ಸೂರ್ಯನ ಕಾಂತಿಯ ಹೊತ್ತು ಬಂದಿತೊ ಸಂಕ್ರಾಂತಿ
ಎಲ್ಲರ ಮನದಲಿ ಮೂಡಿತು ಸಂಭ್ರಮದ ಕ್ರಾಂತಿ
ಉತ್ತರಾಯಣ ನಮಗೆ ಪುಣ್ಯದಾ ಕಾಲಾ
ಚಿಣ್ಣರು ಹಾರಿಸುತಿರೆ ಪಟಗಳಾ ಸಾಲಾ
ಎತ್ತುಗಳ ಸಿಂಗಾರ ನೋಡುವುದೇ ಚಂದಾ
ಬೆಚ್ಚನೆಯ ಕಿಚ್ಚು ಹಾಯಿಸಿದ ಅಂದಾ
ಧಾನ್ಯಗಳ ರಾಶಿಗೆ ಪೂಜೆಯನು ಮಾಡೋಣ
ವರುಷದಾ ಮೊದಲ ಹರುಷವನು ಕಾಣೋಣ
ಮಕರದೆಡೆಗೆ ನೇಸರನು ಹೊಸ ಹೆಜ್ಜೆಯನಿರಿಸೀ
ಸುಂದರ ನಾಳೆಯ ತಂದ ಸಂತಸದಿ ಹರಸಿ
ಹೊಲಗದ್ದೆಗಳು ಹಾಸಿವೆ ಹಸಿರಿನಾ ಸೆರಗಾ
ಸುಮಗಳು ರಂಗಾಗಿ ನೀಡಿವೆ ಹೊಸ ಮೆರುಗಾ
ಎಳ್ಳುಬಾಳೆ ಕಬ್ಬು ಊರಿಗೆಲ್ಲಾ ಹಂಚಿ
ಒಳ್ಳೆಯ ಮಾತಾಡಿ ವಿರಸವಾ ಕಳಚಿ
ರೂಪ ಮಂಜುನಾಥ
ಹೊಳೆನರಸೀಪುರ
More Stories
ಕೆನರಾ ಬ್ಯಾಂಕ್ನಲ್ಲಿ 60 ಹುದ್ದೆಗಳಿಗೆ ಅರ್ಜಿ ಆಹ್ವಾನ
ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ
ತಿರುಪತಿ ತಿಮ್ಮಪ್ಪನ ಚಿನ್ನ ಕದಿಯಲು ಹೋಗಿ ಸಿಕ್ಕಿಬಿದ್ದ ಟಿಟಿಡಿ ನೌಕರ