂತಿಮ 15 ಆಟಗಾರರನ್ನು ತಂಡದಲ್ಲಿ ಸೇರಿಸಿದೆ.

ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಭಾರತ ತಂಡ:
ರೋಹಿತ್ ಶರ್ಮಾ (ನಾಯಕ), ಶುಭಂ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರಿಷಭ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ವಾಷಿಂಗ್ಟನ್ ಸುಂದರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ಯಶಸ್ವಿ ಜೈಸ್ವಾಲ್.

ಟೀಮ್ ಇಂಡಿಯಾ ಗುಂಪು ಹಂತದ ಪಂದ್ಯಗಳು:
ಈ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಭಾಗವಹಿಸುತ್ತಿದ್ದು, ಟೀಮ್ ಇಂಡಿಯಾ ಪಾಕಿಸ್ತಾನ, ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶದೊಂದಿಗೆ ಗುಂಪು-ಎಯಲ್ಲಿ ಸೇರಿದೆ. ಗುಂಪು ಹಂತದಲ್ಲಿ ಟೀಮ್ ಇಂಡಿಯಾ ಮೂರು ಪಂದ್ಯಗಳನ್ನು ಆಡಲಿದ್ದು, ಇದರ ವೇಳಾಪಟ್ಟಿಯನ್ನು ಕೆಳಗಿನಂತೆ ಪ್ರಕಟಿಸಲಾಗಿದೆ:

  1. ಫೆಬ್ರವರಿ 20: ಭಾರತ vs ಬಾಂಗ್ಲಾದೇಶ
  2. ಫೆಬ್ರವರಿ 23: ಭಾರತ vs ಪಾಕಿಸ್ತಾನ
  3. ಮಾರ್ಚ್ 2: ಭಾರತ vs ನ್ಯೂಜಿಲೆಂಡ್

ಮುಂದಿನ ಹಂತಗಳು:
ಗುಂಪು ಹಂತದ ಪಂದ್ಯಗಳ ನಂತರ, ಉನ್ನತ 4 ತಂಡಗಳು ಸೆಮಿಫೈನಲ್‌ಗೆ ಪ್ರವೇಶಿಸಲಿದ್ದು, ನಂತರ ಫೈನಲ್ ಪಂದ್ಯವು ಚಾಂಪಿಯನ್ ಅನ್ನು ನಿರ್ಧರಿಸಲಿದೆ.ಆಫ್ರಿಕಾ ಮೂಲದ ಡ್ರಗ್ ಪೆಡ್ಲರ್ ಬಂಧನ: 48 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ

ಭಾರತ ತಂಡ ತನ್ನ ಶ್ರೇಷ್ಠ ಪ್ರದರ್ಶನದೊಂದಿಗೆ ಟೂರ್ನಿಯಲ್ಲಿ ಯಶಸ್ವಿಯಾಗಲಿದ್ದೇವೆ ಎಂಬ ನಿರೀಕ್ಷೆ ಇರುವಂತೆಯೇ, ಅಭಿಮಾನಿಗಳು ಸದ್ದುಮದ್ದು ಮಾಡುತ್ತಿದ್ದಾರೆ.

error: Content is protected !!