ಬೆಂಗಳೂರು: ರಾಜ್ಯ ಮಂಡಳಿಯ ಸತ್ರದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಸದಸ್ಯ ಸಿ.ಟಿ. ರವಿ ಆಕ್ಷೇಪಾರ್ಹ ಪದ ಬಳಕೆ ಮಾಡಿರುವುದು ದೃಢಪಟ್ಟಿದೆ ಎಂದು CID ಮೂಲಗಳು ತಿಳಿಸಿವೆ. ಈ ಸಂಬಂಧ ಅಸಲಿ ವೀಡಿಯೋ ಸಿಐಡಿಗೆ ಲಭ್ಯವಾಗಿದೆ.
ಸಿ.ಟಿ. ರವಿ ಅವರ ವಾಯ್ಸ್ ಸ್ಯಾಂಪಲ್ ಪಡೆಯಲು ಸಿಐಡಿ ಪ್ರಯತ್ನಿಸಿತ್ತು. ಆದರೆ, ಅವರು ಅದಕ್ಕೆ ನಿರಾಕರಿಸಿದ ನಂತರ, ಡಿಪಿಎಆರ್ (ರಾಜ್ಯ ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆ) ನಿಂದ ಅಸಲಿ ವೀಡಿಯೋವನ್ನು ಸಿಐಡಿ ವಶಕ್ಕೆ ಪಡೆದಿತು.
ಬೆಳಗಾವಿ ಅಧಿವೇಶನದ ವೇಳೆ ಮೇಲ್ಮನೆಯಲ್ಲಿ ನಡೆದ ಘಟನೆಯ ಕುರಿತು ಹೆಚ್ಚಿನ ಮಾಹಿತಿ ಪಡೆಯಲು, ಸಿಐಡಿ ಡಿಪಿಎಆರ್‌ಗೆ ವೀಡಿಯೋ ಮತ್ತು ಆಡಿಯೋ ದಾಖಲೆ ನೀಡುವಂತೆ ಮನವಿ ಮಾಡಿತ್ತು.
ಈ ಅರ್ಜಿಯಂತೆ, ಸದನದಲ್ಲಿ ಚಿತ್ರೀಕರಿಸಲಾಗಿದ್ದ 4 ಗಂಟೆಗಳ ವೀಡಿಯೋವನ್ನು ಸಿಐಡಿಗೆ ಸಲ್ಲಿಸಲಾಗಿದೆ.ಸುಮಲತಾ ಆಪ್ತ ಬೇಲೂರು ಸೋಮು ಕಾಂಗ್ರೆಸ್ ಗೆ ಸೇರ್ಪಡೆ
ಈ ಪ್ರಕರಣದ ಕುರಿತು ಮುಂದಿನ ತನಿಖೆ ಸಿಐಡಿ ನಡೆಸುತ್ತಿದ್ದು, ಅಪರೂಪದ ಪ್ರಕರಣವಾಗಿರುವ ಈ ಘಟನೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು