ಮಂಡ್ಯ: ಸಕ್ಕರಿನಾಡು ಮಂಡ್ಯ ಜಿಲ್ಲೆಯ ರೈತರನ್ನು ವಕ್ಫ್ ಭೂಮಿ ವಿವಾದ ಇನ್ನೂ ಕಾಡುತ್ತಲೇ ಇದೆ. ಹಲವು ರೈತರ ಆರ್‌ಟಿಸಿಯಲ್ಲಿ “ವಕ್ಫ್ ಆಸ್ತಿ” ಎಂದು ಉಲ್ಲೇಖವಾಗಿದ್ದು, ಈ ವಿಚಾರ ರೈತರ ಆತಂಕಕ್ಕೆ ಕಾರಣವಾಗಿದೆ. ಈ ಕಾರಣದಿಂದ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಶ್ರೀರಂಗಪಟ್ಟಣ ಬಂದ್‌ಗೆ ಜನವರಿ 20ರಂದು ಕರೆ ನೀಡಲಾಗಿದೆ.
ಶ್ರೀರಂಗಪಟ್ಟಣ ತಾಲೂಕಿನಲ್ಲಿ ವಕ್ಫ್ ಭೂಮಿ ವಿವಾದ ಹೊಸದಾಗಿ ಹೊಮ್ಮಿದ ವಿಚಾರವಲ್ಲ. ತಾಲ್ಲೂಕಿನ ಕಿರಂಗೂರು, ಶೆಟ್ಟಿಹಳ್ಳಿ, ಬಾಬುರಾಯನಕೊಪ್ಪಲು, ದರಸಕುಪ್ಪೆ ಸೇರಿದಂತೆ ಹಲವು ಗ್ರಾಮಗಳಲ್ಲಿ 50ಕ್ಕೂ ಹೆಚ್ಚು ರೈತರ ಜಮೀನುಗಳ ಪಹಣಿಯಲ್ಲಿ, ಸ್ವಾಧೀನದಾರರ ಹೆಸರಿದ್ದರೂ, ಋಣ ಕಲಂನಲ್ಲಿ “ಕರ್ನಾಟಕ ರಾಜ್ಯ ವಕ್ಫ್ ಮಂಡಳಿ” ಎಂದು ನಮೂದಿಸಲಾಗಿದೆ. ಸಾಮಾನ್ಯವಾಗಿ, ಜಮೀನು ಮೇಲೆ ಸಾಲ ಇದ್ದಲ್ಲಿ ಅಥವಾ ಕ್ರಯ ಪ್ರಕ್ರಿಯೆ ನಡೆದಿದ್ದರೆ ಮಾತ್ರ ಋಣ ಕಲಂನಲ್ಲಿ ಬ್ಯಾಂಕ್ ಅಥವಾ ವ್ಯಕ್ತಿಯ ಹೆಸರನ್ನು ಉಲ್ಲೇಖಿಸಲಾಗುತ್ತದೆ. ಆದರೆ 2014-15ರಿಂದ ಇದು ಬದಲಾಗಿದ್ದು, ರೈತರ ಜಮೀನಿನಲ್ಲಿ “ವಕ್ಫ್ ಆಸ್ತಿ” ಎಂದು ನೋಂದಾವಣೆಯಾಗಿದೆ.
ರೈತರ ಜಮೀನುಗಳ ಜೊತೆಗೆ, ಸರ್ಕಾರಿ ಶಾಲೆಗಳು, ಪುರಾತತ್ವ ಇಲಾಖೆಯ ಆಸ್ತಿಗಳು ಮತ್ತು ಪಾರಂಪರಿಕ ಕಟ್ಟಡಗಳ ಮೇಲೂ ವಕ್ಫ್ ಮಂಡಳಿಯ ಕಣ್ಣು ಬಿದ್ದಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಬೆಳವಣಿಗೆಯಿಂದ ಜಿಲ್ಲೆಯ ರೈತ ಸಮುದಾಯದ ಆತಂಕ ಹೆಚ್ಚಾಗಿದೆ.ಇದನ್ನು ಓದಿ –ಪ್ರತಿಸ್ಪಂದಿಸಿ ಆದರೆ ಪ್ರತಿಕ್ರಿಯಿಸಬೇಡಿ
ಈ ವಿವಾದವನ್ನು ಖಂಡಿಸಿ ಶ್ರೀರಂಗಪಟ್ಟಣದಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳ, ರೈತಸಂಘ, ಮತ್ತು ಮಂಡ್ಯ ರಕ್ಷಣಾ ವೇದಿಕೆ ಸೇರಿ ಹಲವು ಸಂಘಟನೆಗಳು ಬಂದ್‌ಗೆ ಕರೆ ನೀಡಿವೆ. ಜನವರಿ 20ರಂದು ರೈತರು ತಮ್ಮ ಜಾನುವಾರುಗಳೊಂದಿಗೆ ರಸ್ತೆಗಿಳಿಯಲು ಸಿದ್ಧತೆ ನಡೆಸಿದ್ದಾರೆ.
More Stories
BCCI ನೂತನ ಕಾರ್ಯದರ್ಶಿಯಾಗಿ ದೇವಜಿತ್ ಸೈಕಿಯಾ ಆಯ್ಕೆ
ಹುಟ್ಟುಹಬ್ಬದ ದಿನವೇ ಬಾಲಕನ ದುರ್ಮರಣ
KPSC ಪರೀಕ್ಷೆಗಳಲ್ಲಿ ಕನ್ನಡ ದೋಷಗಳ ವಿವಾದ – ಮರುಪರೀಕ್ಷೆಗೆ ಪ್ರಬಲ ಒತ್ತಾಯ