January 15, 2025

Newsnap Kannada

The World at your finger tips!

womens cricket team

ಭಾರತೀಯ ಮಹಿಳಾ ಕ್ರಿಕೆಟ್‌ ತಂಡದ ಐತಿಹಾಸಿಕ ಸಾಧನೆ: ಗರಿಷ್ಠ ರನ್‌ ಹಾಗೂ ಭರ್ಜರಿ ಗೆಲುವು

Spread the love

ರಾಜ್‌ಕೋಟ್: ಐರ್ಲೆಂಡ್‌ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಭಾರತೀಯ ಮಹಿಳಾ ಕ್ರಿಕೆಟ್‌ ತಂಡ ಇತಿಹಾಸ ನಿರ್ಮಿಸಿದೆ. 50 ಓವರ್‌ಗಳಲ್ಲಿ ಕೇವಲ 5 ವಿಕೆಟ್‌ ಕಳೆದು 435 ರನ್‌ ಗಳಿಸಿ, 304 ರನ್‌ಗಳ ಅಂತರದಿಂದ ಐರ್ಲೆಂಡ್‌ ತಂಡವನ್ನು ಮಣಿಸಿ, ಮೂರು ಪಂದ್ಯಗಳ ಸರಣಿಯನ್ನು ಕ್ಲೀನ್‌ಸ್ವೀಪ್‌ ಮಾಡಿದೆ.

ಭಾರತದ ದಾಂಡಿಗಾಟ:
ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್‌ ಅಸೋಸಿಯೇಷನ್‌ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಭಾರತ 50 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 435 ರನ್‌ ಬಾರಿಸಿತು. ಐರ್ಲೆಂಡ್‌ ತಂಡಕ್ಕೆ 436 ರನ್‌ಗಳ ಬೃಹತ್‌ ಗುರಿಯನ್ನು ನೀಡಿದ ಭಾರತ, ಅದನ್ನು ತಡೆಯುವುದರಲ್ಲಿ ಯಶಸ್ವಿಯಾಯಿತು. ಐರ್ಲೆಂಡ್‌ 131 ರನ್‌ಗಳಲ್ಲೇ ಆಲೌಟ್‌ ಆಗಿ ಪರಾಭವ ಕಂಡಿತು.

ಸ್ಮೃತಿ-ಪ್ರತಿಕಾ ಜೋಡಿಯ ಅದ್ಭುತ ಆಟ:
ಆರಂಭಿಕರಾಗಿ ಕಣಕ್ಕಿಳಿದ ಪ್ರತೀಕಾ ರಾವಲ್‌ ಮತ್ತು ಸ್ಮೃತಿ ಮಂಧಾನ ತಮ್ಮ ಶತಕಗಳ ಮೂಲಕ ಪ್ರೇಕ್ಷಕರಿಗೆ Treat ನೀಡಿದರು. ಈ ಜೋಡಿ ಮೊದಲ ವಿಕೆಟ್‌ಗೆ 233 ರನ್‌ ಜೊತೆಯಾಟವನ್ನು ನೀಡಿತು.

  • ಪ್ರತೀಕಾ ರಾವಲ್: 129 ಎಸೆತಗಳಲ್ಲಿ 154 ರನ್‌ (20 ಬೌಂಡರಿ, 1 ಸಿಕ್ಸರ್‌).
  • ಸ್ಮೃತಿ ಮಂಧಾನ: 80 ಎಸೆತಗಳಲ್ಲಿ 135 ರನ್‌ (12 ಬೌಂಡರಿ, 7 ಸಿಕ್ಸರ್‌).

ಇವರಿಗೆ ರಿಚಾ ಘೋಷ್‌ (59 ರನ್‌), ತೇಜಲ್‌ ಹಸಬ್ನಿಸ್‌ (28 ರನ್‌), ಹರ್ಲಿನ್‌ ಡಿಯೋಲ್‌ (15 ರನ್‌), ದೀಪ್ತಿ ಶರ್ಮಾ (11 ರನ್‌), ಜೆಮಿಮಾ ರೊಡ್ರಿಗ್ಸ್‌ (4 ರನ್‌) ಅವರ ನೆರವೂ ಸಿಕ್ಕಿತು.

ಭಾರತದ ಹೊಸ ದಾಖಲೆಯ ಸಾರಾಂಶ:

  • ಭಾರತದ ಮಹಿಳಾ ಏಕದಿನ ಕ್ರಿಕೆಟ್‌ ಇತಿಹಾಸದಲ್ಲೇ ಈ 435 ರನ್‌ ಅತ್ಯಧಿಕ.
  • ಪುರುಷರ ತಂಡದ ದಾಖಲೆ (418 ರನ್‌, 2011) ಮೀರಿಸುವ ಸಾಧನೆ.

ಐತಿಹಾಸಿಕ ಜಯದ ಅನ್ವಯ:
ಭಾರತೀಯ ಮಹಿಳಾ ತಂಡ 304 ರನ್‌ಗಳ ಅಂತರದಲ್ಲಿ ಗೆದ್ದು, ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಧಿಕ ಅಂತರದ ಗೆಲುವು ಸಾಧಿಸಿದ 7ನೇ ತಂಡವಾಗಿದೆ.ಇದನ್ನು ಓದಿ –ಮಂಡ್ಯ: ಕಾವೇರಿ ನದಿಯಲ್ಲಿ ಮುಳುಗಿ ಬಿ.ಇ ವಿದ್ಯಾರ್ಥಿ ದುರ್ಮರಣ

ವಿಶ್ವದ 4ನೇ ಸ್ಥಾನ:
ಒಂದು ಇನ್ನಿಂಗ್ಸ್‌ನಲ್ಲಿ ಅತ್ಯಧಿಕ ರನ್‌ ಗಳಿಸಿದ ವಿಶ್ವದ 4ನೇ ಮಹಿಳಾ ತಂಡವಾಗಿ ಭಾರತ ಹೊರಹೊಮ್ಮಿದೆ. ಈ ಪೈಕಿ ನ್ಯೂಜಿಲೆಂಡ್‌ (491, 455, 440 ರನ್‌) ಮೊದಲ ಮೂರು ಸ್ಥಾನಗಳಲ್ಲಿ ನಿಂತಿದೆ.

Copyright © All rights reserved Newsnap | Newsever by AF themes.
error: Content is protected !!